ಬೈಟುಕಾಫಿ

ಭೂಕಂಪದ ಮುನ್ಸೂಚನೆ ನೀಡುವ ಪ್ರಾಣಿಗಳು

Published On :
  • ಪ್ರಾಣಿಗಳು ಕೆಲವೊಮ್ಮೆ ಜ್ವಾಲಾಮುಖಿ, ಬಿರುಗಾಳಿ, ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ನೀಡುತ್ತವೆ.
  •     ಜೆಲ್ಲಿ ಮೀನು 10-15 ಗಂಡೆಗಳ ಮೊದಲೇ ಬಿರುಗಾಳಿಯ ಮುನ್ಸೂಚನೆ ಅರಿಯುತ್ತದೆ. ಸಮುದ್ರ ದಂಡೆಯಿಂದ ಸಮುದ್ರದಾಳಕ್ಕೆ ಹೋಗುತ್ತದೆ.
  •     ಕೇಡುಗಾಲ ಬಂದಾಗ ಅದನ್ನು ಮುಂಚೆಯೇ ಅರಿತು ಸಮುದ್ರದಾಳದ ಮೀನು ನೀರಿನ ಮೇಲ್ಮೈಗೆ ಬರುತ್ತದೆ.
  •     ಆರ್ಕ್ಟಿಕ್ ಪ್ರದೇಶದಲ್ಲಿ ವಾಸಿಸುವ ಟಾರಾಮಿಗಾನ್ ಎಂಬ ಹಕ್ಕಿಯನ್ನು ಪಕ್ಷಿಸಂಕುಲದ ಜ್ಯೋತಿಷಿ ಎಂದೇ ಗುರುತಿಸಲಾಗುತ್ತದೆ. ತನ್ನ ಪರಿಸರದಲ್ಲಿ ಮುಂದೆ ಆಗಲಿರುವ ವಿಕೋಪಗಳನ್ನು ಈ ಹಕ್ಕಿ ಗುರುತಿಸುತ್ತದೆ. ವೈಪರಿತ್ಯದ ಸೂಚನೆಗಳೇನಾದರೂ ತಿಳಿದರೆ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ.
  •     ಹಾವು ಮತ್ತು ಇಲಿಗಳು ಭೂಕಂಪದ ಮುನ್ಸೂಚನೆ ಸಿಕ್ಕ ತಕ್ಷಣ ತಮ್ಮ ಬಿಲಗಳನ್ನು ಬಿಟ್ಟು ದಿಕ್ಕೆಟ್ಟು ಓಡುತ್ತವೆ.
  •     ಮೀನುಗಳು ನೀರಿನಿಂದ ಮೇಲಕ್ಕೆ ಹಾರುತ್ತವೆ. ಅಕ್ವೇರಿಯಂನಲ್ಲಿರುವ ಮೀನುಗಳು ಅಕ್ವೇರಿಯಂಗೆ ಢಿಕ್ಕಿ ಹೊಡೆಯಲಾರಂಭಿಸುತ್ತವೆ.
  •     ಆಮೆಗಳು ಪಲ್ಟಿ ಹೊಡೆಯುತ್ತ ಓಡುತ್ತವೆ.
  •     ದನ ಕರು, ಕುರಿ ಮತ್ತು ಕುದುರೆಗಳು ತಾವಿರುವ ಜಾಗದಲ್ಲಿರಲು ನಿರಾಕರಿಸುತ್ತವೆ.
  •     ಕೋಳಿಗಳು ಗಿಡಯೇರುತ್ತವೆ. ಬಾತುಕೋಳಿಗಳು ನೀರಿಗೆ ಹೋಗಲು ನಿರಾಕರಿಸುತ್ತವೆ.
  •     ನಾಯಿಗಳು ವಿನಾಕಾರಣ ಬೊಗಳುತ್ತವೆ. ಹಂದಿಗಳು ಪರಸ್ಪರ ಕಚ್ಚಾಡುತ್ತವೆ.
  •     ಚಿಗರೆಗಳು ದಿಕ್ಕೆಟ್ಟು ಓಡುತ್ತವೆ ಮತ್ತು ಜಿರಳೆಗಳು ವೃತ್ತಾಕಾರವಾಗಿ ಸುತ್ತುತ್ತಿರುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.