ಎಲ್ಲರೂ ಜಗನ್ಮಾತೆಯ ಕೈಂಕರ್ಯದ ಸೇವಕರು!
ಜಗನ್ಮಾತೆ ಭಾರತಕ್ಕಷ್ಟೇ ಮಾತೆಯಲ್ಲ; ಜಗತ್ತಿಗೇ ಮಾತೆ! ಅವಳ ಕೈಂಕರ್ಯವನ್ನು ಕೈಗೊಳ್ಳುವ ಸೇವಕರು ಜಗತ್ತಿನಾದ್ಯಂತ ಇದ್ದಾರೆ.
ನ್ಯಾಯಾರ್ಕ್ನ ವೇದಾಂತ ಸೊಸೈಟಿಯು ಸ್ವಾಮಿ ಅಭೇದಾನಂದರ ಅವಿರತ ಶ್ರಮದಿಂದ ಬೃಹತ್ತಾಗಿ ಬೆಳೆದಿತ್ತು. ಈ ಸಂಘದ ಸದಸ್ಯೆಯೂ ಸ್ವಾಮೀಜಿಯ ಶಿಷ್ಯೆಯೂ ಆದ ವಿನ್ನಿ ಬೂಕ್ ಎಂಬಾಕೆ ಕ್ಯಾಲಿಫೋರ್ನಿಯಾದ ನಿರ್ಜನ ಪ್ರದೇಶವಾದ ಸ್ಯಾನ್ ಆ್ಯಂಟೋನ್ ಎಂಬಲ್ಲಿ 160 ಎಕರೆಯಷ್ಟು ವಿಸ್ತಾರವಾದ ಭೂಮಿಯನ್ನು ವೇದಾಂತ ಪ್ರಸಾರಕ್ಕಾಗಿ ಸಮರ್ಪಿಸಿದರು. ಅಲ್ಲಿ ಆಶ್ರಮವೊಂದನ್ನು ಸ್ಥಾಪಿಸುವ ಸಲುವಾಗಿ ಸ್ವಾಮೀಜಿ ಹರಿಭಾಯ್ಯವರನ್ನು ನೇಮಿಸಿದರು. ತಾವು ಹೇಗೆ ಮುಂದುವರಿಯಬೇಕು ಎಂದು ಅವರು ಕೇಳಿದಾಗ, 'ಈಗಲೇ ಕ್ಯಾಲಿಫೋರ್ನಿಯಾದಲ್ಲಿರುವ ಆಶ್ರಮಕ್ಕೆ ಹೋಗು, ಅಲ್ಲಿ ವೇದಾಂತ ಧ್ವಜವನ್ನು ಹಾರಿಸು, ಶಿಷ್ಯಪಡೆಯೊಂದನ್ನು ನಿರ್ಮಿಸು. ಈ ಕ್ಷಣದಿಂದ ಉಳಿದೆಲ್ಲವನ್ನೂ ಸುಟ್ಟುಹಾಕು, ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಜೀವನವನ್ನು ನಡೆಸು, ಉಳಿದುದನ್ನು ಜಗನ್ಮಾತೆ ನೋಡಿಕೊಳ್ಳುತ್ತಾಳೆ' ಎಂದರು.
ತುರೀಯಾನಂದರು ಮಿನ್ನಿ ಬೂಕ್ಳೊಂದಿಗೆ ಹೊರಟು ಅಮೆರಿಕದ ಎಲ್ಲ ವೇದಾಂತ ಸೊಸೈಟಿಗಳನ್ನು ಸಂದರ್ಶಿಸಿದರು. ನಂತರ ಹನ್ನೆರಡು ಮಂದಿ ಶಿಷ್ಯರೊಂದಿಗೆ ಸ್ಯಾನ್ ಆ್ಯಂಟೋನ್ ಕಣಿವೆಯ ಪ್ರದೇಶವನ್ನು ಪ್ರವೇಶಿಸಿದರು. ಎರಡು ವರ್ಷಗಳಲ್ಲಿ ಅಲ್ಲಿ ಶಾಂತಿ ಆಶ್ರಮವನ್ನು ಸ್ಥಾಪಿಸಿ, ಅಧ್ಯಾತ್ಮ ಪಿಪಾಸುಗಳಾಗಿ ಬಂದವರನ್ನು ತರಬೇತುಗೊಳಿಸುವಲ್ಲಿ ನಿರತರಾದರು. ಎಂದೆಂದಿಗೂ ಅಳಿಯದ ಅಧ್ಯಾತ್ಮಿಕ ವಾತಾವರಣವನ್ನು ನಿರ್ಮಾಣ ಮಾಡಿದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

