ಬೈಟುಕಾಫಿ

ಬ್ಯಾಂಕ್ ದರೋಡೆಯಾಗುವ ಸಂದರ್ಭಗಳು

ಬ್ಯಾಂಕ್ ದರೋಡೆಯಾಗುವ ಸಂದರ್ಭಗಳು
Published On :

  ಹೆಚ್ಚು ಜನಸಂಖ್ಯೆ ಇಲ್ಲದ ಪ್ರದೇಶಗಳಲ್ಲಿ ಬ್ಯಾಂಕ್‌ಗಳು ಇದ್ದಲ್ಲಿ ಅಲ್ಲಿ ದರೋಡೆ ಸಾಧ್ಯತೆ ಹೆಚ್ಚು.
-    ಬ್ಯಾಂಕ್‌ಗಳಲ್ಲಿ ಹೆಚ್ಚು ಜನ ಗ್ರಾಹಕರು ಇಲ್ಲದ ಸಮಯದಲ್ಲಿ ಹಾಗೂ ಬಹುಪಾಲು ಬೆಳಗ್ಗೆ ಬ್ಯಾಂಕ್ ತೆರೆಯುವ ಮತ್ತು ಸಂಜೆ ಮುಚ್ಚುವ ಸಂದರ್ಭಗಳಲ್ಲಿ ದುಷ್ಕರ್ಮಿಗಳು ದಾಳಿ ಮಾಡಬಹುದು.
-    ಹೆಚ್ಚು ಹಣ ಬ್ಯಾಂಕಿನ ಶಾಖೆಯಲ್ಲಿ ಇರುವ ಬಗ್ಗೆ ಹೊರಗಿನವರಿಗೆ ಮಾಹಿತಿ ತಿಳಿದಾಗ ಅಥವಾ ಸ್ವತಃ ಬ್ಯಾಂಕ್ ಸಿಬ್ಬಂದಿ ಇತರರೊಂದಿಗೆ ಶಾಮೀಲಾದಾಗ ಇಂತಹ ಘಟನೆಗಳು ನಡೆಯುತ್ತವೆ.
-    ಬ್ಯಾಂಕ್‌ಗಳಿಗೆ ಶಸ್ತ್ರಸಜ್ಜಿತ ಕಾವಲುಗಾರರು ಇಲ್ಲದೇ ಇದ್ದಾಗ ದಾಳಿ ಸಾಧ್ಯತೆ ಹೆಚ್ಚು.
-     ಬ್ಯಾಂಕ್‌ಗಳಿಂದ ಬೇರೆ ಬ್ಯಾಂಕ್‌ಗಳಿಗೆ ಹೆಚ್ಚು ಹಣವನ್ನು ಬಾಡಿಗೆ ವಾಹನದಲ್ಲಿ ಸಾಗಿಸುವಾಗ ಹಾಗೂ ಸೂಕ್ತ ಭದ್ರತೆ ಇಲ್ಲದಿದ್ದಾಗ ರಸ್ತೆಯಲ್ಲಿ ಅಡ್ಡಗಟ್ಟಿ ಹಣ ಲೂಟಿ ಮಾಡುವ ಪ್ರಸಂಗಗಳು ಸಾಮಾನ್ಯವಾಗಿರುತ್ತವೆ.
ದರೋಡೆ ತಡೆಯಲು ಅನುಸರಿಸಬೇಕಾದ ಕ್ರಮ:
-    ಬ್ಯಾಂಕ್‌ಗಳಿಗೆ ಶಸ್ತ್ರಸಜ್ಜಿತ ಹಾಗೂ ನುರಿತ ಗಾರ್ಡ್‌ಗಳನ್ನು ನೇಮಿಸುವುದು.
-     ಬ್ಯಾಂಕ್‌ಗಳಿಗೆ ಸೈರನ್‌ಗಳನ್ನು ಅಳವಡಿಸುವುದು ಹಾಗೂ ಅವುಗಳಿಗೆ ಪ್ರತ್ಯೇಕ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಳ್ಳಿ.
-    ಬ್ಯಾಂಕ್‌ಗಳಿಗೆ ಸಿಸಿಟಿವಿಯನ್ನು ಅಳವಡಿಸಿ. ಬ್ಯಾಂಕ್ ವ್ಯವಹರಿಸುವ ಅವಧಿಯಲ್ಲಿ ಒಬ್ಬ ಸಿಬ್ಬಂದಿ ಸಿಸಿಟಿವಿಗಳನ್ನು ಸದಾ ಗಮನಿಸುವ ಹಾಗೆ ವ್ಯವಸ್ಥೆ ಮಾಡಿ. ಬ್ಯಾಂಕ್‌ನಲ್ಲಿ ಯಾರಾದರೂ ಸಂಶಯಾಸ್ಪದ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ಎಚ್ಚರವಹಿಸಿ ಹಾಗೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.