ಮದರ್ ಇಂಡಿಯಾ 25

ಕೃತಕ ಗರ್ಭಧಾರಣೆ? ಹಾಗೆಂದರೇನು? ಇದು ಇಪ್ಪತ್ತೈದು ವರ್ಷಗಳ ಹಿಂದೆ ಕೇಳಿಬರುತ್ತಿದ್ದ ಪ್ರಶ್ನೆ.
ಮಕ್ಕಳಾಗಲಿಲ್ಲವೆ? ಆತಂಕ ಬೇಡ. ಐವಿಎಫ್ ಮಾಡಿಸಿಕೊಳ್ಳಿ. ಇದು ಇಂದು ಅವೇ ಬಾಯಿಗಳಿಂದ ಕೇಳಬಹುದಾದ ಮಾತು.
ಜಗತ್ತು ಎಷ್ಟೊಂದು ಬದಲಾಗಿದೆ! ಈ ಬದಲಾವಣೆಯ ಹಿಂದೆ ಪರಿಶ್ರಮ, ಸಂಶೋಧನೆ, ಮೌಢ್ಯ ನಿವಾರಣೆ, ದಿಟ್ಟತನಗಳ ಕಥೆ ಇದೆ.
ಕೃತಕ ಗರ್ಭಧಾರಣೆ ಬಗ್ಗೆ ದಕ್ಷಿಣ ಭಾರತದಲ್ಲಿ ಯಾರೂ ಚಿಂತಿಸದ ಸಮಯದಲ್ಲಿ ಒಬ್ಬ ಲೇಡಿ ಡಾಕ್ಟರ್ ಧೈರ್ಯ ತೋರುತ್ತಾರೆ. ಐವಿಎಫ್ ಎಂಬ ಅತ್ಯಾಧುನಿಕ ಸಂತಾನಫಲ ಚಿಕಿತ್ಸೆಯನ್ನು ಪರಿಚಯಿಸುತ್ತಾರೆ. ಮೌಢ್ಯ, ಸಾಂಪ್ರದಾಯಿಕ ದೃಷ್ಟಿಕೋನವನ್ನು ದಿಟ್ಟವಾಗಿ ಎದುರಿಸಿ ಮಕ್ಕಳಿಲ್ಲದವರ ಪಾಲಿಗೆ ಆಶಾಕಿರಣವಾಗುತ್ತಾರೆ. ಅಲ್ಲಿಂದ ಆರಂಭವಾದ ತಾಯ್ತನ ಸೃಷ್ಟಿಸುವ ಪ್ರಯತ್ನ ಈಗ 25 ವರ್ಷ ಪೂರೈಸಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇನ್ವಿಟ್ರೋ ಫರ್ಟಿಲೈಸೇಷನ್ ಅಥವಾ ಪ್ರನಾಳ ಶಿಶು ಚಿಕಿತ್ಸೆಗೆ ಮುನ್ನುಡಿ ಬರೆದವರು ಬೆಂಗಳೂರಿನ ಬಸವನಗುಡಿಯ ಗುಣಶೀಲ ಆಸ್ಪತ್ರೆಯ ಡಾ. ಸುಲೋಚನಾ ಗುಣಶೀಲ. ಮೊದಲ ಐವಿಎಫ್ ಶಿಶು ಜನಿಸಿದ್ದು 1988ರಲ್ಲಿ. ಇವತ್ತು ಡಾ. ಸುಲೋಚನಾ ಬದುಕಿಲ್ಲ. ಆದರೆ ಅವರು ಹಾಕಿಕೊಟ್ಟ ವೈದ್ಯಕೀಯ ಮಾರ್ಗವನ್ನು ಅವರ ಮಗಳು ಡಾ. ದೇವಿಕಾ ಗುಣಶೀಲ ಮುಂದುವರಿಸುತ್ತಿದ್ದಾರೆ.
ಆಗ ಐವಿಎಫ್ ತಂತ್ರಜ್ಞಾನ ಲಭ್ಯವಿದ್ದುದು ಮುಂದುವರಿದ ದೇಶಗಳಲ್ಲಿ ಮಾತ್ರ. ದೂರದರ್ಶಿತ್ವ ಹೊಂದಿದ್ದ ಡಾ. ಸುಲೋಚನಾ ಅವರು ಬೆಂಗಳೂರಿನಲ್ಲಿ ಈ ಸಾಧನೆಗೆ ಕೈ ಹಾಕಿದರು. ಪರಿಣಾಮ ದಕ್ಷಿಣ ಭಾರತದ ಮೊದಲ ಐವಿಎಫ್ ಶಿಶು ಹುಟ್ಟಿತು. 1988ರಲ್ಲಿ ಭೂಮಿಗೆ ಬಂದ ಈ ಹೆಣ್ಣು ಶಿಶು, ಈಗ 25 ವರ್ಷದ ಯುವತಿ. ಸುಖಕರ ಜೀವನ ಸಾಗಿಸುತ್ತಿದ್ದಾರೆ.
