ನಗೆಮೊಗ

ದೊಡ್ಡ ಮಳಿಗೆಗಳಲ್ಲಿ ಬಾರ್ಕೋಡ್ ರೀಡ್ ಮಾಡಿ ಬಿಲ್ ಮಾಡುವುದರಿಂದಾರಂಭಿಸಿ, ಸಿಡಿ ಪ್ಲೇಯರ್, ಕಂಪ್ಯೂಟರ್ ಪ್ರಿಂಟರ್ಸ್ ಮೊದಲಾಗಿ ಎಲ್ಲಾ ಕ್ಷೇತ್ರಗಳಲ್ಲೂ ಲೇಸರ್ ಬಳಕೆ ಕಾಣ್ತೀವಿ. ಲೇಸರ್ ಇಲ್ಲದೆ ಕೆಲಸ ನಡೆಯಲ್ಲ ಅನ್ನುವ ಸ್ಥಿತಿ ಬಂದಿದೆ. ದಿನನಿತ್ಯದ ಬಳಕೆಯ ಜೊತೆ ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲೂ ಲೇಸರ್ ಈಗ ಅನಿವಾರ್ಯ. ಲೇಸರ್ ಬಳಸಿ ನಡೆಸುವ ಚಿಕಿತ್ಸೆಗಳಿಂದಾಗಿ ರಕ್ತ ನಷ್ಟ, ಉರಿಯೂತ, ನೋವು, ಸರ್ಜರಿಯ ಗುರುತು ಯಾವುದೂ ಈಗ ಇರಬೇಕಿಲ್ಲ. ನೇತ್ರ ಚಿಕಿತ್ಸೆಯಲ್ಲಿ ಹೆಸರು ಮಾಡಿರುವ ಲೇಸರ್ ಚಿಕಿತ್ಸೆ, ಈಗ ದಂತ ಚಿಕಿತ್ಸೆಗೂ ಕಾಲಿಟ್ಟಿದೆ.
ಲೇಸರ್ ಬಳಸಿ ನಡೆಸುವ ದಂತ ಶಸ್ತ್ರ ಚಿಕಿತ್ಸೆಯಲ್ಲಿ ಅನಸ್ತೇಶಿಯ ಬಳಸಬೇಕಾಗುವುದಿಲ್ಲ. ಸಾಫ್ಟ್ ಟಿಶ್ಯೂ ಡೆಂಟಲ್ ಲೇಸರ್ ಬಳಸಿ ನಡೆಸುವ ಪ್ರೊಸೀಜರ್ಗಳಲ್ಲಿ ಹೊಲಿಗೆಯ ಅವಶ್ಯಕತೆಯಿಲ್ಲ. ರಕ್ತ ನಷ್ಟ ಇಲ್ಲ. ಲೇಸರ್ನ ಶಕ್ತಿಯುತ ಬೀಮ್ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಲೇಸರ್ ಬೀಮ್ ಬಳಕೆಯಿಂದ ಸ್ಟೆರಿಲೈಜ್ ಆಗಿ, ಸರ್ಜರಿ ನಂತರದ ಸೋಂಕು ತಡೆಯಬಹುದು. ಲೇಸರ್ ಬಳಕೆಯಲ್ಲೂ ಹೊಸ ಆವಿಷ್ಕಾರಗಳಾಗಿವೆ. ಹಾರ್ಡ್ ಟಿಶ್ಯೂ ಲೇಸರನ್ನು ಬಳಸುವ ಸಂದರ್ಭಗಳು- ಹಲ್ಲು ಹುಳುಕಾದಾಗ ಸರ್ಜರಿಯಿಲ್ಲದೆ ಚಿಕಿತ್ಸೆ ನೀಡಲು, ಹಲ್ಲಿನ ಕ್ಯಾವಿಟಿ ಕತ್ತರಿಸುವಾಗ ಹೆಚ್ಚಿನ ಡ್ಯಾಮೇಜ್ ತಡೆಯಲು. ಲೇಸರ್ ಬಳಸಿ ನಡೆಸಿದ ಫಿಲ್ಲಿಂಗ್ ದೀರ್ಘಕಾಲ ಬಾಳುತ್ತದೆ. ಸರ್ಜರಿ ಬಳಿಕ ಇರಬಹುದಾದ ಸೆನ್ಸಿಟಿವಿಟಿ, ಲೇಸರ್ ಚಿಕಿತ್ಸೆ ನಂತರ ಇರುವುದಿಲ್ಲ. ದಂತಕ್ಷಯದ ಮರುಕಳಿಕೆ ಕಡಿಮೆ. ಚಿಕಿತ್ಸೆ ಬಳಿಕ ನೋವು ಮಾಯ.
