ಎಮರ್ಜೆನ್ಸಿ ಪೆಟ್ರೋಲ್!

Updated on: 


ಅದು ಯುದ್ಧದ ಸಮಯ. ಯೋಧರಿದ್ದ ಸ್ಥಳಕ್ಕೆ ತುರ್ತಾಗಿ ಆಹಾರ ಸಾಮಗ್ರಿ, ಔಷಧಗಳನ್ನು ಸಾಗಿಸಬೇಕಾಗಿತ್ತು. ಹೀಗಾಗಿ, ಸಾಮಗ್ರಿಗಳನ್ನು ತುಂಬಿಕೊಂಡಿದ್ದ ಟ್ರಕ್ಕಿನೊಂದಿಗೆ ಡ್ರೈವರ್, ಒಬ್ಬ ಮೇಜರ್ ಮತ್ತು ನಮ್ಮ ಕೋಲ್ಯ ಹೊರಟರು. ಪೆಟ್ರೋಲ್ ಬರಿದಾಗಿದ್ದ ಕಾರಣ ಸ್ವಲ್ಪ ದೂರ ಹೋಗುವಷ್ಟರಲ್ಲಿ ಟ್ರಕ್ಕು ಸ್ಟಾಪ್ ಆಯಿತು. ಅಲ್ಲಿಂದ ಬಂಕ್‌ಗೆ ವಾಪಸ್ 20 ಕಿಲೋಮೀಟರ್ ಬರಬೇಕಿತ್ತು. ಇನ್ನೇನು ಮಾರ್ಗವಿಲ್ಲದೆ ಕೋಲ್ಯ, ಮೇಜರ್‌ಗೆ 'ಸರ್ ಟ್ರಕ್ಕನ್ನು ವಾಪಸು ತಳ್ಳಿಕೊಂಡು ಹೋಗೋದೇ ಒಳ್ಳೆಯದು' ಎಂದ. ಮೇಜರ್‌ಗೂ ಕೋಲ್ಯನ ಸಲಹೆ ಕೇಳಿ ಹೌದೆನ್ನಿಸಿತು. ಟ್ರಕ್ಕು ತಳ್ಳುವ ಕಾರ್ಯಕ್ಕೆ ಸ್ಥಳೀಯರೂ ನೆರವಾದರು.
ಅಂತೂ ಪೆಟ್ರೋಲ್ ಬಂಕ್ ಅನ್ನು ತಲುಪಿದರು. ಪೆಟ್ರೋಲ್ ತುಂಬಿಕೊಂಡಾದ ಮೇಲೆ ಮೇಜರ್, ಕೋಲ್ಯನಿಗೆ ಹೇಳಿದ 'ಹಿಂದೊಂದು ಡ್ರಂ ಇದ್ಯಲ್ಲ. ಅದಕ್ಕೂ ಪೆಟ್ರೋಲ್ ತುಂಬೋಣ. ಯಾವುದಕ್ಕೂ ಇರಲಿ'. ಆಗ ಕೋಲ್ಯ ಹೇಳಿದ, 'ಸರ್, ಅದರಲ್ಲಿ ಪೆಟ್ರೋಲ್ ಆಲ್‌ರೆಡಿ ಇದೆ. ಎಮರ್ಜೆನ್ಸಿಗೆ ಬೇಕಾಗುತ್ತೆ ಅಂತ ನಾನು ನಿನ್ನೇನೆ ತುಂಬಿಟ್ಟಿದ್ದೀನಿ'! 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com