ಸೇವೆಯೇ ನಿಜವಾದ ಧರ್ಮ
ವಿವೇಕಾನಂದರು ಶ್ರೀರಾಮಕೃಷ್ಣ ಮಹಾಸಂಘವನ್ನು ಕೊಲ್ಕತ್ತದಲ್ಲಿ ಸ್ಥಾಪಿಸಿದರು. ಇದರಡಿ ಸನ್ಯಾಸಿಗಳನ್ನು, ಯುವಶಿಷ್ಯರನ್ನು, ಸೇವಾಸಕ್ತ ಭಕ್ತರನ್ನು ಸಂಘಟಿಸಿದರು. ಮಾನವ ಕಲ್ಯಾಣಕ್ಕಾಗಿ ಸನ್ಯಾಸಿಗಳನ್ನು ಸಿದ್ಧಗೊಳಿಸಿ ವಿವಿಧೆಡೆ ಕಳುಹಿಸಿದರು. 1898ರ ಮೇನಲ್ಲಿ ಕೊಲ್ಕತ್ತಾದಲ್ಲಿ ಪ್ಲೇಗ್ ಮಾರಿ ತಾಂಡವವಾಡಿದಾಗ ಸ್ವತಃ ಸ್ವಾಮಿ ವಿವೇಕಾನಂದರು ಸೇವಾಕಾರ್ಯಗಳಿಗೆ ಮುಂದಾಗಿ 'ಶ್ರೀರಾಮಕೃಷ್ಣ ಮಿಷನ್ ಪ್ಲೇಗ್ ಸರ್ವೀಸ್' ಎಂಬ ಸೇವಾವಿಭಾಗವನ್ನು ತೆರೆದು ಕಾರ್ಯಪ್ರವೃತ್ತರಾದರು. ಬಡಜನರಿಗೆ ಧೈರ್ಯ ಕೊಡುವ ಉದ್ದೇಶದಿಂದ ಗುಡಿಸಲುಗಳಲ್ಲಿ ಉಳಿದುಕೊಂಡರು. ಕೊಳೆಗೇರಿಗಳನ್ನು ಶುಚಿಗೊಳಿಸಿದರು, ಕ್ರಿಮಿನಾಶಕ ಸಿಂಪಡಿಸಿದರು.. ಇದರಿಂದ ಪ್ಲೇಗ್ ಮಾರಿ ಬೇಗನೆ ಹತೋಟಿಗೆ ಬಂತು.
ಇದೇ ಸಮಯದಲ್ಲಿ ಸಂದರ್ಶಕರು ಸ್ವಾಮೀಜಿಯೊಡನೆ ಕ್ಷಾಮ ಪರಿಸ್ಥಿತಿ, ಜನರ ಅವಶ್ಯಕತೆ, ಅವುಗಳನ್ನು ಈಡೇರಿಸುವ ಬಗೆ ಕುರಿತಾಗಿ ಮಾತನಾಡಲು ಬಂದರು. ಕೊನೆಗೆ ಸಂದರ್ಶಕರಲ್ಲೊಬ್ಬ, 'ಸ್ವಾಮೀಜಿ, ಧರ್ಮದ ಕುರಿತಾಗಿ ನಿಮ್ಮಿಂದ ಅನೇಕ ವಿಷಯಗಳನ್ನು ಕೇಳಬಹುದೆಂಬ ಮಹದಾಸೆಯಿಂದ ಬಂದೆವು. ದುರದೃಷ್ಟವಶಾತ್ ನಮ್ಮ ಮಾತುಕತೆ ತೀರ ಸಾಧಾರಣ ವಿಷಯಗಳತ್ತ ತಿರುಗಿತು. ಇಂದಿನ ದಿನ ವ್ಯರ್ಥವಾಗಿ ಕಳೆದುಹೋಯಿತು' ಎಂದು ವಿಷಾದ ವ್ಯಕ್ತಪಡಿಸಿದ. ಆಗ ಸ್ವಾಮೀಜಿ, ಎಲ್ಲಿಯವರೆಗೆ ನನ್ನ ದೇಶದ ಒಂದು ನಾಯಿ ಕೂಡ ಅನ್ನವಿಲ್ಲದೆ ಇರುತ್ತದೆಯೋ ಅಲ್ಲಿಯವರೆಗೆ ಅದಕ್ಕೆ ಆಹಾರವಿತ್ತು ಪೂಜಿಸುವುದೇ ನನ್ನ ಪಾಲಿಗೆ ಧರ್ಮ. ಉಳಿದುದೆಲ್ಲ ಅಧರ್ಮ. 'ಸ್ವಾಮೀಜಿಯವರ ಈ ಮಾತುಗಳು ನನ್ನ ಆಂತರ್ಯವನ್ನೇ ಇರಿದವು. ನಿಜವಾದ ರಾಷ್ಟ್ರಪ್ರೇಮವೆಂದರೆ ಏನೆಂಬುದನ್ನು ಹಿಂದೆಂದೂ ಊಹಿಸದ ರೀತಿಯಲ್ಲಿ ಅಂದು ನಾನು ಕಂಡುಕೊಂಡೆ' ಎಂದು ಸಂದರ್ಶಕರು ಬರೆಯುತ್ತಾರೆ.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

