ನಖಕ್ಷತ, ದಂತಕ್ಷತ
ಚಳಿಗಾಲದಲ್ಲಿ ಗಾಯದ ಗುರುತುಗಳು ಬೇಗನೆ ಮಾಯುವುದಿಲ್ಲ. ಇನ್ನಷ್ಟು ಕೆಂಪಗಾಗಿ ಉರಿ ಉರಿಯುತ್ತಿರುತ್ತವೆ. ಅದರಲ್ಲೂ ನವವಿವಾಹಿತರ ಪಾಡು...

ಚಳಿಗಾಲದಲ್ಲಿ ಗಾಯದ ಗುರುತುಗಳು ಬೇಗನೆ ಮಾಯುವುದಿಲ್ಲ. ಇನ್ನಷ್ಟು ಕೆಂಪಗಾಗಿ ಉರಿ ಉರಿಯುತ್ತಿರುತ್ತವೆ. ಅದರಲ್ಲೂ ನವವಿವಾಹಿತರ ಪಾಡು ಕೇಳುವುದೇ ಬೇಡ. ಕೊಂಚ 'ಉಗ್ರಪ್ರೇಮಿ'ಗಳಾಗಿದ್ದರಂತೂ ಮುಗಿದೇ ಹೋಯಿತು. ಪ್ರೇಮದ ಕಾವು, ತೀವ್ರತೆಗಳು 'ಅಳಿಸಲಾರದ ಕಲೆ'ಗಳನ್ನು ಮೂಡಿಸುತ್ತವೆ. ಮನಸ್ಸಿನಲ್ಲಲ್ಲ, ದೇಹದಲ್ಲಿ. ಹಾಗಂತ ಕಾಳಿದಾಸ ಹೇಳುತ್ತಾನೆ.
ನಖಪದಚಿತಭಾಗಾನ್ ವೀಕ್ಷಮಾಣಾಃ ಸ್ತನಾಗ್ರಾನ್
ಅಧರಕಿಸಲಯಾಗ್ರಮ್ ದಂತಭಿನ್ನಮ್ ಸ್ಜ ೃಶಂತ್ಯಃ
ಅಭಿಮತರಸಮ್ ಏತಂ ನಂದ್ಯತ್ಯಃ ತರುಣ್ಯಃ
ಸವಿತುರ್ ಉದಯಕಾಲೇ ಭೂಷ್ಯಂತ್ಯಾನನಾನಿ
ಬೆಡಗಿಯರು ಬೆಳಗ್ಗೆ ಎದ್ದಿದ್ದಾರೆ. ತಮ್ಮನ್ನೇ ತಾವು ನೋಡಿಕೊಳ್ಳುತ್ತಾರೆ. ರಾತ್ರಿ ಮೈಮೇಲಿದ್ದ ವಸನವಿಭೂಷಣಗಳು ಎಲ್ಲೆಲ್ಲೋ ಚದುರಿವೆ. ಸ್ತನಗಳ ಮೇಲೆ ಪ್ರಿಯಕರ ಮೂಡಿಸಿದ ಉಗುರಿನ ಗುರುತು! ತುಟಿ ಉರಿಯುತ್ತಿದೆ. ಸವರಿಕೊಂಡು ನೋಡಿದರೆ ಇನಿಯನ ಹಲ್ಲು ಮೂಡಿಸಿದ ಗಾಯದ ಕಲೆ! ಅಕ್ಕಿಕಾಳಿನಂತಹ ಬಿಳಿಯ ದೇಹದಲ್ಲಿ ಕುಂಕುಮ ಬೆರೆಸಿದಂತೆ ಕೆಂಪು ಗುರುತುಗಳು! ಇದನ್ನು ನೋಡಿ ನಾಚಿ ಪೂರಾ ಕೆಂಪಾಗಿಬಿಟ್ಟ ಲಲನೆಯರು, ಇವನ್ನು ಮನೆಮಂದಿಯ ಕಣ್ಣಿನಿಂದ ಮರೆ ಮಾಡುವುದು ಹೇಗೆ ಎಂಬುದು ತಿಳಿಯದೆ, ಗಂಧಚಂದನಾದಿ ಪ್ರಸಾಧನಗಳಿಂದ ಅವುಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ.
ಉಗುರಿನ ಗುರುತಿಗೆ ನಖಕ್ಷತ, ಹಲ್ಲಿನ ಗುರುತಿಗೆ ದಂತಕ್ಷತ ಎಂಬ ಸುಂದರವಾದ ಹೆಸರನ್ನು ಕವಿಕುಲಲಲಾಮರು ತುಂಬ ಹಿಂದೆಯೇ ಕೊಟ್ಟಿದ್ದಾರೆ. ಅದು ಕೋಪದಿಂದ ಉಂಟಾಗುವುದಲ್ಲ, ಪ್ರೀತಿಯ ತೀವ್ರತೆಯಿಂದ ಉಂಟಾಗುವಂಥದು.
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


