ಸಿರಿಮನೆ

ಇದು ಸಿರಿಮನೆ ಜಲಪಾತದ ಸೊಬಗು. ಶೃಂಗೇರಿ ತಾಲೂಕಿನಲ್ಲಿದೆ. ಪಟ್ಟಣದಿಂದ ಕೇವಲ ಹದಿನೈದು ಕಿ.ಮೀ. ದೂರದ ಕಿಗ್ಗಾದಲ್ಲಿದೆ. ಇದು ನೋಡುವುದಕ್ಕೆ ಪುಟ್ಟ ಜಲಪಾತವಾದರೂ ಈ ದಿನಗಳಲ್ಲಿ ಇದರ ವಯ್ಯಾರಕ್ಕೆ ಮನಸೋಲದವರಿಲ್ಲ. ಪುರಾಣ ಕಥೆಗಳೊಂದಿಗೆ ನಂಟು ಬೆಸೆದುಕೊಂಡಿರುವ ಈ ಜಲಪಾತ ನಮ್ಮಲ್ಲೊಮ್ಮೆ ಅಹ್ಲಾದತೆಯನ್ನು ಉಕ್ಕಿಸುತ್ತದೆ. 70-80 ಅಡಿ ಮೇಲಿಂದ ಬಂಡೆಗಳ ಮಧ್ಯದಲ್ಲಿ ಬಳಕುತ್ತಾ ಮಿಂಚಿನ ಬಳ್ಳಿಯಂತೆ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ನಿಲ್ಲುವುದೆಂದರೆ ಅದೊಂದು ಅನಿರ್ವಚನೀಯ ಅನುಭವ. 'ಸಿರಿಮನೆ' ಒಂದು ಮನೆತನದ ಹೆಸರು. ಜಲಪಾತದ ಸಮೀಪವೇ ಸಿರಿಮನೆ ಮನೆತನಕ್ಕೆ ಸಂಬಂಧಿಸಿದ ಕೆಲವು ಮನೆಗಳಿವೆ. ಹಾಗಾಗಿ ಜಲಪಾತಕ್ಕೆ ಈ ಹೆಸರು ಬಂತು. ಚಾರಣಪ್ರಿಯರ ಸ್ವರ್ಗ ಇಲ್ಲಿನ ಪರಿಸರ.
ಸಿರಿಮನೆಯವರೆಗೂ ಉತ್ತಮ ಡಾಂಬರು ರಸ್ತೆ ಇದೆಯಾದರೂ ಕಿಗ್ಗಾದವರೆಗೆ ಮಾತ್ರ ಬಸ್ ಸೌಕರ್ಯವಿದೆ. ಖಾಸಗಿ ವಾಹನ, ಬಾಡಿಗೆ ಆಟೋ ಸೌಕರ್ಯ ಹೊಂದಿದ್ದಲ್ಲಿ ಕಿಗ್ಗಾದಿಂದ ಏಳು ಕಿ.ಮೀ ದೂರಕ್ಕೆ ಹೋಗಿ ಜಲಪಾತದ ಸೌಂದರ್ಯ ನೋಡಬಹುದು. ಕಿಗ್ಗಾ ನಂತರ ಬಹುತೇಕ ಮಟ್ಟಿಗೆ ಕಾಲ್ನಡಿಗೆ. ಜಲಪಾತ ಮುಟ್ಟುವಷ್ಟರಲ್ಲಿ ಬಳಲಿದಂತೆ ಕಂಡರೂ, ಈ ಆಯಾಸವನ್ನು ಕರಗಿಸಿ ಬಿಡುವ ಶಕ್ತಿ ಸಿರಿಮನೆ ಜಲಪಾತಕ್ಕಿದೆ.
ಚಿತ್ರ, ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


