ಬೈಟುಕಾಫಿ

ಸಂವಾದ

Published On :

ಆಕೃತಿ ಅಂಗಳದಲ್ಲಿ ಖ್ಯಾತ ವಿಮರ್ಶಕ ಸಿ. ಎನ್. ರಾಮಚಂದ್ರನ್ ಅವರೊಂದಿಗೆ 'ನೆರಳುಗಳ ಬೆನ್ನು ಹತ್ತಿ' ಕೃತಿಯ ಕುರಿತು ಮಾತು-ಕತೆ, ಸಂವಾದವನ್ನು ಮೇ 25ರಂದು ಬೆಳಗ್ಗೆ 10-30ಕ್ಕೆ ರಾಜಾಜಿನಗರದಲ್ಲಿನ ಆಕೃತಿ ಪುಸ್ತಕ ಮಳಿಗೆಯಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ- 9886694580.
=

ವಿಶಿಷ್ಟ ಶೈಲಿಯಲ್ಲಿ 'ಎಲ್ಲೋ ಜೋಗಪ್ಪ...'
ಅವಿರತ ಪ್ರತಿಷ್ಠಾನ ಅರ್ಪಿಸುವ 'ಎಲ್ಲೋ ಜೋಗಪ್ಪ ನಿನ್ನರಮನೆ' ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಹಾಡಲಿದ್ದಾರೆ ಶ್ರೀ ಕಾಲಭೈರವ ಜೋಗಿ ಕಲಾ ಸಂಘದವರು. ಮೇ 25ರ ಭಾನುವಾರ ಸಂಜೆ 4ಕ್ಕೆ ಬೆಂಗಳೂರಿನ ಹಂಪಿನಗರದ ಕೇಂದ್ರ ಗ್ರಂಥಾಲಯದ ಗ್ರಂಥಾಂಗಣದಲ್ಲಿ. ಸಂಪರ್ಕಿಸಿ: 9880086300.
=

ಪುಸ್ತಕಗಳ ಲೋಕಾರ್ಪಣೆ
ಅಂಕ ಪ್ರಕಾಶನದಿಂದ ಪ್ರಕಟಿತ ಎರಡು ಪುಸ್ತಕಗಳು 24 ನೇ ಶನಿವಾರ ಸಂಜೆ 6-00ಕ್ಕೆ ಲೋಕಾರ್ಪಣೆಯಾಗುತ್ತಿದೆ. ಟಿ ಎಲ್ಲಪ್ಪ ಅವರ ಕವನ ಸಂಕಲನ 'ಕಡಲಿಗೆ ಕಳಿಸಿದ ದೀಪ'ದ ಅನುವಾದವನ್ನು 'ಆ್ಯಂಕ್‌ಲೆಟ್ಸ್‌' ಎಂದು ಡಾ. ಎಂ. ಸಿ. ಪ್ರಕಾಶ್ ಮಾಡಿದ್ದಾರೆ ಹಾಗೂ ಬೇಲೂರು ರಘುನಂದನ ಅವರ ಕಟ್ಟು ಪದಗಳ 'ಬೆತ್ತಲು' ಬಿಡುಗಡೆ. ಪುಸ್ತಕ ಕುರಿತು ಕ್ರಮವಾಗಿ ಡಾ. ಎಲ್. ಹನುಮಂತಯ್ಯ ಹಾಗೂ ನೀಲಗಿರಿ ಎಂ. ತಳವಾರ್ ಅವರು ಮಾತನಾಡಲಿದ್ದಾರೆ. ಪುಸ್ತಕ ಬಿಡುಗಡೆಗೆ ಮೊದಲು ಸಂಜೆ 4ಕ್ಕೆ ಡಾ. ಎಚ್.ಎಲ್ ಪುಷ್ಪ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಂತರ 4-30ಕ್ಕೆ ಶೂನ್ಯ ರಂಗ ತಂಡದವರಿಂದ ಬೀದಿ ನಾಟಕವಿದೆ.
=

'ಕಸ್ತೂರಬಾ' ನಾಟಕ
ರಂಗ ಸಂಗ ಸಂಸ್ಥೆ ಅರ್ಪಿಸುವ ಮೈಸೂರು ರಂಗಾಯಣ ಕಲಾವಿದೆ ಬಿ. ಎನ್. ಶಶಿಕಲಾ ಪ್ರಸ್ತುತ ಪಡಿಸುತ್ತಿರುವ ಏಕವ್ಯಕ್ತಿ ಪ್ರದರ್ಶನ 'ಕಸ್ತೂರಬಾ' ಮೇ 24, ಶನಿವಾರ (ಇಂದು) ಸಂಜೆ 6-30ಕ್ಕೆ ಧಾರವಾಡದ ಕೆ.ಸಿ.ಡಿ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ. ವಿವರಗಳಿಗೆ:
9886049347,
9481573449.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.