ಬೈಟುಕಾಫಿ

ವ್ಯವಸಾಯದತ್ತ ಗಮನವಿಲ್ಲ

Published On :

ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು ಸತ್ಯದ ಸಂಗತಿ. ಏಕೆಂದರೆ ಈಗಿನ ಯುವ ಪೀಳಿಗೆಯವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ತಕ್ಷಣ ನಗರ ಪ್ರದೇಶಗಳಿಗೆ ಹಾಗೂ ವಿದೇಶಗಳಿಗೆ ವೃತ್ತಿಗೋಸ್ಕರ ತೆರಳುತ್ತಿದ್ದಾರೆ. ಇದು ಅನಿವಾರ್ಯ ಕೂಡ. ಇದನ್ನು ಮೊದಮೊದಲು ಅಪ್ಪಾ-ಅಮ್ಮಾ ಕೂಡ ಸಂತೋಷದಿಂದಲೇ ಸ್ವೀಕರಿಸುತ್ತಾರೆ. ದಿನ ಕಳೆದಂತೆ ಇದೊಂದು ದುರಾದೃಷ್ಟಕರ ಸಂಗತಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ವಲಸೆ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ ಮತ್ತು ಇದರಿಂದಾಗಿ ಜನರು ಕ್ರಮೇಣವಾಗಿ ವ್ಯವಸಾಯದತ್ತ ಗಮನ ಹರಿಸುವುದು ಇಲ್ಲವಾಗಿದೆ. ಜೀವನೋಪಾಯಕ್ಕೆ ನಗರ ಪ್ರದೇಶಗಳ ಕೆಲಸವನ್ನು ನಂಬಿ ಹೋಗುತ್ತಿರುವುದರಿಂದ ಹಾಗೂ ಅವರು ತಮ್ಮ ನಿವೃತ್ತಿ ಜೀವನದ ನಂತರ ಮರಳುತ್ತಿರುವುದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು ನೂರಕ್ಕೆ ನೂರು ಸತ್ಯ. ಏನೇ ಆದರೂ ಮಕ್ಕಳು ಕೂಡ ಹೆತ್ತವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕಾದ್ದು ಸಮಂಜಸ.
= ಎನ್.ಸುಧೀಂದ್ರ, ಬೆಂಗಳೂರು
ಹಳ್ಳಿಗಳು ವೃಧ್ಧರಿಂದ ಶ್ರೀಮಂತವಾಗಿವೆ
ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿಲ್ಲ ಏಕೆಂದರೆ ಹಳ್ಳಿಯಲ್ಲಿಯ ಎಲ್ಲಾ ಯುವಕರು ನಗರಕ್ಕೆ ವಲಸೆ ಹೋಗದೇ ಕೆಲವೊಂದು ಯುವಕರು ಮಾತ್ರ ವಲಸೆ ಹೋಗುತ್ತಾರೆ. ಹೋದವರೆಲ್ಲರೂ ಅಲ್ಲಿಯೇ ನೆಲೆ ನಿಲ್ಲದೇ ಒಂದಿಷ್ಟು ಜನ ಮರಳುತ್ತಾರೆ. ಹೀಗಾಗಿ ಕೊನೆಗೆ ಹಳ್ಳಿಯ ಯುವಕರಿಗೆ ಒಳ್ಳೆಯ ಬದುಕು ಕಟ್ಟಿಕೊಡುವ ಹಳ್ಳಿಯಾಗಿಯೇ ಇದೆ. ನಾನು ಹಳ್ಳಿಯವನಾಗಿ ನನ್ನ ಅನುಭವದಲ್ಲಿ ಹೇಳಬೇಕಾದರೆ ಹಳ್ಳಿಗಳಲ್ಲಿ ಇಂದಿಗೂ ಹಿರಿಯರೇ ಮನೆ ಯಜಮಾನನಾಗಿರುವುದರಿಂದ ಅವರ ಮಾತೇ ವೇದವಾಕ್ಯವಾಗಿದೆ. ವೃದ್ಧರು ಅಸಹಾಯಕರು, ಹೊರೆ ಎನ್ನುವ ಭಾವನೆ ಎಂದಿಗೂ ಹಳ್ಳಿಗರ ಮನದಲ್ಲಿ ಬಂದಿಲ್ಲ. ಹಳ್ಳಿಗಳಲ್ಲಿ ಹಿರಿಯರಿಗೆ ಅವರದೇ ಆದ ಜವಾಬ್ದಾರಿಗಳು, ಸ್ಥಾನಮಾನಗಳು ಹಾಗೂ ಸಂಬಂಧಗಳಿವೆ.  ನಗರಕ್ಕೆ ಹೋಲಿಸಿದಾಗ ಹಳ್ಳಿಗಳಲ್ಲಿ ವೃದ್ಧರು ಕುಟುಂಬಕ್ಕೆ ಭಾರವೆನಿಸದೇ ಕುಟುಂಬದ ಭಾಗವಾಗಿದ್ದಾರೆ.
= ಬಸವರಾಜ ಆರ್. ಹೊನಗೌಡರ, ಹುಕ್ಕೇರಿ
ಎಲ್ಲೆ ಇರಲಿ ಕರುಳ ಬಳ್ಳಿ ಬೆಳೆಯಲಿ!
ತಮ್ಮ ಮಗ ಅಥವಾ ಮಗಳು ಇತರರಿಗಿಂತ ಹೆಚ್ಚು ಓದಲಿ ಎಂಬಾಸೆ ಇದ್ದೇ ಇರುತ್ತದೆ. ಚಿಕ್ಕವನಿರುವಾಗ ತನ್ನ ನಿದ್ದೆ ಬದಿಗೊತ್ತಿ ತನ್ನ ಮಗನ ಬೇಕು ಬೇಡಗಳನ್ನು ಆಲಿಸಿ, ಮಗನಿಗಾಗಿ ಗಂಡನ ಮನವೊಲಿಸಿ ಆತನನ್ನು ಹೆಚ್ಚು ಓದಿಸಿದಾಗ ಎಲ್ಲರಿಗಿಂತ ತಾಯಿಗೇ ಹೆಚ್ಚು ಖುಷಿ ಪಡುವವಳು. ಕೆಲಸ ಹುಡುಕಿಕೊಂಡು ಮಗ ನಗರಕ್ಕೆ ಹೊರಟು ನಿಂತಾಗ ತಾಯಿಗೆ ಅದೇನೊ ವೇದನೆ. ನಂತರ ಮಗ ಬೆಳೆದನೆಂದು ಮದುವೆ ಮಾಡುತ್ತಾರೆ. ನಂತರ ಮಗ ತಾಯಿಯ ಬಗ್ಗೆ ಕಾಳಜಿ ವಹಿಸುವುದನ್ನು ಕಡಿಮೆಮಾಡುತ್ತಾನೆ. ಇಲ್ಲಿ ಯಾರನ್ನು ದೂರುವುದು. ಇರುವ ಊರಲ್ಲಿ ಕೆಲಸ ಕೊಡದ ಸರಕಾರವನ್ನೋ? ತನ್ನೆಲ್ಲ ಕಷ್ಟವನ್ನು ಬದಿಗೊತ್ತಿ ಕಲಿಸಿದ ತಾಯಿಯ ತಪ್ಪೇ? ಮದುವೆಯಾದ ಮಗನ ತಪ್ಪಾ? ಇದೇ ಪರಿಸ್ಥಿತಿ ಎಲ್ಲ ಕಡೆಯೂ ನಿರ್ಮಾಣವಾಗಿದೆ.
= ರವೀಂದ್ರ ಅಷ್ಟಗಿ. ರಬಕವಿ


'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.