ಯಡ್ಡಿ ಕೆಜೆಪಿ ಕಟ್ಟಿ ಯಡವಟ್ಟು ಮಾಡಿಕೊಂಡ್ರು ಅಂತ ಅನ್ನಿಸುತ್ತಿದೆಯಲ್ಲ?

Updated on: 

ವಿ. ಹೇಮಂತ್ ಕುಮಾರ್, ಬೆಂಗಳೂರು
- ಜಿಪುಣನಿಗೂ ನಿಪುಣನಿಗೂ ವ್ಯತ್ಯಾಸವೇನು?
    -ಅವನು ಕಾಸ್‌ಪಾರ್ಟಿ, ಇವನು ಕ್ಲಾಸ್‌ಪಾರ್ಟಿ!

    ಕೆ.ಎಂ. ಲಿಂಗರಾಜು, ನಂಜನಗೂಡು
- ಋಷಿಗಳ ಮೌನವ್ರತಕ್ಕೂ ಮನಮೋಹನ್‌ಸಿಂಗ್‌ರ ಮೌನವ್ರತಕ್ಕೂ ವ್ಯತ್ಯಾಸವೇನು?
    - ಯೋಗ, ರೋಗಗಳಿಗಿರುವಷ್ಟೆ!
    
    ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
    ಅತ್ಯಾಚಾರಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಫೂಲನ್‌ದೇವಿಯಂತವರು ಹುಟ್ಟಿದರೆ?
    -ಈಗ ಹುಟ್ಟುವುದು ಪೂನಂಪಾಂಡೆಯಂಥವರು!

    ವಿಷ್ಣುಶಂಕರ್, ಶಿವಮೊಗ್ಗ
    ಯಡ್ಡಿ ಕೆಜೆಪಿ ಕಟ್ಟಿ ಯಡವಟ್ಟು ಮಾಡಿಕೊಂಡ್ರು ಅಂತ ಅನ್ನಿಸುತ್ತಿದೆಯಲ್ಲ?
    -ನಿಮ್ಮ ಅಭಿಪ್ರಾಯ ರೇಣುಕಾಚಾರ್ಯರ ಅಭಿಪ್ರಾಯ ಒಂದೇ ಇದೆಯಲ್ಲ!

    ಉದಯಶಂಕರ ರಾವ್, ದೊಡ್ಡಬಳ್ಳಾಪುರ
    ಮಹಾಭಾರತದ ಕುಂತಿಯಂತೆ ಈಗಲೂ ಮಂತ್ರ ಜಪಿಸಿದರೆ ಮಕ್ಕಳಾಗುವಂತಿದ್ದರೆ ಪುರುಷರ ಗತಿ?
    -ಯಾವುದಾದರೂ ಯಂತ್ರದ ಮೊರೆ ಹೋಗಬೇಕು!

    ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
    ಬಲವಂತಕ್ಕೂ ಬಲಾತ್ಕಾರಕ್ಕೂ ವ್ಯತ್ಯಾಸ?
    -ಯಡಿಯೂರಪ್ಪನವರು ಮೊನ್ನೆ ಮೊನ್ನೆಯವರೆಗೆ ಮಾಡಿದ್ದು ಬಲವಂತ, ಈಗ ಮಾಡ್ತಿರೋದು ಬಲಾತ್ಕಾರ!

    ಸ್ವಾಮಿ ನಿರ್ಮಲಾ, ಉಡಿಗಾಲ
    ಅಷ್ಟೊಂದು ಚಿಕ್ಕ ಲಲಾಟದಲ್ಲಿ ಹಣೆ ಬರಹ ಬರೆಯಲು ಹೇಗೆ ಸಾಧ್ಯ?
    -ಹಣೆ ಬರಹ ಬ್ರಹ್ಮನ ಕಾಲದಲ್ಲೇ 'ಡಿಜಿಟಲೈಸ್‌' ಆಗಿದೆ!
    ಬರ್ಕ್‌ಲಿ ರಮೇಶ್, ಮಂಡ್ಯ
    ತಲೆಯಲ್ಲಿ ಕೂದಲು ಇಲ್ಲದಿದ್ದರೆ ಅಂತವರಿಗೆ ಬುದ್ಧಿ ಜಾಸ್ತಿಯಂತೆ ನಿಜಾನ?
    -ಹೇರ್‌ಸ್ಟೆ ೈಲ್ ಬಗ್ಗೆ ಯೋಚನೆ ಮಾಡೋಕ್ಕಾಗಲ್ವಲ್ಲ, ಹಾಗಾಗಿ ಲೈಫ್‌ಸ್ಟೆ ೈಲ್ ಬಗ್ಗೆ ಯೋಚಿಸ್ತಾರೆ!

-ಘಾಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com