ಬೈಟುಕಾಫಿ

ಅವು ಸಡಿಲಾಗುತ್ತಿವೆ!

ಅವು ಸಡಿಲಾಗುತ್ತಿವೆ!
Published On :

ಮಂತ್ರಿಗಳು ಬಿಗಿ ಕಳೆದುಕೊಂಡರೆ ಅಧಿಕಾರಿಗಳು ಸಡಿಲಾಗುತ್ತಾರೆ. ಶಿಕ್ಷಕರು ಬಿಗಿ ಕಳೆದುಕೊಂಡರೆ ಮಕ್ಕಳು ಸಡಿಲ ಬೀಳುತ್ತಾರೆ. ಆದರೆ ಸ್ತನಗಳು ಬಿಗಿ ಕಳೆದುಕೊಂಡರೆ ತಾವೇ ಸಡಿಲಾಗಿಬಿಡುತ್ತವೆ. ಬಿಗಿತನಕ್ಕಿರುವ ಆಕರ್ಷಣೆ ಸಡಿಲತೆಗಿಲ್ಲ. ಇದು ಪ್ರಾಯದ ಪ್ರಭಾವ, ಎಲ್ಲರಿಗೂ ಸಂಭವಿಸುವಂಥದ್ದು. ಆದರೆ ಕೆಲವರು ಅದಕ್ಕಾಗಿ ಶೋಕಿಸುತ್ತಾರೆ, ಅದನ್ನು ಹಾಗೇ ಉಳಿಸಿಕೊಳ್ಳಲು ಬಯಸಿ ವ್ಯರ್ಥ ಪ್ರಯತ್ನ ಮಾಡುತ್ತಾರೆ. ಅಂಥ ಸ್ತ್ರೀಯೊಬ್ಬಳನ್ನು ಉದ್ದೇಶಿಸಿ ಬುದ್ಧಿವಂತ ಕವಿಯೊಬ್ಬ ಹೇಳಿದ್ದು ಇಲ್ಲಿದೆ:

ಏನಂ ಪಯೋಧರಯುಗಪತಿತಂ ನಿರೀಕ್ಷ್ಯ
ಖೇದಂ ವೃಥಾ ವಹಸಿ ಕಿಂ ಹರಿಣಾಯತಾಕ್ಷಿ
ಸ್ತಬ್ಧೋ ವಿವೇಕರಹಿತೋ ಜನತಾಪಕಾರೀ
ಯೋತ್ಯುನ್ನತಃ ಪ್ರಪತತೀತಿ ಕಿಮತ್ರ ಚಿತ್ರಮ್

ಹರಿಣದ ಕಂಗಳಂತೆ ಸುಂದರವಾದ ಕಣ್ಣುಳ್ಳವಳೇ! ನಿನ್ನ ಸ್ತನಗಳು ಪ್ರಾಯದ ದೆಸೆಯಿಂದ ಬಿಗಿ ಕಳೆದುಕೊಂಡು ಸಡಿಲಾಗಿ ಬೀಳುತ್ತಿವೆ ಎಂದೇಕೆ ಚಿಂತೆ ಮಾಡುತ್ತಿರುವೆ? ಕೆಲಸ ಮಾಡಬೇಕಾಗಿದ್ದಾಗ ಮಾಡದೆ ಸುಮ್ಮನಿರುವವರು, ವಿವೇಕವಿಲ್ಲದೆ ವರ್ತಿಸುವವರು, ಜನರಲ್ಲಿ ತಾಪವನ್ನು ಹೆಚ್ಚಿಸುವವರು (ಅಥವಾ ಜನತೆಗೆ ಅಪಕಾರ ಮಾಡುವವರು) ಎಷ್ಟೇ ಅತ್ಯುನ್ನತ ಸ್ಥಾನದಲ್ಲಿದ್ದರೂ ಒಂದಲ್ಲ ಒಂದು ದಿನ ಬಿದ್ದೇ ಬೀಳುತ್ತಾರಷ್ಟೆ?
ಇಲ್ಲಿ ಕವಿ ಚಮತ್ಕಾರಿಕವಾಗಿ ಪತಿತ ಪಯೋಧರವುಂಡಲವನ್ನೂ ಜನತಾಪಕಾರಿಯಾದ ಉನ್ನತ ಸ್ಥಾನಿಗಳನ್ನೂ ಹೋಲಿಸಿ ಹೇಳಿದ್ದಾನೆ.
ಬಿಡಿ, ಪ್ರಾಯ ಕಳೆದರೆ ಸ್ತ್ರೀಯರಿಗೆ ವಕ್ಷೋಜಗಳು ಸಡಿಲಾದರೆ ಪುರುಷರಿಗೆ ಇನ್ನೇನೋ ಆಗದೆ ಇರುತ್ತದೆಯೆ?


- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.