ನಿಮಿತ್ತ ನಾಟಕ
ಅನನ್ಯ ಸಂಸ್ಥೆಯವರಿಂದ ಬಹು ಜನಪ್ರಿಯವಾದ 'ನಿಮಿತ್ತ'ದ ನಂತರ ಹೊಸ ನಾಟಕ 'ಗತಿ' ಇದೇ ಮಾರ್ಚ್ 29 ರ ಶನಿವಾರ ರಂಗಶಂಕರದಲ್ಲಿ ಮಧ್ಯಾನ್ಹ 3-30 ಮತ್ತು ರಾತ್ರಿ 7-30 ಕ್ಕೆ ಪ್ರದರ್ಶನವಾಗುತ್ತಿದೆ. 'ನಿಮಿತ್ತ' ನಾಟಕವನ್ನು ರಚಿಸಿ, ನಿರ್ದೇಶಿಸಿ, ಹಾಗೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಎಸ್.ಎನ್. ಸೇತೂರಾಂ ಅವರೇ ಈ 'ಗತಿ' ಯನ್ನು ರಚಿಸಿ ನಿರ್ದೇಶಿಸಿ ನಟಿಸುತ್ತಿದ್ದಾರೆ.
ಸ್ವಾತಂತ್ರ್ಯಾನಂತರದ 60 ವರ್ಷಗಳ ಆಗುಹೋಗುಗಳು ನಗರದ ಮಧ್ಯಮ ವರ್ಗದ ಕುಟುಂಬದ ಮೇಲೆ ಹೇಗೆ ಪರಿಣಾಮದ ಸೂಕ್ಷ್ಮಗಳನ್ನು ಹಿಡಿಯವ ಪ್ರಯತ್ನವಿಲ್ಲಿದೆ. ಎರಡು ಪಾತ್ರಗಳಲ್ಲೇ ನಿರೂಪಣೆ ಮಾಡಿರುವುದು ಇಲ್ಲಿನ ವಿಶೇಷ. 80ರ ವರ್ಷದ ಮುದುಕ ಮತ್ತು ಮತ್ತವನ ಮದುವೆಯಾಗದ, ನಿರುದ್ಯೋಗಿಯಾದ, ಸುಶಿಕ್ಷಿತ ಮೊಮ್ಮಗಳ ನಡುವಿನ ಪರಸ್ಪರ ದೋಷಾರೋಪಣೆಯ ಮೂಲಕ ಅರವತ್ತು ವರ್ಷಗಳ ಹಿಂದಿನ ಸಂಭ್ರಮಗಳನ್ನು ಮೆಲುಕು ಹಾಕುತ್ತಲೇ ಸದ್ಯದ ಹತಾಶೆಯ ಸ್ಥಿತಿಯನ್ನು ಬಿಚ್ಚಿಡುತ್ತವೆ. ಈ ಪಯಣದ ಮಜಲುಗಳನ್ನು ದಾಖಲಿಸುವ ಪ್ರಯತ್ನವೇ ಈ 'ಗತಿ' ನಾಟಕ. ಸೇತೂರಾಂ ಅವರೊಂದಿಗೆ ಶ್ವೇತಾ ಅವರು ಅಭಿನಯಿಸುತ್ತಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 944805998
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

