ನನ್ನಂತೆ ನೀವೂ ಜಿಪುಣತನ ಪ್ರದರ್ಶಿಸಲು ಹೋಗಬೇಡಿ. ಎರಡು ಡಾಲರ್‌ಗೆ ಕಾಂಡೋಮ್ ಸಿಗುತ್ತೆ!
- ಬಾಬ್ ಕ್ರಿಶ್ಚಿಯನ್, ವೆಲ್ಲಿಂಗ್ಟನ್‌ನ ಗೋರಿ
ರಾಜಕಾರಣಿಯಾಗಿದ್ದ ಕೋಲ್ಯ ರೋಗಿಗಳನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ. ಅಲ್ಲಿ ಚೀನಿಯೊಬ್ಬ ದಾಖಲಾಗಿದ್ದ. ಕೋಲ್ಯ ಅವನ ಯೋಗಕ್ಷೇವು ವಿಚಾರಿಸಲು ಬೆಡ್ ಬಳಿ ಹೋದ. ಆಗ ಚೀನಿ, 'ಹೊ ಚಿ ಮಂಚು. ಚಿ ಕು' ಅಂತ ಹೇಳಿ ಸತ್ತೇ ಹೋದ.
ಕೋಲ್ಯನಿಗೆ ಆ ಸಾಲಿನ ಅರ್ಥ ಗೊತ್ತಾಗದೆ ತಲೆಬಿಸಿಯಾಯಿತು. ಸೀದಾ ಚೀನಾಕ್ಕೆ ಹೋಗಿ ಅಲ್ಲಿ ಒಬ್ಬರ ಬಳಿ ಆ ಸಾಲಿನ ಅರ್ಥ ಕೇಳಿದ. ಅವರಂದರು, 'ಬಡ್ಡಿಮಗನೆ, ಜೀವ ಹೋಗ್ತಿದೆ. ಆಕ್ಸಿಜನ್ ಪೈಪ್ ಮೇಲಿಂದ ಕಾಲ್ ತೆಗಿ'!
ಸಂಬಳ: ಒಂದೇ ವಾರದಲ್ಲಿ ಖರ್ಚಾಗುವ ಹಣ.
ಮೊನ್ನೆ ಮುಂಬೈನ ವೈದ್ಯರೊಬ್ಬರು ಇಮ್ರಾನ್ ಹಶ್ಮಿಯ ಹೊಟ್ಟೆ ಆಪರೇಶನ್ ಮಾಡಿದರು. ಆಪರೇಶನ್ ಎಲ್ಲ ಮುಗಿದ ಮೇಲೆ ಡಾಕ್ಟರು ಕಂಗಾಲು. ಏಕೆಂದರೆ, ಅವನ ಹೊಟ್ಟೆಯೊಳಗೆ 2 ಕೆ.ಜಿ. ಲಿಪ್‌ಸ್ಟಿಕ್ ಪತ್ತೆಯಾಗಿತ್ತು!