ಬಿಸಿ ಹಾಲು
ನಾನು 'ಎಮ್ಮಿ' ಎಂಬ ಬೆಕ್ಕು. ಸಾತಕ್ಕನ ಮನೆಯಲ್ಲಿ ಅಮ್ಮ ಮತ್ತು ಇಬ್ಬರು ಒಡಹುಟ್ಟಿದವ ರೊಡನೆ ನಾನು ಸುಖವಾಗಿದ್ದೆ. ಕಿತ್ತು ತಿನ್ನುವ ಬಡತನದ ...
ನಾನು 'ಎಮ್ಮಿ' ಎಂಬ ಬೆಕ್ಕು. ಸಾತಕ್ಕನ ಮನೆಯಲ್ಲಿ ಅಮ್ಮ ಮತ್ತು ಇಬ್ಬರು ಒಡಹುಟ್ಟಿದವ ರೊಡನೆ ನಾನು ಸುಖವಾಗಿದ್ದೆ. ಕಿತ್ತು ತಿನ್ನುವ ಬಡತನದ ನಡುವೆಯೂ ಸಾತಕ್ಕ ಮತ್ತವರ ಮಕ್ಕಳು, ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಕುಡಿಯಲು ಮೂರು ಹೊತ್ತು ಬೆಚ್ಚಗಿನ ಹಾಲು ಕೊಟ್ಟು, ಎತ್ತಿ ಮುದ್ದಾಡಿದರು. ನಾವೆಲ್ಲರೂ ನೆಮ್ಮದಿಯಿಂದ ಇದ್ದೆವು.
ಅದೊಂದು ಕೆಟ್ಟ ಗಳಿಗೆಯಲ್ಲಿ, ಅದ್ಯಾರೋ ನನ್ನನ್ನು ಅಮ್ಮನಿಂದ ಬೇರ್ಪಡಿಸಿ ಗೋಣಿಚೀಲದಲ್ಲಿ ಉಸಿರುಕಟ್ಟುವಂತೆ ತುಂಬಿಕೊಂಡು ಅದೊಂದು ಬಂಗಲೆಯೊಳಗೆ ತಂದು ಬಿಟ್ಟರು. ನನ್ನ ಒಡಹುಟ್ಟಿದ ವರನ್ನೂ, ಅಮ್ಮನನ್ನು ಕಾಣದೆ ಭಯಭೀತಳಾಗಿದ್ದೆ. ಅಲ್ಲಿರುವವರ ಮಾತಿನಿಂದ ಅದು ಅರಮನೆಯ ಆಸ್ಥಾನದ ಪಂಡಿತರ ಮನೆಯೆಂಬುದು ನನಗೆ ಅರ್ಥವಾಯಿತು. ಹಸಿದಿದ್ದ ನನಗೆ ಒಂದು ಬಟ್ಟಲು ಹಾಲು ಕೊಟ್ಟರು. ಅಮ್ಮನ ಹಾಲನ್ನು ಪಡೆಯದೇ ತುಂಬಾ ಸಮಯ ಕಳೆದಿತ್ತಾದ್ದರಿಂದ ನಾನು ಆಸೆಯಿಂದ ಬಟ್ಟಲಿಗೆ ಬಾಯಿಟ್ಟೆ.
ಓಹ್! ಅದೇನು ಹಾಲೋ, ಬೆಂಕಿಯೋ? ಉರಿ ತಾಳಲಾರದೆ ಉರುಳಾಡಿದೆ. ನನ್ನ ಗಂಟಲು ನಾಲಿಗೆ ಎಲ್ಲ ಸುಟ್ಟು ಕರಕಲಾಯಿತು.
ಆ ಪಂಡಿತ ಖ್ಯಾತ ವಿದೂಷಕ ನಂತೆ. ಎಲ್ಲರನ್ನೂ ನಗಿಸುತ್ತಾನಂತೆ. ನಾನು ಮಾತ್ರ ಕಣ್ಣೀರಿನಲ್ಲಿ ಕೈತೊಳೆ ಯುವಂತೆ ಮಾಡಿಬಿಟ್ಟ. ನಗೆಗಾರ ಕೊಂಚ ಮಾನವೀಯತೆಯನ್ನೂ ಹೊಂದಿರಬೇಕಲ್ಲವೇ?
- ಕೇವೀಟಿ ಮೇಗೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

