ಪ್ಲಾಸ್ಟಿಕ್
ಪ್ಲಾಸ್ಟಿಕ್ ಶಬ್ದ ಗ್ರೀಕ್ ಭಾಷೆಯ ಪ್ಲ್ಯಾಸ್ಟಿಕೋಸ್ ಪದದಿಂದ ಉತ್ಪತ್ತಿಯಾಗಿದೆ. ಪ್ಲ್ಯಾಸ್ಟಿಕೋಸ್ ಎಂದರೆ 'ತಯಾರಿಸುವುದು' ಎಂದರ್ಥ. ಕೃತಕ ಪದಾರ್ಥಗಳಿಂದ ತಯಾರಿಸಿದ ಪ್ಲಾಸ್ಟಿಕ್ ಹೇಗೆಂದರೆ ಹಾಗೆ ತಿರುಗಿಸಬಹುದು. ಬಿಸಿ ಮಾಡಿ ಬೇಕಾದ ಆಕಾರಕ್ಕೆ ತರಬಹುದು. ಇದನ್ನು ಸರಳ ಕಾರ್ಬನಿಕ್ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ನಲ್ಲಿ ಅನೇಕ ವಿಧಗಳಿವೆ. ಆಧುನಿಕ ಯುಗದಲ್ಲಿ ಪಾರದರ್ಶಕವಾದ ಪ್ಲಾಸ್ಟಿಕ್ನಿಂದ ಹಿಡಿದು ಹಲವಾರು ಬಣ್ಣಗಳ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸಲಾಗುತ್ತದೆ. ಇಂಗ್ಲೆಂಡ್ನ ಅಲೆಗ್ಸಾಂಡರ್ ಪಾರ್ಕ್ಸ್ 1862ರಲ್ಲಿ ಪ್ಲಾಸ್ಟಿಕ್ ಕಂಡುಹಿಡಿದ. ಆ ಕಾಲದಲ್ಲಿ ಪ್ಲಾಸ್ಟಿಕ್ ಪಾರ್ಕ್ಸ್ನ ಹೆಸರಿನಲ್ಲೇ ಪಾರ್ಕ್ಸೈನ್ ಎಂದೇ ಕರೆಯಲಾಗುತ್ತಿತ್ತು. ವಾಸ್ತವವಾಗಿ ಈ ಪ್ಲಾಸ್ಟಿಕ್ ನೈಟ್ರೊಸೆಲ್ಯುಲೋಸ್ ಆಗಿತ್ತು. ಇದಕ್ಕೆ ಎಣ್ಣೆ ಮತ್ತು ಕರ್ಪೂರ ಸೇರಿಸಿ ಮುಲಾಮು ಕೂಡ ಮಾಡಲಾಗುತ್ತಿತ್ತು.
1910ರಲ್ಲಿ ಲಿಯೋ ಹೆಂಡ್ರಿಕ್ ಬ್ಯಾಕ್ಲ್ಯಾಂಡ್ ಒಂದು ಕೈಗಾರಿಕೆಯ ರೂಪದಲ್ಲಿ ಪ್ಲಾಸ್ಟಿಕ್ ತಯಾರಿಕೆಯನ್ನು ಪ್ರಾರಂಭಿಸಿದ. ಆತ ಫೆನೈಲ್ ಮತ್ತು ಫರ್ಮಲ್ಡಿಹೈಡ್ಗಳನ್ನು ಬಳಸಿ ಪ್ಲಾಸ್ಟಿಕ್ ತಯಾರಿಸುತ್ತಿದ್ದ. ಅನಂತರ ಪ್ಲಾಸ್ಟಿಕ್ನ ತಯಾರಿಕೆಯಲ್ಲಿ ಹೊಸ ಹೊಸ ವಿಧಾನ ಆರಂಭವಾಯಿತು. ಇಂದು ತರಹೇವಾರಿ ಪ್ಲಾಸ್ಟಿಕ್ಗಳನ್ನು ತಯಾರಿಸಲು ಸಾಧ್ಯವಿರುವಂತಹ ಅನೇಕ ಹೊಸ ಪದಾರ್ಥಗಳನ್ನು ಶೋಧಿಸಲಾಗಿದೆ.ಟಿ
= ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

