ಬೈಟುಕಾಫಿ

ಪೆನ್ ಪಾಯಿಂಟ್

Published On :

ಸೈಲೆಂಟ್ ಮೋಡಲ್ಲಿರಿ!
ನಾವು ಭಾರತೀಯರಿಗೆ ಜಗಳ ಮಾಡುವುದು, ಕೂಗಾಡುವುದು, ವಿಷಯವಿಲ್ಲದೆ ಅವಾಚ್ಯ ಶಬ್ದ ಬಳಸುವುದು ರೂಢಿ. ಅನವಶ್ಯಕ ಎಲ್ಲೆಲ್ಲ ಸುಮ್ನೆ ಎನರ್ಜಿ ವೇಸ್ಟ್ ಮಾಡ್ಕೋತೀವಿ ಗೊತ್ತಾ?
    ಬಸ್ಸಲ್ಲಿ ಕಂಡಕ್ಟರ್ ಜರುಗಲು ಹೇಳಿದ್ದಕ್ಕೇ ಏನ್ ನಿನ್ ತಲೆ ಮೇಲ್ ಕಾಲಿಡ್ಲಾ ಅಂತ ಕೇಳೋಕೆ ನಾಲಿಗೆ ತುರಿಸುವುದು. ನಿಮಗೆ ನಿಲ್ಲಲೇ ಕಷ್ಟ, ಆತ ಓಡಾಡಬೇಕಲ್ಲ?
    ಯಾರದೋ ಬೈಕ್ ನಿಮ್ಮ ರಿಕ್ಷಾಗೆ ಬ್ರೇಕ್ ತಕ್ಷಣ ಬೀಳದೆ ಸಣ್ಣಗೆ ಮೈಸವರಿದಂತೆ ತಾಗಿತು. ಗಾಡಿಗೇನಾಯಿತು  ನೋಡುವ ಮೊದಲೇ ಅವಾಚ್ಯ ಶಬ್ದ ತೆಗೆದು ಹೊಡೆದಾಡಲೇ ನಿಲ್ಲುತ್ತೀರಿ! ಅದರಿಂದ ಟ್ರಾಫಿಕ್ ಜಾಮ್ ಬಿಟ್ಟರೆ ಉಪಯೋಗವೇನಾಯಿತು?
    ತರಕಾರಿ ರೇಟಿನಲ್ಲಿ ಒಂದು ರುಪಾಯಿ ಕಡಿಮೆ ಮಾಡಿಸಲು ಆಕಾಶ ತಲೆ ಮೇಲೆ ಬಿದ್ದಂತೆ ಕೂಗಾಡುವ ಅವಶ್ಯಕತೆ ಇದೆಯೇ? ತೆಪ್ಪಗೆ ಬೇರೆ ಅಂಗಡಿಗೆ ಹೋದರಾಯಿತು.
=  ಅವರ್ಯಾರೋ ನಿಮ್ಮ ಕಾಲು ತುಳಿದರು. ನಿಮಗೆ ನೋವಾಯ್ತು ನಿಜ. ಯಾರೂ ಬೇಕೆಂದು ತುಳಿಯುವುದಿಲ್ಲ. ಅಷ್ಟಕ್ಕೇ ಅವರು ಕೊಲೆ ಮಾಡಿದಂತೆ ಕೂಗಾಡಬೇಕೆ?


ಸರ್ವೇ ನಂಬರ್
ವಿಡಿಯೋ ಗೇಮ್ ಖಯಾಲಿ!
ನಗರ ಪ್ರದೇಶದ ಬಹುತೇಕ ಮಕ್ಕಳಿಗೆ ಆಟವೆಂದರೆ 'ವಿಡಿಯೋ ಗೇಮ್‌' ಎಂದಾಗಿದೆ. ಕೋಣೆಯಲ್ಲಿ ಕುಳಿತು ವಿಡಿಯೋ ಗೇಮ್ ಆಡುತ್ತ ಕೂರುವ ಜಾಯಮಾನ ದೊಡ್ಡವರಿಗೂ ಅಂಟಿದೆ. ವಿಡಿಯೋ ಗೇಮ್ ಆಡುತ್ತ ಕುಳಿತರೆ ಮನರಂಜನೆಯಷ್ಟೇ ಲಾಭ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಕೆಡುತ್ತದೆ. 2-5 ವರ್ಷದ ಮಕ್ಕಳು ಶೇ.50ರಷ್ಟು ವಿಡಿಯೋ ಗೇಮ್ ಆಡುವ ಮುಖಾಂತರ ಖುಷಿ ಪಡುತ್ತಿದ್ದಾರೆ. (ಪೋಷಕರು ವಿಡಿಯೋ ಗೇಮ್ ತೋರಿಸಿ ಖುಷಿ ಪಡಿಸುತ್ತಿದ್ದಾರೆ ಎಂಬುದೂ ಅಷ್ಟೇ ನಿಜ) 6-11ನೇ ವಯಸ್ಸಿನ ಮಕ್ಕಳು ಶೇ.44ರಷ್ಟು ವಿಡಿಯೋ ಗೇಮ್ ಇಷ್ಟಪಡುತ್ತಾರೆ. 12-17 ವರ್ಷ ಪ್ರಾಯದವರಿಗೆ ಶೇ.43ರಷ್ಟು ಕಂಪ್ಯೂಟರ್ ಗೇಮ್ ಹುಚ್ಚು ಇರುತ್ತದೆ. ವಯಸ್ಸಾದಂತೆ ವಿಡಿಯೋ ಗೇಮ್ ಆಡುವವರ ಪ್ರಮಾಣದಲ್ಲಿ  ಬದಲಾವಣೆ ಏನೂ ಇಲ್ಲ. ಇಂಟೆರ್ನೆಟ್ ಬಳಕೆಯ ಪ್ರಮಾಣದಲ್ಲೂ ಮಕ್ಕಳು ಮುಂದುವರಿದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.