ಲೇಸರ್ ಎಷ್ಟು ಸುರಕ್ಷಿತ?
ಪ್ರಪಂಚದಾದ್ಯಂತ ನಡೆಸಲಾಗುತ್ತಿರುವ ಲೇಸರ್ ಚಿಕಿತ್ಸೆಯಲ್ಲಿ, ಇತರ ಅಂಗಾಂಗಗಳಿಗೆ ಡ್ಯಾಮೇಜ್ ಇಲ್ಲದ ಕಾರಣ, ಇದು ಅತ್ಯಂತ ಸುರಕ್ಷಿತ. ಲೇಸರ್ ಕಿರಣಗಳನ್ನು ಬರಿಗಣ್ಣಿನಿಂದ ನೋಡಲಾಗದ ಕಾರಣ ಸುರಕ್ಷಿತ ಕನ್ನಡಕ ಬಳಸಲಾಗುತ್ತದೆ. ಇದು ಸೂಕ್ಷ್ಮ ಚಿಕಿತ್ಸೆಯಾದ್ದರಿಂದ ನುರಿತ ವೈದ್ಯರ ಬಳಿಯೇ ಪಡೆಯಬೇಕು. ಟೆಕ್ನಿಕಲ್ ತೊಂದರೆಗಳು, ಕಟ್ಟಿಂಗ್ನ ಆಳದಲ್ಲಿ ವ್ಯತ್ಯಯ ಮುಂತಾದ ಕೆಲ ಅನನುಕೂಲಗಳಿದ್ದರೂ ಚಿಕಿತ್ಸೆ ಬಳಿಕ ಗಾಯ ಶೀಘ್ರವಾಗಿ ಗುಣವಾಗುತ್ತದೆ. ಸರ್ಜರಿ ನಂತರ ಗಾಯದ ಕಲೆಯಿರುವುದಿಲ್ಲ.
ಡೆಂಟಲ್ ಇಂಪ್ಲಾಂಟ್ ಬಳಿಕ ಡೆಂಟಿಸ್ಟ್ರಿಯಲ್ಲಿ, ಲೇಸರ್ ಚಿಕಿತ್ಸೆ ಅತಿ ದೊಡ್ಡ ಆವಿಷ್ಕಾರ. ಕಣ್ಣಿನ ಚಿಕಿತ್ಸೆಯಲ್ಲಿ ಹೆಸರು ಮಾಡಿರುವ ಲೇಸರ್ ಚಿಕಿತ್ಸೆ, ಡೆಂಟಿಸ್ಟ್ರಿಯಲ್ಲಿ ಬಳಕೆಯಾಗುತ್ತಿರುವುದು ಒಂದು ಮೈಲಿಗಲ್ಲು. ಕಾಸ್ಮೆಟಿಕ್ ಡೆಂಟಿಸ್ಟ್ರಿಯಲ್ಲಿ ಲೇಸರ್ ಬಳಕೆ ಬಂದಿರುವುದು ಮುಂದಿನ ಪೀಳಿಗೆಯ ವೈದ್ಯರಿಗೆ ವರವಾಗಿದೆ. ಆದರೆ, ಲೇಸರ್ ಚಿಕಿತ್ಸೆಗೊಳಗಾಗುವ ಮುನ್ನ ತಜ್ಞರಿಂದ ಸೂಕ್ತ ಸಲಹೆ ಪಡೆಯುವುದು, ನುರಿತ ವೈದ್ಯರಿಂದ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಅಂತಾರೆ ಲೇಸರ್ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಹನುಮಂತನಗರದ ರಾಜೀವ್ ಡೆಂಟಲ್ ಕೇರ್ ಸೆಂಟರ್ನ ಮೆಡಿಕಲ್ ಡೈರೆಕ್ಟರ್, ಹೆಸರಾಂತ ಮ್ಯಾಕ್ಸಿಲೋ ಫೇಶಿಯಲ್ ಸರ್ಜನ್ ಡಾ. ಶ್ರೀನಿಧಿ. ಹೆಚ್ಚಿನ ಮಾಹಿತಿಗೆ: 08026607252/7795586856
