ಬೈಟುಕಾಫಿ

ಚಕ್ರಚಂಡಿಕೆ ಮತ್ತು ಮಾಗಧ ವಧೆ ಯಕ್ಷಗಾನ

ಚಕ್ರಚಂಡಿಕೆ ಮತ್ತು ಮಾಗಧ ವಧೆ ಯಕ್ಷಗಾನ
Published On :

ಸುಬ್ರಹ್ಮಣ್ಯ ಚಿಟ್ಟಾಣಿ ಅವರಿಗೆ 50 ತುಂಬಿದ ಸಂದರ್ಭದಲ್ಲಿ ಯಕ್ಷಕಲಾಸಾಗರ ಹಾಗೂ ವಿವೇಕಯುಗ ಪ್ರಕಾಶನ ಸಹಯೋಗದಲ್ಲಿ ಸುಪ್ರಸಿದ್ಧ ಕಲಾವಿದರಿಂದ 'ಅಪ್ಪಿ ಸುವರ್ಣರೇಖೆ' ಕಾರ್ಯಕ್ರಮದಡಿ ಚಕ್ರಚಂಡಿಕೆ ಹಾಗೂ ಮಾಗಧ ವಧೆ ಯಕ್ಷ ಪ್ರಸಂಗಗಳು ಮಾರ್ಚ್ 30, ಭಾನುವಾರದಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿವೆ. ಯಕ್ಷಪಾತ್ರಧಾರಿಗಳಲ್ಲಿ ವಿಶೇಷ ಆಕರ್ಷಣೆ ಚಿಟ್ಟಾಣಿಯವರ ಘಟೋತ್ಕಚ. ಜತೆಗೆ ಸುಬ್ರಹ್ಮಣ್ಯ ಚಿಟ್ಟಾಣಿ, ಭಾಸ್ಕರ ಜೋಶಿ ಶಿರಳಗಿ, ಪ್ರಭಾಕರ ಹಣಜಿಬೈಲು, ಅಶೋಕ ಭಟ್ಟ, ಸುಧೀಂದ್ರ ಹೊಳ್ಳ, ಕಾರ್ತಿಕ ಚಿಟ್ಟಾಣಿ, ನಾಗೇಶ ಗೌಡ, ರಾಮಚಂದ್ರ ಭಟ್ಟ, ಬಳ್ಕೂರು ಕೃಷ್ಣ ಯಾಜಿ, ವೆಂಕಟೇಶರಾವ್ ಜಲವಳ್ಳಿ, ಸುಬ್ರಹ್ಮಣ್ಯ ಯಲಗುಪ್ಪ, ಹವ್ಯಕ ಮಂಜು ಹಾಗೂ ಕಾಸರಗೋಡು ಅವರ ವಿಶೇಷ ಆಕರ್ಷಣೆಯಿದೆ. ಬಾಲಗೋಪಾಲನಾಗಿ ಕುಮಾರ್ ಆದಿತ್ಯ ಭಟ್ ಮನಸೆಳೆಯಲಿದ್ದಾನೆ.
ಭಾಗವತಿಕೆ: ಸುಬ್ರಹ್ಮಣ್ಯ ಧಾರೇಶ್ವರ, ಸರ್ವೇಶ್ವರ ಹೆಗಡೆ, ಅಚವೆ ರವೀಂದ್ರ ಭಟ್, ಶಂಕರ ಭಾಗವತ, ಗಣೇಶ ಭಂಡಾರಿ, ಕೆಸಲಕೊಪ್ಪ, ಗಣೇಶ ಗಾಂವ್ಕರ ಅವರದು. ವೇಷಭೂಷಣ: ನಾಗರಾಜ ಪಂಚಲಿಂಗ ಅವರದು. ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ಯಶವಂತ ಸರದೇಶ ಪಾಂಡೆಯವರು ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ: ಎ.ಎನ್. ಹೆಗಡೆ, ಹೆಗಡೆಮನೆ, ಕಡತೋಕ (9448516551), ಮನೋಜ್ ಭಟ್ (9880604186) ಸಂಪರ್ಕಿಸಿ.ಟಿ

ತಿಪ್ಪಜ್ಜಿ ಸರ್ಕಲ್ ಬಿಡುಗಡೆ
ಚಿತ್ರದುರ್ಗದ ಸೃಷ್ಠಿಸಾಗರ ಪ್ರಕಾಶನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾರ್ಚ್ 30ರಂದು ಭಾನುವಾರ ಬೆಳಗ್ಗೆ 11ಕ್ಕೆ ಖ್ಯಾತ ಕಾದಂಬರಿಕಾರ  ಬಿ.ಎಲ್. ವೇಣು ಅವರ 'ತಿಪ್ಪಜ್ಜಿ ಸರ್ಕಲ್' ಕಥಾ ಸಂಕಲನವನ್ನು ಬಿಡುಗಡೆ ಮಾಡುತ್ತಿದ್ದಾರೆ. ಮದಕರಿನಾಯಕ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಿ. ಬೋರಪ್ಪ ಅಧ್ಯಕ್ಷತೆಯಲ್ಲಿ ಡಾ. ಬಂಜಗೆರೆ ಜಯಪ್ರಕಾಶ್ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಖ್ಯಾತ ವಿಮರ್ಶಕರಾದ ಡಾ.ಲೋಕೇಶ್  ಅಗಸನಕಟ್ಟೆ ಅವರು ಕೃತಿ ಕುರಿತು ಮಾತಾಡಲಿದ್ದಾರೆ. ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನೀಲಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿರೂಪಣೆಯನ್ನು ಕೆ. ವೆಂಕಣ್ಣಾಚಾರ್ ಮಾಡಲಿದ್ದು ಈ ಕಾರ್ಯಕ್ರಮವು ಪತ್ರಕರ್ತರ ಸಾಂಸ್ಕೃತಿಕ ಭವನ ದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.