ಬೈಟುಕಾಫಿ

ಚಿತ್ರಲೋಕ ಸಭಾ

ಚಿತ್ರಲೋಕ ಸಭಾ
Published On :

ಚಿತ್ರ: ಅಭಿಮನ್ಯು (1990), ತಾರಾಗಣ: ರವಿಚಂದ್ರನ್, ಸೀತಾ, ಅನಂತ್ ನಾಗ್, ನಿರ್ದೇಶನ: ರವಿರಾಜಾ ಪಿನಿಶೆಟ್ಟಿ
ಇದು ತೆಲುಗು ಚಿತ್ರ 'ಅಂಕುಶಂ'ನ ರಿಮೇಕ್. ರವಿರಾಜಾ ಪಿನಿಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ತೆರೆಕಂಡಿದ್ದ ಈ ಚಿತ್ರ ಅಂದಿನ ತೆಲುಗು ನಟ ರಾಜಶೇಖರ್ ಅವರಿಗೆ ಜನಪ್ರಿಯತೆ ತಂದುಕೊಟ್ಟ ಚಿತ್ರಗಳಲ್ಲೊಂದು. ಕನ್ನಡಕ್ಕೂ ಅವರದ್ದೇ ನಿರ್ದೇಶನ. ನಿಷ್ಠಾವಂತ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬ ಭ್ರಷ್ಟ ರಾಜಕೀಯ ವ್ಯವಸ್ಥೆಯೆದುರು ಹೋರಾಡುವ ಕಥೆಯನ್ನು ಈ ಚಿತ್ರ ಹೊಂದಿದೆ. ತೆಲುಗಿನಲ್ಲಿ ಡಾ. ರಾಜಶೇಖರ್ ಅವರು ನಾಯಕನಾಗಿ ಅಭಿನಯಿಸಿದ್ದರೆ, ಕನ್ನಡದಲ್ಲಿ ಈ ಚಿತ್ರಕ್ಕೆ ರವಿಚಂದ್ರನ್ ಅವರು ನಾಯಕರಾಗಿ ಅಭಿನಯಿಸಿದ್ದರು.  ಅದುವರೆಗೂ ರೊಮ್ಯಾಂಟಿಕ್ ಹೀರೋ ಆಗಿಯೇ ಗಮನ ಸೆಳೆದಿದ್ದ ಕನ್ನಡದ ಕನಸುಗಾರ ರವಿಚಂದ್ರನ್, ಫಾರ್ ಎ ಚೇಂಜ್ ಎಂಬಂತೆ ಇಂಥ ಆ್ಯಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಜನ ಇದನ್ನು ಎಷ್ಟರಮಟ್ಟಿಗೆ ಸ್ವೀಕರಿಸಿದರು ಎನ್ನುವುದಕ್ಕಿಂತ ತಮ್ಮ ಇಮೇಜ್ಗೆ ಹೊರತಾಗಿಯೂ ಬೆಳೆಯಲು ರವಿಚಂದ್ರನ್ ಪ್ರಯತ್ನಿಸಿದ್ದು ಮೆಚ್ಚತಕ್ಕ ಅಂಶ. ಅಂದಹಾಗೆ, ಈ ಚಿತ್ರದಲ್ಲಿ ಗಮನ ಸೆಳೆಯುವ ಮತ್ತೊಂದು ಪಾತ್ರದಲ್ಲಿರುವುದು ನಟ ಅನಂತ್ನಾಗ್. ಶಾಲಾ ಮಾಸ್ತರಾಗಿ ನಂತರ, ರಾಜಕೀಯ ಸೇರಿ ನಿಷ್ಠಾವಂತ ರಾಜಕಾರಣಿಯಾಗಿ ಹೆಸರು ಮಾಡಿದ್ದ ವ್ಯಕ್ತಿಯೊಬ್ಬನ ಪಾತ್ರದಲ್ಲಿ ಅನಂತ್ನಾಗ್, ಗಮನ ಸೆಳೆಯುತ್ತಾರೆ. ತೆಲುಗಿನಲ್ಲಿ ಖಳನಟರಾಗಿ ಅಂಕುಶಂ ಮೂಲಕ ಎಂಟ್ರಿ ಕೊಟ್ಟು, ಸಂಚಲನ ಮೂಡಿಸಿದ್ದ ರಾಮಿರೆಡ್ಡಿ, ಈ ಚಿತ್ರದಲ್ಲೂ ಅದೇ ಪಾತ್ರ ಮಾಡಿದ್ದಾರೆ. ಹಿಂದಿಗೂ ಪ್ರತಿಬಂಧ್ ಹೆಸರಲ್ಲಿ ರೀಮೇಕ್ ಆಗಿದ್ದ ಈ ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ ಹಾಗೂ ಜೂಹಿ ಚಾವ್ಲಾ ನಟಿಸಿದ್ದರು.

-ಚೇತನ್ ಓ.ಆರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.