ಸಾಪ್ತಾಹಿಕಪ್ರಭ

ಬುದ್ಧಿವಂತಮಗ

Published On :

ಶೇಖರಪ್ಪನವರ ಕಿರಾಣಿ ಅಂಗಡಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅತಿ ಜನಪ್ರಿಯ. ಉತ್ತಮ ಗುಣಮಟ್ಟದ ದಿನಸಿ, ಜೊತೆಗೆ ಅಗ್ಗದ ದರ, ಭರ್ತಿ ವ್ಯಾಪಾರವಿತ್ತು.
ಶೇಖರಪ್ಪನವರಿಗೆ ಮೂರು ಜನ ಗಂಡು ಮಕ್ಕಳು. ಎದೆಯೆತ್ತರ ಬೆಳೆದು ನಿಂತಿದ್ದರು. ಅವರಿಗೊಂದೇ ಚಿಂತೆ. ಮೂರು ಜನ ಒಟ್ಟಿಗೇ ವ್ಯವಹಾರ ಮಾಡಲಾರರು. ಯಾರಾದರೂ ಒಬ್ಬರಿಗೆ ಅಂಗಡಿ ವ್ಯವಹಾರ ಒಪ್ಪಿಸಿ ಉಳಿದ ಇಬ್ಬರಿಗೆ ಹೊಲ-ತೋಟ ಗದ್ದೆಗಳನ್ನು ಹಂಚಿಕೊಡುವುದೇ ವಿಹಿತ. ಯಾರು ಇವರಲ್ಲಿ ಬುದ್ಧಿವಂತರೋ ಅವರಿಗೆ ಅಂಗಡಿ ವಹಿಸಬೇಕು. ಮಕ್ಕಳ ಮೇಧಾವಿತನ ಪರೀಕ್ಷಿಸಲು ಶೇಖರಪ್ಪನವರು ಒಂದು ಉಪಾಯ ಹೂಡಿದರು.

ಮರುದಿನ ಬೆಳಿಗ್ಗೆ ಮೂರೂ ಜನ ಮಕ್ಕಳನ್ನು ಹತ್ತಿರ ಕರೆದು "ಮಕ್ಕಳೇ ನಾನು ನಿಮಗೆ ತಲಾ 5000 ರೂ. ಕೊಡುತ್ತೇನೆ. ಆ ಹಣದಲ್ಲಿ ಸಂಜೆಯೊಳಗೆ ಏನನ್ನಾದರೂ ತಂದು ಹಿತ್ತಲಿನಲ್ಲಿನ ಪುಟ್ಟ ಖಾಲಿ ಕೋಣೆಯನ್ನು ಚುಂಬಿಸಬೇಕು. ಒಬ್ಬರ ನಂತರ ಒಬ್ಬರಿಗೆ ಅವಕಾಶ. ಯಾರು ಕಡಿಮೆ ವೆಚ್ಚದಲ್ಲಿ ಚುಂಬಿಸುವಿರೋ ಅವರಿಗೆ ನನ್ನ ಅಂಗಡಿ ಬಿಟ್ಟು ಕೊಡುತ್ತೇನೆ" ಎಂದು ಹಣ ನೀಡಿದರು.

ಮಕ್ಕಳು ಸಂತೋಷದಿಂದ ಒಪ್ಪಿ ಹಣದೊಂದಿಗೆ ಹೊರಟರು. ಹಿರಿಮಗ ಒಂದೆರಡು ಗಂಟೆಗಳಲ್ಲಿ ಎತ್ತಿನ ಗಾಡಿಯ ತುಂಬಾ ಹುಲ್ಲು ತಂದು ಕೋಣೆ ತುಂಬಿದ. ಅಪ್ಪ ನೋಡಿದರವ. ಕೊನೆಯ ಮಗ ಖಾಲಿ ಕೈಯಲ್ಲಿ ಬಂದು ನೋಡುತ್ತಾ ನಿಂತಿದ್ದ. ಮತ್ತೊಂದು ಗಂಟೆಯಲ್ಲಿ ಎರಡನೇ ಮಗ ಎತ್ತಿನ ಗಾಡಿಯ ತುಂಬಾ ಹತ್ತಿ ತಂದು ಕೋಣೆ ಚುಂಬಿಸಿದ. ಅಪ್ಪ-ಮಗ ನೋಡುತ್ತಲೇ ಇದ್ದರು. ಶೇಖರಪ್ಪನಿಗೆ ಅಚ್ಚರಿ! ಈ ಮಗ ಏನನ್ನೂ ತಂದಿಲ್ಲ. ಬೆಳಗಿನಿಂದ ನನ್ನೊಂದಿಗೇ ಇದ್ದಾನೆ!

"ಮಗನೇ ನೀನೇನನ್ನು ತಂದು ತುಂಬಿಸುವಿ?" ಕೊನೆಯ ಮಗ ಒಂದು ಜೋಬಿನಿಂದ 990 ರೂ ತೆಗೆದು ಅಪ್ಪನಿಗೆ ಕೊಟ್ಟ. ಇನ್ನೊಂದು ಜೋಬಿನಿಂದ ಒಂದು ಮೊಂಬತ್ತಿ ತೆಗೆದು ಕಡ್ಡಿ ಗೀರಿ ಕೋಣೆಯ ಮಧ್ಯದಲ್ಲಿಟ್ಟ. ಕೋಣೆಯ ಬಾಗಿಲು ಹಾಕಿದ.
"ನೋಡಿ, ಕೇವಲ 10 ರೂ.ಗಳಲ್ಲಿ ಕೋಣೆಯ ತುಂಬಾ ಬೆಳಕು ತುಂಬಿದ್ದೇನೆ". ಅಪ್ಪನಿಗೆ ಆನಂದವಾಯಿತು. ಮರುದಿನ ಮೂರನೆಯ ಮಗ ಅಂಗಡಿಯ ಸಾಹುಕಾರನಾಗಿದ್ದ. <
- ಕೆ. ಶ್ರೀನಿವಾಸರಾವ್, ಹರಪನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.