ಬೈಟುಕಾಫಿ

ಪ್ರೇರಕಶಕ್ತಿಯಾಗಿರಲಿ

Published On :

ದೇಶದ ಪ್ರಧಾನಿ ಪ್ರಜೆಗಳಿಗೆ ಮಾದರಿ, ಸ್ಫೂರ್ತಿ ನೀಡುವ ಶುದ್ಧ ಚಾರಿತ್ರ್ಯ ಹೊಂದಿರುವ ಉತ್ತಮ ವಾಗ್ಮಿಯಾಗಿರಬೇಕು. ಕೇವಲ ಪದವಿಗೆ ಅಂಟಿಕೊಳ್ಳದೆ, ಯಾರ ಕೈಗೊಂಬೆಯಾಗದೇ, ನಿಷ್ಪಕ್ಷಪಾತವಾಗಿ ಆಡಳಿತ ನೀಡುವವನಾಗಿರ ಬೇಕು. ರೈತರ ಹಿತ ಕಾಪಾಡಿ, ದೇಶದ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ನಿರೋದ್ಯೋಗ, ಬಡತನ, ಅನಕ್ಷರತೆ, ನಿರ್ಮೂಲನೆಗೆ ಸಂಕಲ್ಪ ಮಾಡಬೇಕು. ಭಯೋತ್ಪಾದನೆ, ಭ್ರಷ್ಟಚಾರ, ಕೋಮುವಾದವನ್ನು ಅಳಿಸಿಹಾಕಲು ಕಠಿಣ ಕಾನೂನು ಜಾರಿಗೊಳಿಸಬೇಕು. ಒಟ್ಟಿನಲ್ಲಿ ದೇಶವನ್ನು ವಿಶ್ವಮಟ್ಟದಲ್ಲಿ ಬಲಾಢ್ಯರಾಷ್ಟ್ರವನ್ನಾಗಿ ನಿರ್ಮಿಸಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ಪ್ರೇರಕಶಕ್ತಿಯಾಗಿರಬೇಕು.
-ಹನುಮಂತ ಡಿ. ವಾಲೇಕಾರ್, ಬಪ್ಪೂರು

ದೇಶದ ಹಿತರಕ್ಷಕ ಬೇಕು
ಭಾರತದ ಪ್ರಧಾನಿಯಾಗುವವರು ಮೊದಲಿಗೆ ಉತ್ತಮ ಆಡಳಿತವನ್ನು ನೀಡುವಂಥವ ನಿಷ್ಠಾವಂತರಾಗಿರಬೇಕು. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಬಡತನ, ನಿರುದ್ಯೋಗ, ಭಯೋತ್ಪಾದನೆ, ಭ್ರಷ್ಟಾಚಾರ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಸೌಲಭ್ಯ, ಔಷಧಗಳಲ್ಲಿ ಬಡವರಿಗೆ ರಿಯಾಯಿತಿ, ಆರ್ಥಿಕ ಸ್ಥಿತಿ ಮತ್ತು ವಿದ್ಯುತ್ ಕೊರತೆಯಂತಹ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ದೇಶದ ಒಳಗೆ ನುಸುಳುವ ನಕ್ಸಲರು, ಉಗ್ರಗಾಮಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕೇವಲ ಚುನಾವಣಾ ಸಂದರ್ಭಗಳಲ್ಲದೆ ಇತರ ಸಂದರ್ಭಗಳಲ್ಲೂ ರಾಜ್ಯ, ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು.
-ಸಿ.ಡಿ.ಮಹೇಶ್, ಮೈಸೂರು

ದಕ್ಷ ಆಡಳಿತಗಾರನಾಗಿರಬೇಕು
ದೇಶದ ಪ್ರಧಾನಿ ನಿಷ್ಪಕ್ಷಪಾತಿ, ಶುದ್ಧಹಸ್ತ, ಹೊಸ ಹೊಸ ಯೋಜನೆಗಳನ್ನು ಸಕಾಲದಲ್ಲಿ ಜಾರಿಗೆ ತಂದು ಬಡವರ, ದೀನ ದಲಿತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೇಶದ ಸಮಸ್ತರ ರಕ್ಷಣೆಗೆ ಹಗಲಿರುಳೆನ್ನದೆ, ಪ್ರಾಣಭಯವನ್ನು ತೊರೆದು ಗಡಿಯಲ್ಲಿ ಹೋರಾಡುತ್ತಿರುವ ಯೋಧರ ಕುಂದು-ಕೊರತೆಗಳನ್ನು ಮೊದಲು ನೀಗಿಸಬೇಕು. ದೇಶದಲ್ಲಿ ಸಂಭವಿಸುವ ದೌರ್ಜನ್ಯಗಳು, ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಿ, ದೇಶದಲ್ಲಿ ಮಹಿಳೆಯರು, ಅಬಲರು ನಿರ್ಭೀತಿಯಿಂದ ತಿರುಗಾಡುವಂಥ ವಾತಾವರಣ ನಿರ್ಮಾಣವಾಗಬೇಕು. ದಿನಗಗನಕ್ಕೇರುತ್ತಿರುವ ಬೆಲೆಗಳನ್ನು ಹತೋಟಿಗೆ ತಂದು ದೇಶದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ದೇಶವನ್ನು ಮಾದರಿ ದೇಶವನ್ನಾಗಿಸಬೇಕು.
-ವಿದ್ಯಾ ಉಪೇಂದ್ರ ಜೋಶಿ, ಬೆಳಗಾವಿ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಈ ರಜೆಯಲ್ಲಿ ಮುಂದಿನ ತರಗತಿಗೆ ಮಕ್ಕಳನ್ನು ಹೇಗೆ ಸಜ್ಜುಗೊಳಿಸುವುದು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.