ಕೋಲ್ಯ ಕಾಶ್ಮೀರದಲ್ಲಿ ಯೋಧನಾಗಿದ್ದ. ಆಗಷ್ಟೇ ಅವನ ಎಂಗೇಜ್ಮೆಂಟ್ ಆಗಿತ್ತು. ಆದರೆ, ಅದೊಂದು ದಿನ ಶಾಕಿಂಗ್ ನ್ಯೂಸ್. ಮದುವೆಯಾಗಬೇಕಿದ್ದ ಹುಡುಗಿಯ ಪತ್ರ ಬಂದಿತ್ತು, 'ಈ ಪತ್ರದೊಂದಿಗೆ ನೀನು ಹಾಕಿದ ಎಂಗೇಜ್ಮೆಂಟ್ ರಿಂಗನ್ನೂ ವಾಪಸ್ ಕಳ್ಸಿದ್ದೀನಿ. ನನಗೆ ನಿನ್ನ ಸಂಬಂಧ ಇಷ್ಟ ಇಲ್ಲ. ನನ್ನ ಎಲ್ಲ ಫೋಟೋಗಳನ್ನು ದಯವಿಟ್ಟು ವಾಪಸು ಕಳ್ಸು, ಕೋಲ್ಯ ಕಷ್ಟಪಟ್ಟು ದಿನಪೂರ್ತಿ ಹುಡುಕಾಡಿ, ಫೋಟೋಗಳ ಒಂದು ಬಂಡಲ್ಲನ್ನೇ ಕಳುಹಿಸಿದ. ಅದರೊಂದಿಗೆ ಪತ್ರವೂ ಇತ್ತು, 'ಕ್ಷಮಿಸು, ಇಷ್ಟು ಹುಡುಗಿಯರಲ್ಲಿ ನೀನ್ಯಾರು ಅಂತ ಗೊತ್ತಾಗ್ತಿಲ್ಲ. ನಿನ್ನ ಫೋಟೋ ಬಿಟ್ಟು, ಉಳಿದವರ ಚಿತ್ರಗಳನ್ನು ವಾಪಸ್ ಕಳುಹಿಸು'! <