ರಂಗ ಉತ್ಸವ

'ರಂಗವರ್ತುಲ' ತಂಡ ಮೂರು ವರ್ಷ ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಎರಡು ದಿನಗಳ ರಂಗ ಉತ್ಸವವನ್ನು ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಮಾರ್ಚ್ 19ರಂದು ರಬ್ಡಿ ನಾಟಕವನ್ನು ಜೆ ಪಿ ನಗರದ ರಂಗಶಂಕರದಲ್ಲಿ ಸಂಜೆ 7.30ಕ್ಕೆ ಪ್ರದರ್ಶಿಸಲಿದೆ.
ಮಣ್ಣು ಜಲ್ಲಿ ಹೊತ್ತು ಜೀವನ ಸಾಗಿಸುವ ಸಾವಂತ್ರಿ ಮತ್ತವಳ ಬುದ್ಧಿಮಾಂದ್ಯ ಅಂಗವಿಕಲ ಮಗಳು ಪುಟ್ಟಕ್ಕನ ಸುತ್ತ ರಬ್ಡಿ ಬೆಳೆಯುತ್ತಾ ಸಾಗುತ್ತದೆ. ಪುಟ್ಟಕ್ಕನ ಭವಿಷ್ಯದಲ್ಲಿ ತಾನು ಕಾಣುವ ಕನಸುಗಳು ನನಸಾಗಲು ಸಾಧ್ಯವಿಲ್ಲವೆಂಬ ಅರಿವಿದ್ದರೂ, ಛಲಬಿಡದೆ ಆ ಕನಸುಗಳ ಬೆನ್ನೇರಿ ಮುನ್ನುಗ್ಗುವ ಸಾವಂತ್ರಿಯ ಬದುಕ ಪ್ರೀತಿಸುವ ಬಗೆ ನಮ್ಮೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ. ಪುಟ್ಟಕ್ಕನನ್ನು ವಿಶೇಷ ಶಾಲೆಗೆ ಸೇರಿಸುವ ಸಲುವಾಗಿ, ಅದಕ್ಕೆ ತಗುಲುವ ವೆಚ್ಚ ಭರಿಸಲು ಓರ್ವ ಐಟಿ ಉದ್ಯೋಗಿ ದಂಪತಿಗಳಿಗೆ ಬಾಡಿಗೆ ತಾಯಿಯಾಗಲು ಸಾವಂತ್ರಿ ಮುಂದಾಗುತ್ತಾಳೆ. ನೈಸರ್ಗಿಕ ಹಾಗು ಪ್ರಾಕೃತಿಕ ಕ್ರಿಯೆಗಳ ವಿರುದ್ಧದ ಮನುಷ್ಯನ ಸೆಣಸಾಟ, ತಾಯಿ-ಮಗು ನಡುವಣ ಅವಿನಾಭಾವ ಸಂಬಂಧ ಹಾಗು ತಾಯ್ತನದ ಸೂಕ್ಷ್ಮ ಸಂವೇದನೆಗಳ ಸುತ್ತಾ ರಬ್ಡಿ ತನ್ನನ್ನ ತಾನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ಬಾಡಿಗೆ ತಾಯಿಯ ಮೂಲಕ ಮುಗುವನ್ನು ಪಡೆಯುವ ಆ ಐಟಿ ಉದ್ಯೋಗಿ ದಂಪತಿಗಳ ಪ್ರಯತ್ನ ಸಫಲವಾಗುವುದೇ? ಸಾವಂತ್ರಿಯು ಆ ದಂಪತಿಗಳಿಗೆ ಮಗು ಹೆತ್ತು ಕೊಡುವಳೇ? ಸಾವಂತ್ರಿಯ ಕನಸುಗಳು ನನಸಾಗುವುದೆ? ಉತ್ತರಕ್ಕಾಗಿ ರಬ್ಡಿಯನ್ನು ನೋಡಬಹುದು,
ರಬ್ಡಿ (ಮಾರ್ಚ್ 19, 2014 ರಂಗಶಂಕರ ಸಂಜೆ 7.30ಕ್ಕೆ )
ನಿರ್ದೇಶನ: ನಿತೀಶ್ ಎಸ್
ರಚನೆ: ಹೇಮಲತ ಲೋಕೇಶ್ ಹಾಗೂ ನಿತೀಶ್.ಎಸ್
ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ: 9986828680
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


