ಆಟೋ ಚಾಲಕರಿಗೆ ತರಬೇತಿ
ಕೆಲವು ಆಟೋ ಚಾಲಕರು ದುರ್ವರ್ತನೆ, ಕರೆದಲ್ಲಿಗೆ ಬಾರದಿರುವುದು ಮುಂತಾದವುಗಳ ಮೂಲಕ ಇಡೀ ಸಮುದಾಯಕ್ಕೇ ಕೆಟ್ಟ ಹೆಸರು ತರುತ್ತಾರೆ. ಅಂಥವರ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಅಥವಾ ಕರೆ ಮಾಡಿ ವಿಷಯ ತಿಳಿಸಬಹುದು. ಬೆಂಗಳೂರಿನಲ್ಲಿ ಮಾತ್ರವಲ್ಲ ಎಲ್ಲಾ ಜಿಲ್ಲೆಗಳಲ್ಲೂ ದೂರು ದಾಖಲಿಸಬಹುದು. ಆಟೋ ಚಾಲಕರ ವಿರುದ್ಧ ಅಂತಹ ಸಾಕಷ್ಟು ದೂರುಗಳು ದಾಖಲಾಗಿವೆ.
ಅಲ್ಲದೆ ಆಟೋ ಚಾಲಕರ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ಆಟೋ ಚಾಲಕರಿಗೆ ಉತ್ತಮ ನಡತೆ(ಸಾಫ್ಟ್ ಸ್ಕಿಲ್ ಫಾರ್ ಆಟೋ ಡ್ರೈವರ್ಸ್) ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಚಾಲಕರಿಗೆ ಆರು ತಿಂಗಳಿಗೊಮ್ಮೆ ಈ ತರಬೇತಿ ನೀಡಲಾಗುತ್ತದೆ. ಪ್ರಯಾಣಿಕರ ಜತೆ, ಸಾರ್ವಜನಿಕರ ಜತೆ ಹೇಗೆ ವರ್ತಿಸಬೇಕು, ಸೌಜನ್ಯದಿಂದ ನಡೆದುಕೊಳ್ಳಬೇಕು ಹಾಗೂ ಸಂಚಾರ ನಿಯಮ ಉಲ್ಲಂಘಿಸದಂತೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆ ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುತ್ತದೆ. ಪ್ರಯಾಣಿಕರು ಕರೆದಲ್ಲಿಗೆ ಹೋಗಲು ನಿರಾಕರಿಸದಂತೆ ಎಚ್ಚರಿಕೆ ಹಾಗೂ ಕೆಲವೊಮ್ಮೆ ಸಮಯ ಎಷ್ಟು ಮುಖ್ಯ, ಇದನ್ನು ಪಾಲಿಸದಿದ್ದರೆ ಆಗುವ ಅನಾಹುತದ ಬಗ್ಗೆ ಮಾಹಿತಿ ನೀಡುತ್ತಾರೆ. ಆ ತರಬೇತಿಗೆ ಉತ್ತಮ ನಡವಳಿಕೆ ತರಬೇತಿ (ಸಾಫ್ಟ್ ಸ್ಕಿಲ್ ಟ್ರೈನಿಂಗ್) ಎನ್ನಲಾಗುತ್ತದೆ.ಈ ನಡುವೆಯೂ ಆಟೋ ಚಾಲಕರ ವರ್ತನೆ ಅದೇ ರೀತಿ ಮುಂದುವರೆಯುತ್ತಿದೆ. ಆದರೆ, ಸಾರ್ವಜನಿಕರು ಮಾತ್ರ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಇದರಿಂದ ಅನಾಹುತ ಹೆಚ್ಚುತ್ತವೆ ಎನ್ನುತ್ತಾರೆ ಪೊಲೀಸರು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

