ರುತ್ ಜ್ವಬಾಲ
ದಿನೇಶ್ ಎಂದೂ ಜನಪ್ರಿಯ ಲೇಖಕನಾಗಲಿಲ್ಲ. ಆದರೆ ಹಲವಾರು ಕಾದಂಬರಿಗಳನ್ನು ಬರೆದು ಬರಹಗಾರನೆನಿಸಿಕೊಂಡ. ಆದರಲ್ಲೊಂದನ್ನು ನಾನು ಹಿಂದಿಯಿಂದ ಇಂಗ್ಲಿಷ್ಗೆ ಅನುವಾದಿಸಿದೆ. ಆದರೆ ಈ ಕೃತಿಯಲ್ಲಿರುವ ವಾತಾವರಣ ಅಮೆರಿಕಕ್ಕೆ ಸಂಪೂರ್ಣ ಅಪರಿಚಿತವಾದದ್ದು ಎಂಬ ಕಾರಣಕ್ಕೆ, ಅದನ್ನು ಪ್ರಕಟಿಸಲು ಯಾರೂ ಮುಂದಾಗಲಿಲ್ಲ. ಆದರೆ ನನಗದು ತುಂಬಾ ಪರಿಚಿತವಾದ್ದು ಮಾತ್ರವಲ್ಲ, ನಾನು ಅದರಲ್ಲಿಯ ಘಟನೆಗಳಲ್ಲಿ ಪಾಲ್ಗೊಂಡವಳೂ ಆಗಿದ್ದೆ.
ಕಾದಂಬರಿಯಲ್ಲಿ ನನಗೆ ಎಲಿಜಬೆತ್ ಎಂಬ ಹೆಸರು (ನನ್ನ ಹೆಸರಲ್ಲ). ದಿನೇಶ್ ನಿರೂಪಕ ಮತ್ತು ಕಾಲ್ಪನಿಕ ಪಾತ್ರ 'ಡಿ' ಕಾಲ್ಪನಿಕ ಎಲಿಜಬೆತ್ ಮತ್ತು ನಿಜದ ನಾನು ಹಳೆಯ ದಿಲ್ಲಿಯ ಭವನವೊಂದರಲ್ಲಿ ವಾಸಿಸುತ್ತಿದ್ದ ಸಾಧ್ವಿಯ ನೋಡಿ ಮಾತನಾಡಿಸಲು ಇಲ್ಲಿಗೆ ಬಂದೆವು. ಅದು ಬಾಡಿಗೆದಾರರು ಮತ್ತು ಉಪಬಾಡಿಗೆದಾರರಿಂದ ಕಿಕ್ಕಿರಿದಿದ್ದ, ಗದ್ದಲಮಯ ಕಟ್ಟಡವಾಗಿತ್ತು. ಆದರೆ ಆಕೆಯಿದ್ದ ಕೋಣೆಗಳು ಶಾಂತವಾಗಿದ್ದವು. ಆಕೆ ಸುತ್ತ ಚಕ್ಕಂಬಕ್ಕಳ ಹಾಕಿ ಕುಳಿತಿದ್ದ ಶಿಷ್ಯರ ನಡುವೆ ಮಂಡಿತಳಾಗಿ ಶುದ್ಧಬ್ರಹ್ಮದ ಕುರಿತು ಮಾತನಾಡುತ್ತಿದ್ದಳು.
ಈ ತಲೆಭಾರದ ವಿಷಯದ ಕುರಿತು ದಿನೇಶ್ ಮತ್ತು ಡಿ ಹೊಂದಿದ್ದ ಭಾವನೆ ಒಂದೇ ಆಗಿತ್ತು- ನಾವಿಬ್ಬರೂ ಹಳೆಯ ಜರ್ಮನ್ ಪ್ರಾಧ್ಯಾಪಕರು ಕಂಡುಹಿಡಿದ 19ನೇ ಶತಮಾನದ ಭಾರತಕ್ಕೆ ಬಂದಿದ್ದೇವೆ. ಪೌರಾಣಿಕ ಹಾಗೂ ನಿಗೂಢ ಜಗತ್ತಿನಲ್ಲಿ ನಡೆಯುತ್ತಿರುವ ನಾವು ನಿಜವನ್ನು ಅರಿಯಲಾರದೆ ಹೋಗಿದ್ದೇವೆ- ಡುಮ್ಮ ಅಂಗಡಿಯಾತ ನಮ್ಮನ್ನು ವಂಚಿಸುವವರೆಗೆ ಅಥವಾ ತುಂಬಿದ ಬಸ್ಸಿನಲ್ಲಿ ಯಾರೋ ಒಬ್ಬ ನಮ್ಮ ಎದೆಯ ಮೇಲೆ ಕೈ ಆಡಿಸುವವರೆಗೆ. ಅಂಥ ಸಂದರ್ಭದಲ್ಲಿ ನಮ್ಮ ಈ ಘನವಂತ ಜಗತ್ತು ಇದ್ದಕ್ಕಿದ್ದಂತೆ ಮೋಸದ, ಲಂಪಟ ಜಗತ್ತಾಗಿ ಮಾರ್ಪಡುತ್ತದೆ. ಆದರೆ 'ಡಿ'ಯಂತೆ ಮಾತನಾಡದೆ ಅವನು ಸಾವರಿಸಿಕೊಂಡು ಹೇಳುತ್ತಾನೆ- 'ಅದು ನೀವಲ್ಲ, ಕಲ್ಪನೆಯ ನೀವು'.
ನಿಜ ಮತ್ತು ಕಲ್ಪನೆಗಳು ಕಲಸಿಹೋದಂತಿರುವ ಈ ಕತೆಯ ತುಣುಕಿನ ಹೆಸರು 'ಇನ್ನೊಸೆನ್ಸ್'. ಇದನ್ನು ಬರೆದವರು ರುತ್ ಪ್ರವೇರ್ ಜ್ವಬಾಲ ಎಂಬ ಜರ್ಮನ್ ಮೂಲದ ಲೇಖಕಿ. ಈಕೆಯ ಪತಿ ಭಾರತೀಯ ಮೂಲದವರಾದ್ದರಿಂದ ಈಕೆಯ ಹಲವಾರು ಕೃತಿಗಳು ಇಲ್ಲಿನ 'ಹವಾ' ಹೊಂದಿವೆ. ಆಸ್ಕರ್ ಹಾಗೂ ಬುಕರ್ ಪ್ರಶಸ್ತಿಗಳೆರಡನ್ನೂ ಗೆದ್ದ ಪ್ರತಿಭಾವಂತೆ ಎಂಬುದು ಈಕೆಯ ಖ್ಯಾತಿ. ಈಕೆ ಕಳೆದ ವಾರ ತೀರಿಕೊಂಡರು.
- ಕೇರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

