ಬೈಟುಕಾಫಿ

ಅಮೃತಫಲ ಪ್ರದಾನ

ಭರ್ತೃಹರಿಯನ್ನು ಭೋಗವಿಲಾಸದಲ್ಲಿ ಮುಳುಗಿಸಿದ ಪಿಂಗಳ ಎಂಬ ಹೆಣ್ಣೇ ಆತನ ಅಂತಿಮ ಪರಿವರ್ತನೆಗೂ ಕಾರಣವಾದದ್ದು...

ಅಮೃತಫಲ ಪ್ರದಾನ
Published On :

ಭರ್ತೃಹರಿಯನ್ನು ಭೋಗವಿಲಾಸದಲ್ಲಿ ಮುಳುಗಿಸಿದ ಪಿಂಗಳ ಎಂಬ ಹೆಣ್ಣೇ ಆತನ ಅಂತಿಮ ಪರಿವರ್ತನೆಗೂ ಕಾರಣವಾದದ್ದು ವಿಚಿತ್ರ. ಭರ್ತೃಹರಿ ರಾಜ್ಯಕಾರ್ಯ ಮರೆತು ಪಿಂಗಳೆಯಲ್ಲಿ ಮಗ್ನನಾಗಿದ್ದಾಗಲೇ ಋಷಿಯೊಬ್ಬರು ಆತನಲ್ಲಿಗೆ ಆಗಮಿಸಿದರು. ವಿಶಿಷ್ಟವಾದ ಫಲವೊಂದನ್ನು ಆತನಿಗಿತ್ತರು. ಅದರ ವಿಶೇಷತೆಯನ್ನು ಬಣ್ಣಿಸಿದರು: ಇದು 'ಅಮೃತಫಲ'. ಇದನ್ನು ತಿಂದವರು ಮುಪ್ಪಿನಿಂದ ಬಾಧಿತರಾಗುವುದಿಲ್ಲ, ರೋಗದಿಂದ ಬಳಲುವುದಿಲ್ಲ, ದೀರ್ಘಾಯುಗಳಾಗಿರುತ್ತಾರೆ.
ಭರ್ತೃಹರಿಯ ಮನಸ್ಸಿನ ಪ್ರೇಮದ ಕಡಲಲ್ಲಿ ಹೆದ್ದೆರೆಯೊಂದು ಮೂಡಿತು. ಈ ಫಲವನ್ನು ತಾನು ಭುಂಜಿಸುವುದಕ್ಕಿಂತ, ತನ್ನ ಮುದ್ದಿನ ಮಡದಿಗೆ ಕೊಡುವುದೇ ಲೇಸೆಂದುಕೊಂಡ. ತಾನು ಅಳಿದ ಮೇಲೂ ತನ್ನ ಪ್ರೇಮದ ಪುತ್ಥಳಿ ಆರೋಗ್ಯವಂತಳಾಗಿ ನೂರ್ಕಾಲ ಉಳಿಯಲಿ ಎಂದು ಯೋಚಿಸಿದ. ಹಾಗೆ ಕೊಡುವಾಗಲೇ ಆತ ಹೀಗೆ ಹೇಳಿರಬಹುದು:
ಸತಿ ಪ್ರದೀಪೇ ಸತ್ಯಗ್ನೌ ಸತ್ಸು ತಾರಾಮಣೀಂದುಷು
ವಿನಾ ಮೇ ಮೃಗಶಾವಾಕ್ಷ್ಯಾ ತಮೋಭೂತಮಿದಂ ಜಗತ್
ಪ್ರಿಯೆ, ಪ್ರಖರವಾಗಿ ಬೇಳಗುವ ದೀಪ, ಉರಿಉರಿಯುವ ಬೆಂಕಿ, ಆಗಸದಲ್ಲಿ ಬೆಳಗುವ ತಾರೆಗಳು, ಕೆನೆಮೊಸರಿನಂಥ ಬೆಳಕು ಚೆಲ್ಲುವ ಚಂದ್ರ ಇವೆಲ್ಲ ಲೋಕದ್ದಲ್ಲಿದ್ದರೂ ಅದು ನನಗೆ ಕತ್ತಲೆಯೇ ಸರಿ. ಜಿಂಕೆಯ ಕಂಗಳಂತೆ ಹೊಳೆವ ನಯನಗಳುಳ್ಳ ನೀನು ಬಳಿ ಇದ್ದರೆ ಅದೇ ನನ್ನ ದಿನವನ್ನು ಬೆಳಗುವ ಪ್ರಕಾಶ.
ಭರ್ತೃಹರಿಯೇನೋ ಆಕೆಯನ್ನು ತನ್ನ ಬಾಳನ್ನು ಬೆಳಗುವ ಬೆಳಕೆಂದೇ ಪರಿಗಣಿಸಿದ್ದ. ಆದರೆ ಪಿಂಗಳೆ ಕತ್ತಲಲ್ಲಿ ಬೇರೆಯದೇ ಮಸಲತ್ತು ನಡೆಸಿದ್ದಳು.

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.