ಅವಧಿ ತೀರುವ ಮುನ್ನ ಸಲ್ಲ
ಲೋಕಸಭೆ ಚುನಾವಣೆಗೆ ಈಗಾಗಲೇ ವಿಧಾನಸಭೆಗೆ ಆಯ್ಕೆಯಾದ ಜನಪ್ರಿಯ ಹಾಲಿ ಶಾಸಕರನ್ನು ಚುನಾವಣೆಗೆ...
ಲೋಕಸಭೆ ಚುನಾವಣೆಗೆ ಈಗಾಗಲೇ ವಿಧಾನಸಭೆಗೆ ಆಯ್ಕೆಯಾದ ಜನಪ್ರಿಯ ಹಾಲಿ ಶಾಸಕರನ್ನು ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸುತ್ತಿದೆ. ಇದು ಸಮಂಜಸವಲ್ಲ. ಗೆದ್ದರೆ, ಇವರ ಶಾಸಕರ ಸ್ಥಾನಕ್ಕೆ ಮರು ಚುನಾವಣೆ ನಡೆಯಬೇಕಾಗುತ್ತದೆ. ಇದರಿಂದ ಚುನಾವಣೆಯ ಖರ್ಚು ಹೆಚ್ಚಾಗುತ್ತದೆ. ಆದುದರಿಂದ ನಮ್ಮ ಸಂವಿಧಾನದಲ್ಲಿ ತಿದ್ದುಪಡಿ ತಂದು ಈಗಾಗಲೇ ಆಯ್ಕೆಯಾಗಿ ಜನಪ್ರತಿನಿಧಿಗಳಾದವರು ಅವರ ಅವಧಿ ತೀರುವ ಮುನ್ನ ಮತ್ತೊಮ್ಮೆ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ರಚಿಸಬೇಕು. ಒಂದು ವೇಳೆ ಇದು ಅಸಾಧ್ಯವಾದಲ್ಲಿ ಮರುಚುನಾವಣೆಗೆ ತಗಲುವ ಪೂರ್ತಿ ವೆಚ್ಚವನ್ನು ಅಭ್ಯರ್ಥಿ ಅಥವಾ ಆ ಪಕ್ಷದಿಂದಲೇ ಭರಿಸುವಂತೆ ಆಯೋಗ ನೋಡಿಕೊಳ್ಳಬೇಕು.
- ಕೆ. ಪಿ. ಅಶ್ವಿನ್ ರಾವ್, ಪದವಿನಂಗಡಿ, ಬೋಂದೇಲ್
ಸಾರ್ಥ ರಾಜಕಾರಣ ಸಮಂಜಸವಲ್ಲ
ಶಾಸಕರಾಗಿಯೇ ಮಾಡದ ಜನರ ಸೇವೆಯನ್ನು ಸಂಸದರಾಗಿ ಮಾಡಲು ಸಾಧ್ಯವೇ? ಶಾಸಕರಲ್ಲಿ ಎರಡು ಬಗೆಯ ಶಾಸಕರಿದ್ದಾರೆ, ಮೊದಲನೆಯವರು ಒಳ್ಳೆಯ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಮತ್ತು ಎರಡನೆಯವರೆಂದರೆ, ಬಡವರ ದುಡ್ಡು ತಿಂದು ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಾ ಹುಸಿ ಆಶ್ವಾಸನೆಯನ್ನು ಜನರಿಗೆ ನೀಡಿ ಮರಳು ಮಾಡುವವರು. ಎರಡನೆ ಬಗೆಯ ಶಾಸಕರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಾರದು, ಮೊದಲೂ ಶಾಸಕರಾಗಿದ್ದಾಗ ಒಳ್ಳೆಯ ಅಭಿವೃದ್ಧಿ ಕಾರ್ಯ, ಜನರ ಕಷ್ಟ-ನಷ್ಟಗಳಿಗೆ ಸರಿಯಾಗಿ ಸ್ಪಂದಿಸದವರು ಸಂಸದರಾದ ಮೇಲೆ ಏನು ಮಾಡಿಯ್ಯಾರು? ಜನರ ಸೇವೆಯನ್ನೇ ಮಾಡಬೇಕೆನ್ನುವವರು ಸ್ಪರ್ಧಿಸಲಿ. ರಾಜ್ಯದಲ್ಲಿ ನನಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಗದ ಕಾರಣ ಲೋಕಸಭೆಯಲ್ಲಿ ಸ್ಪರ್ಧಿಸಲೇಬೇಕೆನ್ನುವುದು ಸರಿಯಲ್ಲ.
- ಸಿದ್ದು ಬಸವನ ಬಾಗೇವಾಡಿ, ವಿಜಾಪುರ
ವೆಚ್ಚವನ್ನು ಅವರೇ ಭರಿಸಬೇಕು
ಲೋಕಸಭೆ ಚುನಾವಣೆಯಲ್ಲಿ ಹಾಲಿ ಶಾಸಕರು ಸ್ಪರ್ಧಿಸುವುದು ಸ್ವಲ್ಪವೂ ಸರಿಯಲ್ಲ. ಈಗಾಗಲೇ ಅವರು ಒಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುತ್ತಾರೆ. ಮತ್ತೊಂದು ಕಡೆ ಸ್ಪರ್ಧಿಸಿದರೆ ಇವರು ಶಾಸಕರಾಗಿರುವ ಕ್ಷೇತ್ರದ ಅಭಿವೃದ್ಧಿ ಕೆಲಸ ಕುಂಟಿತಗೊಳ್ಳುತ್ತದೆ. ಅಲ್ಲದೆ, ಮರು ಚುನಾವಣೆ ನಡೆಯಬೇಕು. ಜನರೂ ಇಂತಹವರ ವಿಶ್ವಾಸ ಕಳೆದುಕೊಳ್ಳುತ್ತಾರೆ. ಕಾನೂನಿನಲ್ಲಿ ಅವಕಾಶ ಇದೆಯಂದಾಕ್ಷಣ ಅದರ ದುರುಪಯೋಗಪಡಿಸಿಕೊಳ್ಳಬಾರದು. ಇವರು ಎಂತಹ ಜಾಣರೆಂದರೆ ತಮ್ಮ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧಿಸುವುದಿಲ್ಲ. ಒಮ್ಮೆ ಸೋತರೆ ತಮಗೆ ಅಧಿಕಾರ ತಪ್ಪುತ್ತದೆ ಎಂಬ ಭಯ. ಹಾಗಾಗಿ ಸೋತರೂ ಗೆದ್ದರೂ ಇವರು ಲಾಭದಲ್ಲೇ ಇರುತ್ತಾರೆ. ಶಾಸಕರಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಮತ್ತೆ ಸ್ಪರ್ಧಿಸದಂತೆ ಕಾನೂನಿನಲ್ಲೇ ತಿದ್ದುಪಡಿಯಾಗಬೇಕು. ಲೋಕಸಭೆಗೆ ಸ್ಪರ್ಧಿಸುವ ಇರಾದೆ ಇದ್ದರೆ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರಬೇಕು.
- ಪದ್ಮಾ ಕೃಷ್ಣಮೂರ್ತಿ, ತುಮಕೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಲೋಕಸಭೆ ಚುನಾವಣೆಯಲ್ಲಿ ಶಾಸಕರ ಸ್ಪರ್ಧೆ ಎಷ್ಟು ಸಮಂಜಸ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

