ಕಾರ್ ಪೂಲ್ ಮಾಡಿ
ಕಾರ್ ಪೂಲ್ ಮಾಡಿ, ಒಟ್ಟಾಗಿ ಪ್ರಯಾಣಿಸಿ. ಇದು ಸಿಲಿಕಾನ್ ಸಿಟಿಯ ನಗರ ಸಂಚಾರ ಪೊಲೀಸರು ಜಾರಿಗೆ ತಂದಿರುವ ಹೊಸ ...

ಕಾರ್ ಪೂಲ್ ಮಾಡಿ, ಒಟ್ಟಾಗಿ ಪ್ರಯಾಣಿಸಿ. ಇದು ಸಿಲಿಕಾನ್ ಸಿಟಿಯ ನಗರ ಸಂಚಾರ ಪೊಲೀಸರು ಜಾರಿಗೆ ತಂದಿರುವ ಹೊಸ ಯೋಜನೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವುದು ಈ ಕಾರ್ ಪೂಲ್ ಉದ್ದೇಶ.
ಸಿಲಿಕಾನ್ ಸಿಟಿಯಲ್ಲಿ ಪ್ರತಿ ಮನೆಯಲ್ಲಿ ಕನಿಷ್ಟ ಎರಡರಿಂದ ಮೂರು ವಾಹನಗಳು ಇರುತ್ತವೆ. ಅದರಲ್ಲೂ ಬಹುತೇಕ ಮಂದಿಯ ಮನೆಯಲ್ಲಿ ಕಾರು ಇರುವುದರಿಂದ, ಅವರು ದ್ವಿಚಕ್ರ ವಾಹನ ಬಿಟ್ಟು ಸಂಚರಿಸಲು ಕಾರುಗಳನ್ನು ಹೊರತೆಗೆದರೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲಿದೆ.
ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಲು ಒಂದು ಕಾರು ಬಳಸಿದರೆ ತೊಂದರೆಯಿಲ್ಲ. ಆದರೆ, ಒಬ್ಬ ವ್ಯಕ್ತಿ ಸಂಚರಿಸಲು ಕಾರನ್ನು ಬಳಸಲಾಗುತ್ತದೆ. ಹಾಗಾಗಿ ಒಬ್ಬೊಬ್ಬರು ಒಂದೊಂದು ಕಾರು ಬಳಸುವುದರಿಂದ ಸಹಜವಾಗಿ ವಾಹನ ದಟ್ಟಣೆ ಹೆಚ್ಚಲಿದೆ.
ಈ ಹಿನ್ನೆಲೆಯಲ್ಲಿ ಕಾರ್ ಪೂಲ್ ಆರಂಭಿಸಿದ್ದು, ಒಂದೇ ಬಡಾವಣೆಯಲ್ಲಿ ಇರುವ ಹಾಗೂ ಒಂದೇ ಕಚೇರಿಗೆ ಹೋಗಿ ಕೆಲಸ ಮಾಡುವ ಸಹೋದ್ಯೋಗಿಗಳು/ ಸಾಫ್ಟ್ವೇರ್ ಎಂಜಿನಿಯರ್ಗಳು/ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಒಂದೇ ಕಾರನ್ನು ಬಳಸಿದರೆ ಅನುಕೂಲವಾಗುತ್ತದೆ.
ಹೀಗೆ ಮಾಡುವುದರಿಂದ ವಾಹನ ದಟ್ಟಣೆ ಮಾತ್ರವಲ್ಲದೆ ಇಂಧನ ಉಳಿತಾಯವೂ ಆಗುತ್ತದೆ. ಪ್ರತಿನಿತ್ಯ ಈ ಕಾರ್ ಪೂಲ್ ಮಾಡದಿದ್ದರೂ ಸಹ ವಾರಕ್ಕೊಮ್ಮೆಯಾದರೂ ಕಾರ್ ಪೂಲ್ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಇದರಿಂದ ಸಮಯ, ಇಂಧನ, ಹಣ ಉಳಿತಾಯವಾಗುವುದರ ಜತೆಗೆ ಪರಿಸರವನ್ನೂ ಸ್ವಚ್ಛವಾಗಿಡಲು, ವಾಯು ಮಾಲಿನ್ಯ ತಡೆಗಟ್ಟಲು ಸಹಕರಿಸಿದಂತಾಗುತ್ತದೆ. ಬೇರೆ ನಗರಗಳಲ್ಲೂ ಇದನ್ನು ಅನುಸರಿಸಿದರೆ ಒಳಿತು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


