ಒಂದೇಟು
ಮೊಟ್ಟೆ ನಕ್ಕರೆ ಒಡೆದು ಹೋಗುತ್ತದೆ.
ಮನೆ ಧರಿಸುವ ಬಟ್ಟೆ 'ಅಡ್ರೆಸ್' ಆಗಿರುತ್ತದೆ.
ಬಿಸಿಲು ಬಿದ್ದರೆ ಕೂದಲು ಬಿಳಿಯಾಗುತ್ತದೆ, ಚರ್ಮ ಕಪ್ಪಾಗುತ್ತದೆ.
ನಮಗೆ ಈ ಮಟ್ಟಕ್ಕೆ ಗಂಟಲು ತುರಿಕೆ ಆಗಬೇಕಾದರೆ ಪಾಪ ಜಿರಾಫೆಗೆ ಎಷ್ಟಾಗಬೇಡ?
ಮದುವೆ ಆಗುವುದೂ ಒಂದೇ ಬ್ರಹ್ಮಚಾರಿಯಾಗಿದ್ದು ಈರುಳ್ಳಿ ಹೆಚ್ಚುವುದೂ ಒಂದೇ.
ಜೋಕ್ಸ್ಪಿಯರ್
ಯಾರ ಮೇಲೆ ಪ್ರೀತಿ?
ಒಂದು ದಿನ ಕೋಲ್ಯ ಆಫೀಸಿನಿಂದ ಮನೆಗೆ ಬೇಗ ಮರಳಿದ. ಪತ್ನಿ ಇನ್ನೊಬ್ಬನೊಂದಿಗೆ ರೊಮ್ಯಾನ್ಸಿನಲ್ಲಿ ಇದ್ದದ್ದನ್ನು ಕಂಡು ಅವನಿಗೆ ಶಾಕ್. ಹೆಂಡತಿಗೆ ಗದರಿಸಿ ಹೇಳಿದ, 'ಈ ರೂಮಿಂದ ಆಚೆ ನಡಿ' ಮತ್ತು ಅವಳ ಬಾಯ್ಫ್ರೆಂಡಿಗೆ ಕೇಳಿದ, 'ನೀನೇನ್ಮಾಡ್ತಿದ್ದೀಯ ಇಲ್ಲಿ?'. ಅವನಂದ, 'ನಾನು ನಿನ್ನ ಹೆಂಡ್ತಿಯನ್ನು ಲವ್ ಮಾಡ್ತಿದ್ದೀನಿ. ಅವಳೂ ನನ್ನ ಇಷ್ಟಪಟ್ಟಿದ್ದಾಳೆ'. 'ನನ್ನ ಹೆಂಡ್ತಿ ಏನಂತ ನನ್ಗೆ ಗೊತ್ತು. ಅವಳು ನನ್ನನ್ನು ಬಿಟ್ಟು ನಿನ್ನ ಪ್ರೀತಿಸಲು ಚಾನ್ಸೇ ಇಲ್ಲ' ಎಂದು ಸಮರ್ಥಿಸಿಕೊಂಡ ಕೋಲ್ಯ. ಸುಮಾರು ಹೊತ್ತು ಹೀಗೆಯೇ ವಾಗ್ವಾದ ನಡೆಯಿತು. ಕೊನೆಗೆ ಕೋಲ್ಯ ಹೇಳಿದ, 'ನೋಡು ಇಬ್ಬರೂ ಶೂಟೌಟ್ ಮಾಡ್ಕೊಂಡು ಸತ್ತಂತೆ ನಟಿಸೋಣ. ಯಾರ ಬಳಿ ಬಂದು ಅವಳು ಅಳುತ್ತಾಳೋ, ಅವರೇ ಆಕೆಯ ಗಂಡ ಎಂಬ ತೀರ್ಮಾನಕ್ಕೆ ಬರೋಣ' ಎಂದ. ಬಾಯ್ಫ್ರೆಂಡೂ ಒಪ್ಪಿದ. ತಕ್ಷಣ 'ಢಂ' ಎಂಬ ಸದ್ದು ಕೇಳಿತು. ಇವರಿಬ್ಬರೂ ಸತ್ತಂತೆ ಬಿದ್ದರು. ಕೋಲ್ಯನ ಹೆಂಡತಿ ಓಡೋಡಿ ಬಂದಳು. ಇವರಿಬ್ಬರಿಗೆ ಒಳಗೊಳಗೇ ಕುತೂಹಲ ಹೆಚ್ಚಿತ್ತು. ನನ್ನ ಬಳಿಯೇ ಅವಳು ಅಳುತ್ತಾಳೆ ಅಂದುಕೊಂಡಿದ್ದರು. ಆದರೆ ಅವಳು ವಾರ್ಡ್ರೋಬಿನ ಬಾಗಿಲು ತೆರೆದು, 'ಬಾಬು, ಹೊರಗೆ ಬಾರೋ. ಈ ನನ್ಮಕ್ಳು ನೆಗೆದುಬಿದ್ದಿದ್ದಾರೆ' ಎಂದಳು!
