ಪೂರ್ಣ ಕಥೆ
ಕೆಲವರ ಪಾಲಿಗೆ ಕಿರುತೆರೆ ಮನೆ ಇದ್ದಂತೆ. ಇಲ್ಲಿನ ಬಹಳಷ್ಟು ನಟ, ನಟಿಯರು ಬಿಗ್ಸ್ಕ್ರೀನ್ ಅರ್ಥಾತ್ ಸಿನಿಮಾಗಳತ್ತ ಮುಖ ...

ಕೆಲವರ ಪಾಲಿಗೆ ಕಿರುತೆರೆ ಮನೆ ಇದ್ದಂತೆ. ಇಲ್ಲಿನ ಬಹಳಷ್ಟು ನಟ, ನಟಿಯರು ಬಿಗ್ಸ್ಕ್ರೀನ್ ಅರ್ಥಾತ್ ಸಿನಿಮಾಗಳತ್ತ ಮುಖ ಮಾಡುವುದು ಕಡಿಮೆ. ಧಾರಾವಾಹಿಗಳೇ ನಟನೆಯ ಶಾಲೆ ಎನ್ನುವ ನಟಿಯರಲ್ಲಿ ಅನ್ನಪೂರ್ಣ ಹೊಸಬರೇನಲ್ಲ. ಹೆಸರು ಓಲ್ಡ್ ಎನಿಸಿದರೂ ಇವರ ಇಮೇಜ್ ಮಾತ್ರ ಮಾಡರ್ನ್. 'ಅಶ್ವಿನಿ ನಕ್ಷತ್ರ'ದ ಮಾನಸಿಯಾಗಿರುವ ಅನ್ನಪೂರ್ಣ ಅವರ ಮಾತುಗಳು ಇಲ್ಲಿವೆ.
ನಿಮ್ಮ ಪರಿಚಯ ಹೇಳಿ?
ನಮ್ಮ ತಂದೆಯವರದ್ದು ಕನಕಪುರ. ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. ಜೆಪಿ ನಗರದಲ್ಲಿ ವಾಸ. ಮದುವೆಯಾಗಿದೆ. ಗಂಡ ಸಿವಿಲ್ ಇಂಜಿನಿಯರ್. ಓದಿದ್ದು ಫ್ಯಾಷನ್ ಡಿಸೈನ್. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದೆ. ಇಲ್ಲಿ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದೇನೆ. ಇತ್ತೀಚೆಗೆ ಸೆಂದಿಲ್ ಸಿಲ್ಕ್ಗೆ ಮಾಡೆಲ್ ಆಗಿದ್ದೆ.
ಕಿರುಕ್ಷೇತ್ರಕ್ಕೆ ಬಂದಿದ್ದು ಹೇಗೆ?
ಮಾಡೆಲಿಂಗ್ನಲ್ಲಿದ್ದಾಗ ಸಾಕಷ್ಟು ಅವಕಾಶಗಳು ಬಂದವು. ನಟನೆ ಬಗ್ಗೆ ಆಗ ಆಸಕ್ತಿ ಇರಲಿಲ್ಲ. ಆದರೆ, ಸುವರ್ಣ ವಾಹಿನಿಯ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ಎನ್ನುವ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಸಹಜವಾಗಿ ಕಿರುತೆರೆ ಸಂಪರ್ಕ ಹೆಚ್ಚಾಯಿತು. ಮದುವೆಯಾದ ಮೇಲೆ ಧಾರಾವಾಹಿಗಳಲ್ಲಿ ಅಭಿನಯಿಸುವ ಧೈರ್ಯ ಬಂತು. ಯಾಕೆಂದರೆ ಕಿರುತೆರೆ ಕೂಡ ನನ್ನ ಪ್ರಕಾರ ಒಂದು ಕುಟುಂಬ ಇದ್ದಂತೆ.
ಈಗ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ?
ಈಟಿವಿ ವಾಹಿನಿಯ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಮಾನಸಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿ ಸಿನಿಮಾ ನಾಯಕಿ ಆಗಬೇಕೆಂದು ಒದ್ದಾಡುತ್ತಿರುತ್ತೇನೆ. ಆಗ ಜೆಕೆ ಬಂದು ನನಗೆ ಅವಕಾಶ ಕೊಡುತ್ತಾರೆ. ಹೀಗೆ ನನ್ನ ಪಾತ್ರ ಸಾಗುತ್ತದೆ. ಪಾತ್ರ ಚೆನ್ನಾಗಿದೆ. ಇದರ ನಡುವೆ 'ಮಹಾಭಾರತ' ಧಾರಾವಾಹಿಯಲ್ಲಿ 3 ತಿಂಗಳು ನಟಿಸಿದೆ. ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ.
ನಿಮ್ಮ ಕನಸಿನ ಪಾತ್ರಗಳ ಬಗ್ಗೆ ಹೇಳಿ?
ವಲ್ಗರ್ ಇಲ್ಲದ, ನೆಗೆಟಿವ್ ಅಲ್ಲದ ಸಾಫ್ಟ್ ಪಾತ್ರಗಳು. ತುಂಬಾ ಅಮಾಯಕವಾಗಿರುವ ಹುಡುಗಿ ಪಾತ್ರ ಅಂದ್ರೆ ಇಷ್ಟ. ಪ್ರೇಕ್ಷಕರು ಕೂಡ ಅಂಥ ಪಾತ್ರಗಳನ್ನು ಹೆಚ್ಚು ನೋಡುತ್ತಾರೆಂಬ ನಂಬಿಕೆ.
ಯಾವ ಧಾರಾವಾಹಿಗಳನ್ನು ಹೆಚ್ಚು ನೋಡುತ್ತೀರಿ?
ಕನ್ನಡ ಧಾರಾವಾಹಿಗಳನ್ನು ನೋಡುವುದು ತುಂಬಾ ಕಡಿಮೆ. ಇತ್ತೀಚೆಗೆ ಎಲ್ಲ ಧಾರಾವಾಹಿಗಳನ್ನು ತುಂಬಾ ಎಳೆಯುತ್ತಿದ್ದಾರೆ. ನೋಡಕ್ಕೆ ಆಸಕ್ತಿ ಇಲ್ಲ. ಜೀ ವಾಹಿನಿಯಲ್ಲಿ ಬರುವ ಹಿಂದಿ ಧಾರಾವಾಹಿಗಳನ್ನು ಹೆಚ್ಚು ನೋಡುತ್ತೇನೆ.
ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನನಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ. ಊರು, ಮನೆ ಬಿಟ್ಟು ದೂರ ಚಿತ್ರೀಕರಣಕ್ಕೆ ಹೋಗಬೇಕು. ಆದರೆ, ಕಿರುತೆರೆ ಹಾಗಲ್ಲ. ಇಲ್ಲೇ ಕೆಲಸ. ಬೆಳಗ್ಗಿನಿಂದ ಸಂಜೆವರೆಗೂ ಪಾತ್ರ ಮಾಡಿ ಮನೆಗೆ ಬರಬಹುದು. ಸಿನಿಮಾಗಳ ವರ್ಕ್ ನೇಚರ್ ಬೇರೆ. ಹೀಗಾಗಿ ನನಗೆ ಅದು ಸೆಟ್ ಆಗಲ್ಲ. ಸದ್ಯ ಧಾರಾವಾಹಿ, ಮಾಡೆಲಿಂಗ್ ಸಾಕು.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