ಇವನ್ನು ಮಾಡ್ತಾರೆ
= ಎಂಡೋಡಾಂಟಿಕ್ಸ್
= ರೂಟ್ ಕೆನಾಲ್ ಚಿಕಿತ್ಸೆ
= ಪಲ್ಪೋಟೊಮಿ ಮಾಡುವಾಗ
= ಮಕ್ಕಳಲ್ಲಿ, ಇನ್ಫೆಕ್ಟ್ ಆಗಿರುವ ಕೊರೊನೆಲ್ ಪಲ್ಸ್ ತೆಗೆಯುವಾಗ
= ಮೇಲ್ಭಾಗದಲ್ಲಿ ಕಾಣುವ ಹಲ್ಲುಗಳ ಉದ್ದ ಹೆಚ್ಚಿಸಬೇಕಾದಲ್ಲಿ
= ಪೆರಿಯೋಡಾಂಟಿಕ್ಸ್ ಮಾಡುವಾಗ
= ಒಸಡಿನ ಒಳ ಆಳ ಭಾಗದ ಕ್ಲೀನಿಂಗ್ನಲ್ಲಿ
= ಒಸಡಿನ ಸರ್ಜರಿಯಿಂದ ಬಳಿಕ ಕೀಟಾಣುಗಳ ತಡೆಯಲ್ಲಿ
= ಕಾಸ್ಮೆಟಿಕ್ ಪ್ರೊಸೀಜರ್ನಲ್ಲಿ
= ಹಲ್ಲಿನ ಬಿಳುಪಿಗಾಗಿ ಬ್ಲೀಚಿಂಗ್ ಲೇಸರ್
= ಡೀ ಪಿಗ್ಮೆಂಟೇಷನ್- ಕಪ್ಪು ಕಲೆ ತೆಗೆಯಲು
= ಸ್ಮೈಲ್ ಡಿಸೈನ್ ಪ್ರೊಸೀಜರ್- ನಗುವಾಗ ಒಸಡಿನ ಭಾಗ ಅಡ್ಡಾದಿಡ್ಡಿಯಾಗಿ ಕಂಡುಬಂದಲ್ಲಿ, ಹಲ್ಲುಗಂಟಿರುವ ಒಸಡಿನ ಉದ್ದದಲ್ಲಿ ವ್ಯತ್ಯಯ ತರಲು.
= ಒಸಡಿನ ಮೇಲ್ಭಾಗದಲ್ಲಿ ಮೂಡುವ ಪದರಗಳನ್ನು ನಿವಾರಿಸಲು
= ಡೆಂಟಲ್ ಇಂಪ್ಲಾಂಟ್ನಲ್ಲಿ- ಕ್ರೌನ್ ಕೂರಿಸುವಾಗ
= ಡೀ ಸೆನ್ಸಿಟೈಸೇಷನ್- ಬಿಸಿ ಅಥವಾ ತಣ್ಣಗಿನ ಖಾದ್ಯ ಸೇವಿಸಿದಾಗ ಹಲ್ಲು ಜುಮುಗುಟ್ಟುವುದನ್ನು ತಡೆಯಲು.
= ಬಾಯಲ್ಲಿ ಪದೇ ಪದೆ ಉಂಟಾಗುವ ಅಲ್ಸರ್ ಗುಣಪಡಿಸಲು.
= ಗೀತಾ ಶ್ರೀನಿವಾಸನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


