ಶಪಿಸಿದವರೇ ಶುಭ ಹಾರೈಸುತ್ತೀರಿ!
ವಿವೇಕಾನಂದರು ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿದ್ದಾಗ ಅಮೆರಿಕದಾದ್ಯಂತ ಪ್ರಚಲಿತವಾಗುತ್ತಿದ್ದ ಘೋಷಣೆಯೆಂದರೆ ಕ್ರೈಸ್ತೀಕರಣ...
ವಿವೇಕಾನಂದರು ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿದ್ದಾಗ ಅಮೆರಿಕದಾದ್ಯಂತ ಪ್ರಚಲಿತವಾಗುತ್ತಿದ್ದ ಘೋಷಣೆಯೆಂದರೆ ಕ್ರೈಸ್ತೀಕರಣ. ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗುತ್ತಿದ್ದ ಈ ನಂಬಿಕೆಯನ್ನು ಸ್ವಾಮೀಜಿ ಧರ್ಮದ ಅನುಷ್ಠಾನ ಎಂಬ ಉಪನ್ಯಾಸದಲ್ಲಿ ಉಗ್ರವಾಗಿ ಖಂಡಿಸಿ ಮೂದಲಿಸಿದರು.
'ನೀವು ಹೇಳುತ್ತಿರುವ ಅನುಷ್ಠಾನ ಧರ್ಮ ಯಾವುದು? ರಸ್ತೆಗಳನ್ನು ಶುಚಿಗೊಳಿಸುವುದು, ಆಸ್ಪತ್ರೆಗಳನ್ನು ಕಟ್ಟಿಸುವುದು ಇವೇ ಅಲ್ಲವೆ? ಆದರೆ, ಫಲಾಪೇಕ್ಷೆಯಿಲ್ಲದೆ ಮಾಡಿದ ಕರ್ಮವು ನಿಮ್ಮ ಆತ್ಮಕ್ಕೆ ಒಳಿತನ್ನುಂಟುಮಾಡುತ್ತದೆ. ಲೋಕೋಪಕಾರವು ಒಳ್ಳೆಯದೇ. ಆದರೆ ಅದೇ ಧರ್ಮವಲ್ಲ. ಅದು ನಾಸ್ತಿಕವಾದಕ್ಕಿಂತಲೂ ಸ್ವಲ್ಪ ಮೇಲು. ಈ ಪ್ರಪಂಚದ ಒಟ್ಟು ಒಳಿತು ಕೆಡುಕುಗಳನ್ನು ಎಣಿಸಿ ನೋಡಿ, ಯುಗಯುಗಾಂತರಗಳಿಂದಲೂ ಅದೇನಾದರೂ ಬದಲಾಗಿದೆಯೇ? ಅವೆಲ್ಲ ಹಾಗೆಯೇ ಉಳಿದಿವೆ. ಹೆಚ್ಚೆಂದರೆ ಅವುಗಳ ರೂಪ ಬದಲಾಗಿರಬಹುದಷ್ಟೆ. ಒಂದು ರಾಷ್ಟ್ರ ಶ್ರೀಮಂತವಾದರೆ ಮತ್ತೊಂದು ಬಡವಾಗುತ್ತದೆ. ಅಲೆಯ ಒಂದು ಭಾಗ ಉಬ್ಬಾದರೆ ಮತ್ತೊಂದು ತಗ್ಗಾಗಿರುತ್ತದೆ. ಒಳ್ಳೆಯದನ್ನು ಮಾಡಿ, ಆದರೆ ಒಳ್ಳೆಯದಕ್ಕೋಸ್ಕರ ಒಳ್ಳೆಯದನ್ನು ಮಾಡಿ. ಅನುಷ್ಠಾನ ಧರ್ಮವೆಂದರೆ ನನ್ನನ್ನು ನಾನು ಆತ್ಮವೆಂದರಿಯುವುದು. ನೀವು ನಿಮ್ಮನ್ನು ಲೌಕಿಕ ವಸ್ತುವಿನೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವ ತಪ್ಪು ಮಾಡುವುದನ್ನು ನಿಲ್ಲಿಸಿ. ನಿಮ್ಮನ್ನು ನೀವು ಆತ್ಮ ಎಂದರಿತುಕೊಳ್ಳದಿದ್ದರೆ ನೀವು ಆಸ್ಪತ್ರೆಗಳನ್ನು ಕಟ್ಟಿಸಿದರೇನು? ರಸ್ತೆಗಳನ್ನು ನಿರ್ಮಿಸಿದರೇನು? ನೀವು ಸಕಲರಲ್ಲೂ ಆತ್ಮವನ್ನೇ ಕಾಣುವಿರಾದರೆ ಅದೇ ನಿಜವಾದ ಅನುಷ್ಠಾನ ಧರ್ಮ.' ಹೀಗೆ ನಿರ್ಭಿಡೆಯಿಂದ ಸ್ವಾಮೀಜಿ ಮಾನವಕುಲದ ಮೇಲೆ ಮುಸುಕಿರುವ ದುಃಖದ ತೆರೆಯನ್ನು ಸರಿಸಲು ಸಾರ್ವಕಾಲಿಕ ಅನುಷ್ಠಾನ ಮಾರ್ಗವನ್ನು ತೋರಿಸಿದರು.ಟಿ
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

