ಸಾಪ್ತಾಹಿಕಪ್ರಭ

ಒಂದೊಮ್ಮೆ ಮರಗಳು ಹಣ್ಣು ಬಿಡುವ ಬದಲು ಹಣ ಬಿಡುವಂತೆ ಇದ್ದಿದ್ರೆ?

Published On :

ಸರಸ್ವತಿ ಗೊಬ್ಬರಡಗಿ, ಜೀವರಗಿ
    ಕಟ್ಟಕಡೆಯ ಟೆಲಿಗ್ರಾಂ ಹೋಗಿದ್ದು ರಾಹುಲ್ ಗಾಂಧಿಗೆ ಅಂತೆ?
    - 'ಸ್ಟಾರ್ಟ್ ಇಮ್ಮಡಿಯಟ್ಲಿ' ಅಂತ ಇರಬಹುದು!

    ರವೀಂದ್ರನಾಥ ಶಿ. ಯಡಹಳ್ಳಿ, ಬೀಳಗಿ
    ಪೋರ್‌ಟ್ವೆಂಟಿಗೂ ಟಿಕ್‌ಟ್ವೆಂಟಿಗೂ ವ್ಯತ್ಯಾಸವೇನು?
    - ಪೋರ್‌ಟ್ವೆಂಟಿ ಜೀವನಾಶಕ, ಟಿಕ್‌ಟ್ವೆಂಟಿ ಕ್ರಿಮಿನಾಶಕ!

    ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
    ಟಾಕೀಸ್‌ಗೆ ಹೋದವರೆಲ್ಲ ಪಾಪ್‌ಕಾರ್ನ್‌ನನ್ನೇ ತಿನ್ನಲು ಕಾರಣವೇನು?
    - ಪಾಪ! ಟಾಕೀಸ್‌ನ ಎಲ್ಲಾ ಕಾರ್ನರ್‌ನಲ್ಲಿ ಅದನ್ನೇ ಇಟ್ಟಿರ್ತಾರಲ್ಲ!

    ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
    ದೇವಾಲಯಗಳಲ್ಲಿ ಅರ್ಚಕರೇ ಕಳ್ಳತನ ಮಾಡಿದರೆ?
    - ಆ ಮೇಲುಕೋಟೆ ಚೆಲುವನಾರಾಯಣನೇ ನೋಡ್ಕೋತಾನೆ ಬಿಡಿ!

    ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
    ಒಂದೊಮ್ಮೆ ಮರಗಳು ಹಣ್ಣು ಬಿಡುವ ಬದಲು ಹಣ ಬಿಡುವಂತೆ ಇದ್ದಿದ್ರೆ?
    - ಮರಗಳಲ್ಲಿ ಕೋತಿಗಳ ಬದಲು ಜನರು ಇರ್ತಿದ್ರು!

    ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
    ಏನೋ ಇದೆ ಅಂದ್ಕೊಂಡು ಬದುಕೋದೇ ಜೀವನಾನಾ?
    - ಏನೋ ಇದೆ ಅಂದ್ಕೊಳ್ಳಿ ಸಾಕು. ಇನ್ನು 'ಏನೇನೋ' ಇದೆ ಅದ್ಕೊಂಡು ಕೊರಗಬೇಡಿ!

    ಹೆಡತಲೆ ಮಾದನಾಯಕ, ಮೂಡಲಪಾಳ್ಯ
    ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಏಕೆ ಇಲ್ಲ ಸಾರ್?
    -ಅದನ್ನು ಪರಮೇಶ್ವರ್ ಅವರು ಹೊರಗಡೆ ಇದ್ದುಕೊಂಡೇ ನಿರ್ವಹಿಸ್ತಿದ್ದಾರೆ.

-ಘಾಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.