ಬೈಟುಕಾಫಿ

ಚಿತ್ರಲೋಕ ಸಭಾ

ಚಿತ್ರಲೋಕ ಸಭಾ
Published On :

ಚಿತ್ರ: ಉದ್ಭವ (1988)
ತಾರಾಗಣ: ಅನಂತ್‌ನಾಗ್, ಕೆ.ಎಸ್. ಅಶ್ವಥ್, ದಿನೇಶ್
ನಿರ್ದೇಶನ: ಕೋಡ್ಲು ರಾಮಕೃಷ್ಣ


ಕನ್ನಡ ಚಿತ್ರರಂಗ ಮಾತ್ರವೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಮೂಡಿಬಂದ ವಿಭಿನ್ನ ಚಿತ್ರವಿದು. ರಾಜಕೀಯ ಎಳೆಯಲ್ಲೇ ಕಥೆ ಸಿದ್ಧವಾಗಿದ್ದರೂ, ನಮ್ಮ ಸಮಾಜದ ಭ್ರಷ್ಟ ವ್ಯವಸ್ಥೆಯನ್ನು ವಿಡಂಬನಾತ್ಮಕ ದೃಷ್ಟಿಯಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿತ್ತು. ಅದರಲ್ಲೂ, ದೇವರು, ದಿಂಡಿರು, ಆಚಾರ, ವಿಚಾರಗಳ ತೊಳಲಾಟದಲ್ಲಿ ಯಾವುದು ನೈಜ ಭಕ್ತಿ, ಯಾವುದೇ ಅಂಧ ಶ್ರದ್ಧೆ ಎಂಬ ದ್ವಂದ್ವದಲ್ಲೇ ಜೀವನ ತಳ್ಳುವ ಮುಗ್ಧ ಭಾರತೀಯ ಮನಸ್ಸುಗಳಲ್ಲಿನ ಧಾರ್ಮಿಕ ವಿಚಾರಗಳನ್ನು ಸ್ವಾರ್ಥ ರಾಜಕಾರಣಿಗಳು ಹೇಗೆ ತಮ್ಮ ಬೇಳೆ ಬೇಯಿಸಲು ಉಪಯೋಗಿಸುತ್ತಾರೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ ಚಿತ್ರ- ಉದ್ಭವ.  ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆಯೊಂದರ ಅಗಲೀಕರಣಕ್ಕಾಗಿ ಸರ್ಕಾರ ಮುಂದಾದಾಗ, ಇದನ್ನು ತಪ್ಪಿಸಲು ಕೆಲ ವ್ಯಕ್ತಿಗಳು ನಿರ್ಧರಿಸಿ, ರಸ್ತೆಯಲ್ಲಿ ಏಕಾಏಕಿ ಗಣಪತಿ ವಿಗ್ರಹವೊಂದನ್ನು ಪ್ರತಿಷ್ಠಾಪಿಸಿ, ದೇವರು ಉದ್ಭವಗೊಂಡ ಎಂಬ ಸುದ್ದಿ ಹಬ್ಬಿಸಿ ರಸ್ತೆಯ ಅಗಲೀಕರಣವನ್ನು ತಪ್ಪಿಸುತ್ತಾರೆ. ಇಡೀ ವೃತ್ತಾಂತದಲ್ಲಿ ರಾಜಕೀಯ ವ್ಯಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು, ಸ್ವಾರ್ಥ ನಾಗರಿಕರು ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆಂಬುದೂ ಅನಾವರಣಗೊಳ್ಳುತ್ತದೆ. ಈ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಲೇಖನಿ ಹಿಡಿದಿರುವುದು ವಿಶೇಷ. ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಚಂದ್ರಶೇಖರ್ ಬರೆದಿದ್ದಾರೆ. ಖ್ಯಾತ ಪತ್ರಕರ್ತ, ವಾರಪತ್ರಿಕೆ ಸಂಪಾದಕರಾಗಿದ್ದ ದಿವಂಗತ ಬಿ.ವಿ.ವೈಕುಂಠರಾಜು ಬರೆದ ಉದ್ಭವ ಕಾದಂಬರಿ ಆಧರಿಸಿ ಈ ಸಿನಿಮಾ ತಯಾರಾಗಿತ್ತು.

-ಚೇತನ್ ಓ.ಆರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.