=
ಫಂಟಾ ಓಡೋಡಿ ಬಂದು, 'ನಿನ್ನ ಹೆಂಡ್ತಿ 9ನೇ ಮಹಡಿಯಿಂದ ಹಾರಿ, ನಿನ್ನ ಹೊಸಾ ಬೆನ್ಝ್ ಕಾರಿನ ಮೇಲೆ ಬಿದ್ದಳು'.
ಕೋಲ್ಯನಿಗೆ ಖುಷಿ ಪಡಬೇಕೋ, ದುಃಖಿಸಬೇಕೋ ತಿಳಿಯಲಿಲ್ಲ!
=
ಹೋಟೆಲ್ಗೆ ಹೋಗಿದ್ದ ಕೋಲ್ಯನಿಗೆ ಸಪ್ಲೆಯರ್ ಮೆನು ಕಾರ್ಡ್ ಕೊಟ್ಟ. ಎರಡು ನಿಮಿಷದ ಬಳಿಕ...
ಸಪ್ಲೆಯರ್: ಏನಾದ್ರೂ ಹೇಳೋದಿದ್ಯಾ?
ಕೋಲ್ಯ: ಇಲ್ಲಿ ಬಳಸಿರುವ ಫಾಂಟ್ಸ್ ಯಾವುದು?
=
ಇತ್ತೀಚೆಗೊಂದು ಸರ್ವೇ ನಡೆಯಿತು. 'ಸರಸದ ನಡುವೆಯೂ ಯಾಕೆ ಗಂಡಸರು ಅರ್ಧ ರಾತ್ರಿಯಲ್ಲಿ ಹಾಸಿಗೆಯಿಂದ ಎದ್ದೇಳುತ್ತಾರೆ' ಎಂಬುದಕ್ಕೆ ಕಾರಣ ಹುಡುಕಲಾಯಿತು. ಬಂದ ಮೂರು ಫಲಿತಾಂಶಗಳು ಹೀಗಿವೆ...
'ಶೇ.5 ಮಂದಿ ನೀರು ಕುಡಿಯಲು ಎದ್ದೇಳುತ್ತೇವೆ' ಎಂದರು. ಶೇ. 12 ಮಂದಿ 'ಟಾಯ್ಲೆಟ್ಗೆ ಹೋಗಲಿಕ್ಕಾಗಿ ಏಳುತ್ತೇವೆ' ಎಂದರು. ಶೇ. 83 ಮಂದಿ 'ಮನೆಗೆ ವಾಪಸು ಹೋಗಲೇಬೇಕಾಗಿರುತ್ತೆ' ಎಂಬ ಕಾರಣ ನೀಡಿದರು.
ನಿಶ್ಶಬ್ದಕೋಶ
ದೇವಸ್ಥಾನ: ಧಿಮಾಕಿರುವ ಹುಡುಗಿಯರಿಗೆ ಪ್ರಪೊಸ್ ಮಾಡಲು ಪ್ರಶಸ್ತ ಜಾಗ.
ಸಲಿಂಗಪ್ರೀತಿ: ಸಲ್ಜುಛಣಯಿಂದಿದ್ದರೆ ಸಾಕು.
ರೈನ್'ಕೋಟ್': ಮಳೆ ಸಂಬಂಧ ಮಾಧ್ಯಮಗಳಿಗೆ ಕೊಟ್ಟ 'ಹೇಳಿಕೆ'.
ರಕ್ಷಾಬಂಧನ: ಕಾಲೇಜಿನಲ್ಲಿ ಹುಡುಗರು ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ದಿನ.
ಹರಿದಕೋಟು
ಹಣದಿಂದ ಒಳ್ಳೆಯ ನಾಯಿಯನ್ನು ಖರೀದಿಸಬಹುದು, ಆದರೆ ಕೇವಲ ಪ್ರೀತಿಯಿಂದಷ್ಟೇ ಅದರ ಬಾಲದ ಕುಣಿಸುವಿಕೆಯನ್ನು ಖರೀದಿಸಲು ಸಾಧ್ಯ.
- ಮಧುರ್ ಭಂಡಾರ್ಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

