ಸಾಪ್ತಾಹಿಕಪ್ರಭ

ಫಸ್ಟ್‌ನೈಟು

Published On :

ಸುರಸುಂದರಿ ಎಲೆಕೋಸು, ಕೆಂಪು ಹುಡುಗ ಕ್ಯಾರೇಟಿನ ಜತೆ ಲವ್ವಿಗೆ ಬಿದ್ದಳು. ತಿಂಗಳ ನಂತರ ಮದುವೆಯೂ ಆಯಿತು. ಮರುದಿನ ವಿಶ್ ಮಾಡಲೆಂದು ಹೀರೇಕಾಯಿ ಬಂದ.
ಬೆಂಡೆಕಾಯಿ: ಹೇಗಿತ್ತೋ ನಿನ್ನೆ ಫಸ್ಟ್‌ನೈಟು?
ಕ್ಯಾರೇಟ್: ಏನ್ ಕರ್ಮ ಫಸ್ಟ್‌ನೈಟು... ಇಡೀ ರಾತ್ರಿ ಅವಳ ಡ್ರೆಸ್ ಬಿಚ್ಚೋದೇ ಆಯ್ತು.


ಕೋಲ್ಯ ಹೊಸ ಕಂಪ್ಯೂಟರ್ ಕೊಂಡ. ಸ್ವಲ್ಪ ದಿನದ ನಂತರ ಏನೋ ದೂರು ಹಿಡ್ಕೊಂಡ್ ಖರೀದಿಸಿದ ಕಂಪನಿಗೆ ಬಂದ.
ಕೋಲ್ಯ: ನಾನು ಪಾಸ್‌ವರ್ಡ್ ಹೊಡೆದಾಗ್ಲೆಲ್ಲ ಅದು =====ಅಂತ ಕೇವಲ ಬುಲೆಟುಗಳೇ ಬರ್ತವೆ. ಇದೆಂಥ ತಮಾಷೆ?
ಎಂಜಿನಿಯರ್: ಇಲ್ಲ ಸರ್, ಅದು ನಿಮ್ಮ ಗುಪ್ತಸಂಖ್ಯೆ. ಹಿಂದೆ ನಿಂತವರಿಗೆ ನಿಮ್ಮ ಪಾಸ್‌ವರ್ಡ್ ಗೊತ್ತಾಗದಿರಲಿ ಅಂತ ಹಾಗೆ ಬುಲೆಟ್ ಬರುತ್ತೆ.
ಕೋಲ್ಯ: ಅದೇನೋ ಸರಿ. ಆದರೆ, ಹಿಂದೆ ಯಾರೂ ನಿಂತಿರದೆ ಇದ್ದಾಗ್ಲೂ ಯಾಕೆ ಬುಲೆಟ್ ಬರುತ್ತೆ?
ಎಂಜಿನಿಯರ್: (ತಲೆಕೆಟ್ಟು) ಸ್ವಲ್ಪ ತಾಳಿ, ಬುಲೆಟ್ ಪ್ರಕಾಶ್ ಅವರ ನಂಬರ್ ಕೊಡ್ತೀನಿ!


ಕೋಲ್ಯನ ಅಮೆರಿಕ ಗೆಳೆಯ ಭಾರತ ನೋಡಲು ಬಂದ.
ಅಮೆರಿಕನ್: ಈ ಕುತುಬ್ ಮಿನಾರ್ ನಿರ್ಮಿಸಲು ಎಷ್ಟು ಸಮಯ ಹಿಡಿಯಿತು?
ಕೋಲ್ಯ: ಒಂದು ತಿಂಗಳು.
ಅಮೆರಿಕನ್: ನಮ್ಮಲ್ಲಿ ಇದನ್ನು ಎರಡೇ ವಾರದಲ್ಲಿ ಕಟ್ತಿದ್ರು.
ಇಬ್ಬರೂ ಕೆಂಪುಕೋಟೆಗೆ ಹೋದರು.
ಅಮೆರಿಕನ್: ಕೆಂಪುಕೋಟೆ ಕಟ್ಟಲು ಎಷ್ಟು ಕಾಲ ಬೇಕಾಯಿತು?
ಕೋಲ್ಯ: ಎರಡು ವಾರ.
ಅಮೆರಿಕನ್: ನಮ್ಮಲ್ಲಾಗಿದ್ರೆ ಇದನ್ನು ಮೂರೇ ದಿನದಲ್ಲಿ ಕಟ್ತಿದ್ರು.
ಇಬ್ಬರೂ ತಾಜ್‌ಮಹಲ್‌ಗೆ ಹೋದರು.
ಅಮೆರಿಕನ್: ಈ ತಾಜ್ ಕಟ್ಟಲು ಎಷ್ಟು ಟೈಮ್ ತಗೊಂಡ್ರು?
ಕೋಲ್ಯ: ಏನಪ್ಪಾ, ನಿನ್ನೆ ಬಂದಿದ್ವು ಆಗೇನೂ ಇರ್ಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.