ಮಹಿಳೆಯರ ಬಂಜೆತನ ನಿವಾರಿಸಿ ಅವರನ್ನು ಸಾರ್ಥಕ ತಾಯಂದಿರನ್ನಾಗಿ ಮಾಡುತ್ತಿರುವ ಈ ಗುಣಶೀಲ ಐವಿಎಫ್ ಕೇಂದ್ರಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ. ಕ್ರಿಯೇಟಿಂಗ್ ಮದರ್ಸ್ ಎಂಬುದು ಇದರ ಘೋಷವಾಕ್ಯ. ಭಾರತವಷ್ಟೆ ಅಲ್ಲದೆ, ವಿದೇಶದಿಂದ ಕೂಡ ಇಲ್ಲಿಗೆ ಬಂದು ತಾಯ್ತತನದ ಫಲ ಪಡೆದವರಿದ್ದಾರೆ.
ಖ್ಯಾತ ಸಂತಾನಫಲ ತಜ್ಞೆ ಡಾ. ದೇವಿಕಾ ಗುಣಶೀಲ ಅವರು, 'ನಮ್ಮ ಸಂಸ್ಥೆಯ ಸ್ಥಾಪಕರಾದ ದಿವಂಗತ ಡಾ. ಸುಲೋಚನಾ ಗುಣಶೀಲಾ ಅವರ ದೂರದೃಷ್ಟಿಯಿಂದಾಗಿ ಗುಣಶೀಲ ಐವಿಎಫ್ ಕೇಂದ್ರ ಒಂದೇ ಸೂರಿನಡಿ ಬಂಜೆತನ ನಿವಾರಣೆಯ ವಿಶ್ವದರ್ಜೆಯ ಚಿಕಿತ್ಸೆ ನೀಡಲು ಕಾರಣವಾಗಿದೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ. 'ಬಂಜೆತನ ಇರುವ ದಂಪತಿಗಳಿಗೆ ಐವಿಎಫ್ ಚಿಕಿತ್ಸೆಯ ಮೂಲಕ 6000ಕ್ಕೂ ಹೆಚ್ಚು ಶಿಶುಗಳ ಜನನಕ್ಕೆ ಈ ಕೇಂದ್ರ ಕಾರಣವಾಗಿದೆ. ಚಿಕಿತ್ಸೆ ಪಡೆದುಕೊಂಡವರ ಪೈಕಿ ಶೇ.52 ಸ್ತ್ರೀಯರು ಗರ್ಭಿಣಿಯರಾಗಿದ್ದಾರೆ' ಎಂದು ಅವರು ವಿವರಿಸುತ್ತಾರೆ.
ವಿಶ್ವದೆಲ್ಲೆಡೆಯ ಬಂಜೆತನ ನಿವಾರಣಾ ತಜ್ಞರೊಂದಿಗೆ ಸಂಪರ್ಕ ಸಾಧಿಸಿರುವ ಗುಣಶೀಲ ಕೇಂದ್ರ ಅತಿ ಆಧುನಿಕ ಮತ್ತು ಪ್ರಚಲಿತ ಚಿಕಿತ್ಸೆಯನ್ನು ತನ್ನ ಕೇಂದ್ರದಲ್ಲಿ ನೀಡುವುದಕ್ಕೆ ಬದ್ಧವಾಗಿದೆ. ಮುಂದೆ ಇನ್ನಷ್ಟು ಸಂಶೋಧನೆಗಳ ಫಲವನ್ನು ಮಕ್ಕಳಿಲ್ಲದ ದಂಪತಿ ಪಾಲಿಗೆ ದೊರೆಯುವಂತೆ ಮಾಡಲಿದೆ. (ಸಂಪರ್ಕ: 080 41312600, 26673585). ಟಿ
ವರ್ಷದಿಂದ ವರ್ಷಕ್ಕೆ ನಮ್ಮ ಕೇಂದ್ರದಲ್ಲಿ ಉತ್ತಮ ಪಲಿತಾಂಶ ದೊರೆಯುತ್ತಿದೆ. ಕಾರಣ, ನಾವು ಸಂತಾನಫಲ ಕ್ಷೇತ್ರದ ಬೆಳವಣಿಗೆ ಕುರಿತು ಕುತೂಹಲದಿಂದ ಅರಿಯುತ್ತಿರುವುದು ಮತ್ತು ಎಂಬ್ರಿಯೋಸ್ಕೋಪ್ನಂತಹ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಮೂಲಕ ಐವಿಎಫ್ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಹೆಚ್ಚಿಸಿಕೊಂಡಿರುವುದು. ಈಗ ನಮ್ಮ ಕೇಂದ್ರ ಶೇ. 52 ಸ್ತ್ರೀಯರು ಗರ್ಭ ಧರಿಸಲು ಶಕ್ಯರಾಗುವಷ್ಟರ ಮಟ್ಟಿಗೆ ಮುಂದುವರಿದಿದೆ. 25 ವರ್ಷಗಳ ಕಲಿಕೆ, ಪ್ರಯೋಗ ಮತ್ತು ಅಳವಡಿಕೆಯಿಂದ ಬಂಜೆತನ ನಿವಾರಣೆಯಲ್ಲಿ ಅಮೋಘ ಯಶಸ್ಸು ಸಾಧ್ಯವಾಗಿದೆ.
-ಡಾ. ದೇವಿಕಾ ಗುಣಶೀಲ, ಸಂತಾನಫಲ ಚಿಕಿತ್ಸಕರು, ಗುಣಶೀಲ ಐವಿಎಫ್ ಕೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


