ವಿಷವೋ ಅಮೃತವೋ?
ಈ ಲೋಕದಲ್ಲಿ ಅತ್ಯಂತ ಹರಿತವಾದ ಆಯುಧ ಯಾವುದು? ಚಾಕು, ಚೂರಿ? ಸೂಜಿ? ಬ್ಲೇಡ್? ಇದ್ಯಾವುದೂ ಅಲ್ಲ! ...

ಈ ಲೋಕದಲ್ಲಿ ಅತ್ಯಂತ ಹರಿತವಾದ ಆಯುಧ ಯಾವುದು? ಚಾಕು, ಚೂರಿ? ಸೂಜಿ? ಬ್ಲೇಡ್? ಇದ್ಯಾವುದೂ ಅಲ್ಲ! ಚೆಲುವೆಯಾದ ತರುಣಿಯ ಮೀನಿನಂಥ ಕಣ್ಣುಗಳ ನೋಟವೇ ಅತ್ಯಂತ ಹರಿತವಾದದ್ದು! ಅದು ಜೀವನದ ಮೇಲೆ ಉಂಟಾದ ವಿರಕ್ತಿಯನ್ನು ನೋಡುಗನಲ್ಲಿ ಕ್ಷಣಮಾತ್ರದಲ್ಲಿ ಕತ್ತರಿಸಿ ಹಾಕುತ್ತದೆ. ಲೋಕದ ಮೇಲಿನ ಚಿಂತೆಯನ್ನೂ ಚಿಂತನೆಯೆಂಬ ಹೊರೆಯನ್ನೂ ಹೊತ್ತುಕೊಂಡ ಮುನಿಗಳು ಮಾಡುವ ಘೋರತಪವನ್ನು ಕ್ಷಣಮಾತ್ರದಲ್ಲಿ ತುಂಡರಿಸುತ್ತದೆ. ಹಾಗೇ, ಅದು ಸೂಜಿಯಂತೆ ಕೂಡ. ಆತ್ಮಹತ್ಯೆಗೆ ಹೊರಟ ಬಡಪಾಯಿ ಯುವಕನಿಗೆ ಪ್ರೇಮದ ಭರವಸೆಯೆಂಬ ಬಟ್ಟೆಯನ್ನೂ ಅದು ಹೊಲಿದು ಕೊಡಬಲ್ಲುದು.
ಶ್ಯಾಮಂ ಸಿತಂ ಚ ಸುದೃಶೋ ನ ದೃಶೋಃ ಸ್ವರೂಪಂ
ಕಿಂ ತು ಸ್ಫುಟಂ ಗರಲಮೇತದಥಾಮೃತಂ ಚ
ನೋ ಚೇತ್ಕಥಂ ನಿಪತನಾದನಯೋಸ್ತದೈವ
ಮೋಹಂ ಮುದಂ ಚ ನಿತರಾಂ ದಧತೇ ಯುವಾನಃ
ಈ ಚೆಲುವೆಯ ಕಣ್ಣುಗಳನ್ನು ನೋಡಿದರೆ ಎರಡು ಬಣ್ಣಗಳಿವೆ- ಕಪ್ಪು ಮತ್ತು ಬಿಳಿ. ಹಾಗೇ ಅವುಗಳಲ್ಲಿ ಅಮೃತಮತ್ತು ವಿಷ ಎರಡೂ ಇದೆಯೆಂಬುದು ಗ್ಯಾರಂಟಿ. ಅದಕ್ಕೆ ಕಾರಣ- ಆ ಕಣ್ಣುಗಳನ್ನು ನೋಡಿದ ಕೂಡಲೇ ತಾರುಣ್ಯವಂತರು ಮೈಯೆಲ್ಲ ಹಿತವೇರಿ ಮೂರ್ಛೆ ಹೋಗುತ್ತಾರೆ!
ಮೈಯಲ್ಲಿ ಮುದ ಹಬ್ಬಿ ಮತ್ತರಾಗುವುದು ಅಮೃತಸೇವನೆಯ ಫಲ. ಮೂರ್ಛೆ ಹೋಗುವುದು ವಿಷಸೇವನೆಯ ಪರಿಣಾಮ. ಎರಡನ್ನೂ ಬೆರೆಸಿದ ಕವಿಯ ಚಾತುರ್ಯ ಚೆನ್ನಾಗಿದೆ ಅಲ್ಲವೆ?
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


