ಬನ್ನಿಮಂಟಪ
ಕೆ.ಎಚ್. ಕಲಾಸೌಧದಲ್ಲಿ ನಾಟಕ ಗತಿ
ಅನನ್ಯ, ಬೆಂಗಳೂರು ಅಭಿನಯಿಸುವ ನಾಟಕ 'ಗತಿ' ಜೂನ್ 08 ರಂದು ಮಧ್ಯಾಹ್ನ 3.30 ಮತ್ತು ಸಂಜೆ 7-30 ಕ್ಕೆ ಎರಡು ಪ್ರದರ್ಶನಗಳಿವೆ. ರಚನೆ ಮತ್ತು ನಿರ್ದೇಶನ ಹಿರಿಯ ರಂಗಕರ್ಮಿ ಎಸ್. ಎನ್. ಸೇತುರಾಮ್ ಅವರದು. ಭೂಮಿಕೆಯಲ್ಲಿ ಸೇತುರಾಮ್ ಮತ್ತು ದೀಪಾ.
ಸ್ಥಳ-ಕೆ.ಎಚ್. ಕಲಾಸೌಧ, ಹನುಮಂತನಗರ, ಬೆಂಗಳೂರು. ಪ್ರದರ್ಶನದ ವಿವರಗಳಿಗೆ ಸಂಪರ್ಕಿಸಿಃ 9844304277 / 9845444407.
=
ಶ್ರೀನಿಧಿ ವಸ್ತ್ರವೈಢೂರ್ಯ- 2014
ಶ್ರೀನಿಧಿ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸಂಸ್ಥೆಯು ದೇಶದ ನಾನಾ ಭಾಗದ ನೇಕಾರರಿಂದ ತಯಾರಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ. ಕಲಾತ್ಮಕ ಸೀರೆಗಳು ಮತ್ತು ಆಭರಣಗಳ ಪ್ರದರ್ಶನ ಜಯನಗರದ ಪ್ರೇಮಚಂದ್ರ ಸಾಗರ ಕಲ್ಯಾಣ ಮಂಟಪದಲ್ಲಿ ಅನಾವರಣಗೊಂಡಿದ್ದು, ಜೂ.15ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9964365282.
ಸಿಕ್ಕ ವರ ಹಾಳುಮಾಡಿಕೊಂಡ ಭಕ್ತರು
ಒಮ್ಮೆ ಇಬ್ಬರು ಭಕ್ತರು ಅಕ್ಕ ಪಕ್ಕ ಕುಳಿತು ತಪಸ್ಸು ಮಾಡುತ್ತಿರುತ್ತಾರೆ. ಶಿವ ಪ್ರತ್ಯಕ್ಷನಾಗಿ ಬಲ ಬದಿಯಲ್ಲಿ ಕುಳಿತಿದ್ದ ಭಕ್ತನಲ್ಲಿಗೆ ಹೋಗಿ 'ಏನು ವರ ಬೇಕು?' ಎಂದು ಕೇಳುತ್ತಾನೆ. ಇದರಿಂದ ಖುಷಿಯಾದ ಭಕ್ತ 'ಎಡ ಬದಿಯಲ್ಲಿ ಕುಳಿತಿರುವವನು ನಿನ್ನ ಬಳಿ ಏನು ಕೇಳಿಕೊಳ್ಳುತ್ತಾನೋ ಅದರ ಎರಡರಷ್ಟನ್ನು ನನಗೆ ಕೊಡು' ಎಂದು ಬೇಡಿಕೊಳ್ಳುತ್ತಾನೆ. ಶಿವನು ಆ ವರ ಕೊಡಲು ಒಪ್ಪಿ ಎಡ ಬದಿಯಲ್ಲಿ ಕುಳಿತ ಭಕ್ತನಲ್ಲಿಗೆ ಹೊಗುತ್ತಾನೆ. 'ನಿನಗೇನು ವರ ಬೇಕು ಕೇಳಿಕೋ?' ಎನ್ನುತ್ತಾನೆ ಶಿವ. ಭಕ್ತ ಸಂತೋಷಗೊಂಡು ಬಲ ಬದಿಯಲ್ಲಿ ಕುಳಿತಿದ್ದ ಭಕ್ತ ಏನು ವರವನ್ನು ಕೇಳಿದ ಎಂದು ಕೇಳುತ್ತಾನೆ. ಅದಕ್ಕೆ ಶಿವ ನೀನು ಕೇಳಿಕೊಳ್ಳುವ ವರದ ಎರಡರಷ್ಟನ್ನು ಕೊಡು ಎಂದು ಕೇಳಿದ್ದಾನೆಂದು ಪ್ರಾಮಾಣಿಕವಾಗಿ ಉತ್ತರಿಸುತ್ತಾನೆ. 'ಓಹ್ ಹಾಗಾದರೆ ನನ್ನ ಎರಡು ಪಟ್ಟು ಆತನಿಗೆ ಲಾಭ ಗಿಟ್ಟುತ್ತದೆಯೇ?' ಎಂಬ ದುರಾಲೋಚನೆ ಆತನ ಮನಸ್ಸಲ್ಲಿ ಮೊಳೆಯುತ್ತದೆ. 'ನನ್ನ ಒಂದು ಕಣ್ಣು, ಒಂದು ಕೈ, ಒಂದು ಕಾಲು ಹೋಗುವಂತೆ ಮಾಡು' ಎನ್ನುತ್ತಾನೆ. ತನಗೆ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ಆತನ ಎರಡೂ ಕಣ್ಣುಗಳು ಹೋಗಬೇಕು ಎಂಬ ದುರಾಸೆ ಭಕ್ತನಿಗಿರುತ್ತದೆ. ಒಟ್ಟಿನಲ್ಲಿ ಇಬ್ಬರೂ ತಮ್ಮ ದುರಾಸೆಯಿಂದ ಸಿಕ್ಕ ವರವನ್ನು ಹಾಳುಮಾಡಿಕೊಳ್ಳುತ್ತಾರೆ.
= ಬರ್ಕಲಿ ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

