ಗೆಳೆಯನ್ಯಾರು?
ಯುದ್ಧರಂಗದಲ್ಲಿ ತಾಯಿನಾಡಿಗಾಗಿ ಹೋರಾಡಿ ದಣಿದು, ದೂರದೂರಿನಿಂದ ಮನೆಗೆ ವಾಪಸಾಗುವ ಮುನ್ನ ಯುವ ಸೈನಿಕನೊಬ್ಬ ತನ್ನ ತಾಯಿಗೆ 'ಅಮ್ಮಾ, ನಾನು ಮನೆಗೆ ಬರುತ್ತಿದ್ದೇನೆ' ಎಂಬ ಸಮಾಚಾರವನ್ನು ತಿಳಿಸಿದ. ಮಗನ ಬರವಿಗಾಗಿ ಕಾತುರದಿಂದ ಕಾಯುತ್ತಿದ್ದ ತಾಯಿ ಅವನು ಬದುಕಿರುವ ವಿಷಯ ತಿಳಿಯುತ್ತಿದ್ದಂತೆ ಸಂತೋಷದಿಂದ ಬಿಕ್ಕುತ್ತಾ 'ಬಾ ಮಗ, ತುಂಬಾ ಸಂತೋಷ' ಎಂದಳು.
'ಅಮ್ಮಾ ಒಂದು ಮಾತು. ನನ್ನೊಡನೆ ನನ್ನ ಗೆಳೆಯನೊಬ್ಬನನ್ನು ಕರೆತರುತ್ತಿದ್ದೇನೆ. ಇನ್ನು ಮುಂದೆ ಅವನೂ ನಮ್ಮ ಜತೆಯಲ್ಲಿಯೇ ಇರುತ್ತಾನೆ, ಆಗಬಹುದೇ?' ಎಂದು ಕೇಳಿದ.
'ಆಗಬಹುದು ಮಗ, ಕರೆದು ತಾ. ನಿನ್ನ ಗೆಳೆಯ ನನಗೆ ಇನ್ನೊಬ್ಬ ಮಗನಾಗಿರುತ್ತಾನೆ' ಎಂದಳು ತಾಯಿ ಸಂತೋಷದಿಂದ.
'ಆದರೆ ನಿನಗೊಂದು ವಿಷಯ ತಿಳಿಸಬೇಕಾಗಿದೆಯಮ್ಮಾ. ನನ್ನ ಗೆಳೆಯ ಯುದ್ಧರಂಗದಲ್ಲಿ ಹೋರಾಡಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಅವನ ಪ್ರತಿಯೊಂದು ಕೆಲಸಕ್ಕೂ ನಮ್ಮ ಸಹಾಯ ಬೇಕಾಗುತ್ತದೆ. ಅದು ಸಾಧ್ಯವೇ?' ಎಂದು ಕೇಳಿದ.
'ಅಯ್ಯೋ ದೇವರೇ. ಅಂತಹವನನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಮಗ. ಮುಂದೆ ನಾವು ಎಷ್ಟು ಕಷ್ಟಪಡಬೇಕಾಗುತ್ತದೆ ನೀನೇ ಯೋಚಿಸು' ಎಂದಳು ತಾಯಿ.
ತಾಯಿಯ ಮಾತನ್ನು ಕೇಳಿ ಮಗ ಯೋಚನೆಗೀಡಾದ. ಕೊನೆಗೊಂದು ಗಟ್ಟಿ ನಿರ್ಧಾರಕ್ಕೆ ಬಂದ ಮಗ ಮನೆಗೆ ವಾಪಸಾಗಲೇ ಇಲ್ಲ. ಯುದ್ಧರಂಗದಲ್ಲಿ ಕಾಲುಗಳನ್ನು ಕಳೆದುಕೊಂಡಿದ್ದವನು ಅವನೇ ಆಗಿದ್ದ. ಆ ಥರದ ಗೆಳೆಯರ್ಯಾರೂ ಅವನಿಗಿರಲಿಲ್ಲ.
ತಾನು ಮನೆಗೆ ಹಿಂದಿರುಗಿದರೆ ತನ್ನ ತಾಯಿಗೆ ಭಾರವಾಗುತ್ತೇನೆ. ಅವಳಿಗೆ ತನ್ನ ವಿಷಯದಲ್ಲಿ ಬೇಕಾದಷ್ಟು ಪ್ರೀತಿಯಿದೆ ನಿಜ. ಆದರೆ ಬರೀ ಪ್ರೀತಿಯೊಂದರಿಂದಲೇ ಹೆಚ್ಚು ಸಹಾಯವಾಗದು. ಜತೆಗೆ ಹೆಚ್ಚಿನ ಧೈರ್ಯ, ತ್ಯಾಗದಂತಹ ಗುಣಗಳೂ ಬೇಕು. ಅಂತಹ ಪ್ರೀತಿ ಮುಂದೆ ದೊರಕೀತೆಂಬ ಭರವಸೆ ಅವನಿಗೆ ಸಿಗಲಿಲ್ಲ. ಯುವಕ ಊರಿಗೆ ಬರುವ ಯೋಚನೆಯನ್ನೇ ಬಿಟ್ಟುಬಿಟ್ಟ.
- ಬ್ರಹ್ಮಣಿ ಪಿ. ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

