ಬೈಟುಕಾಫಿ

ಪಾದ್ರಿಯ ದೃಷ್ಟಿಯಲ್ಲಿ ಸ್ವಾಮೀಜಿ ವ್ಯಕ್ತಿತ್ವ!

Published On :

ವಿವೇಕಾನಂದರು ಪಾಶ್ಚಾತ್ಯ ಪ್ರವಾಸಿಗರೊಂದಿಗೆ ಕೈರೋದಲ್ಲಿದಾಗ ಇದ್ದಕ್ಕಿದ್ದಂತೆ ತಮ್ಮ ಪ್ರವಾಸಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗಲು ತೀರ್ಮಾನಿಸಿದರು.
ಸ್ವಾಮೀಜಿ ಹಡಗಿನಲ್ಲಿ ಪ್ರಯಾಣಿಸುವಾಗ ಅದೇ ಹಡಗಿನಲ್ಲಿದ್ದ ಅಮೆರಿಕನ್ ಪಾದ್ರಿ ರೀವ್ಸ್ ಕ್ಯಾಲ್ಕಿನ್ಸ್ ಸ್ವಾಮೀಜಿಯನ್ನು ಭೇಟಿ ಮಾಡಿದ. ಕ್ಯಾಲ್ಕಿನ್ಸ್ ಈ ಹಿಂದೆ ಚಿಕಾಗೋ ಸಮ್ಮೇಳನದಲ್ಲಿ ಸ್ವಾಮೀಜಿಯನ್ನು ಕಂಡಿದ್ದ. ಅವರ ರಾಜಠೀವಿಯನ್ನು ಮಾತಿನ ಶೈಲಿಯನ್ನು ಕಂಡು, ಅವರು ಕೇವಲ ತಮ್ಮ ಶಕ್ತಿಯುತ ವ್ಯಕ್ತಿತ್ವದಿಂದ ಜನರನ್ನು ಮೋಡಿ ಮಾಡಿದ್ದರೇ ಹೊರತು ತಮ್ಮ ಭಾವನೆ-ಬೋಧನೆಗಳಿಂದಲ್ಲ ಎಂದು ನಂಬಿದ್ದ. ಆದರೆ ಈಗ ಅವನ ಪೂರ್ವಗ್ರಹಗಳೆಲ್ಲ ನಿವಾರಣೆಯಾದವು. ರೀವ್ಸ್ ತನಗರಿವಿಲ್ಲದಂತೆ ಅವರೆಡೆಗೆ ಆಕರ್ಷಿತನಾಗಿದ್ದ.
ಸ್ವಾಮೀಜಿ, 'ನೀವು ಅಮೆರಿಕನ್ನರೆ?' ಹೌದೆಂದ ಕ್ಯಾಲ್ಕಿನ್. 'ನೀವು ಮಿಷನರಿಗಳೆ?' ಎಂದು ಕೇಳಿದರು ಸ್ವಾಮೀಜಿ. ಅದಕ್ಕೂ ಹೌದೆಂದ ಕ್ಯಾಲ್ಕಿನ್. 'ನೀವೇಕೆ ನನ್ನ ರಾಷ್ಟ್ರದಲ್ಲಿ ನಿಮ್ಮ ಧರ್ಮವನ್ನು ಪ್ರಚಾರ ಮಾಡುವುದು?' ಎಂದರು ಸ್ವಾಮೀಜಿ. 'ನೀವೇಕೆ ನನ್ನ ರಾಷ್ಟ್ರದಲ್ಲಿ ನಿಮ್ಮ ಧರ್ಮ ಪ್ರಚಾರ ಮಾಡುತ್ತೀರಿ?' ಎಂದು ಕೇಳಿದಾಗ ಅರೆಕ್ಷಣ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿದ ಬಳಿಕ ಇಬ್ಬರೂ ಗಟ್ಟಿಯಾಗಿ ನಕ್ಕುಬಿಟ್ಟರು.
ಸ್ವಾಮೀಜಿಯ ವಾಗ್ಛರಿಯನ್ನು ಕಂಡು ಕ್ಯಾಲ್ಕಿನ್, 'ಮಹಾಪೂರ ಬಂದ ಗಂಗಾನದಿಯಂತಿರುತ್ತಿತ್ತು. ಅದನ್ನು ಯಾರೂ ತಡೆಯಲು ಶಕ್ಯವಿರಲಿಲ್ಲ' ಎಂದು ವರ್ಣಿಸಿದ್ದಾನೆ.
'ಸ್ವಾಮೀಜಿಯ ನಿಗೂಢತೆಯು ಒಂದು ಅದ್ಭುತ. ಕೌತುಕಮಯ. ಏಕೆಂದರೆ ಅದು ಯಾವುದೇ ಬಾಹ್ಯಶಕ್ತಿಯ ಪ್ರಭಾವಕ್ಕೆ ಒಳಗಾಗುತ್ತಿರಲಿಲ್ಲ. ನಮ್ಮ ಸಂಭಾಷಣೆಯು ಆತ್ಮಜೀವಗಳ ಕುರಿತಾಗಿ ತಿರುಗಿಕೊಂಡಾಗ ಅವರ ಭಾರವಾದ ಕಣ್ರೆಪ್ಪೆಗಳು ನಿಧಾನವಾಗಿ ಕೆಳಮುಖವಾಗುತ್ತಿದ್ದವು. ನನಗೆ ಪ್ರವೇಶವಿಲ್ಲದ ಯಾವುದೋ ಲೋಕದೊಳಕ್ಕೆ ಅವರು ತೇಲಿ ಹೋಗುತ್ತಿದ್ದರು' ಎಂದು ಬರೆಯುತ್ತಾರೆ.ಟಿ

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.