ಸಾಪ್ತಾಹಿಕಪ್ರಭ

ಕಾಗದದ ಬೆಂಕಿ, ಗಾಳಿ

Published On :

ಚೀನಾ ದೇಶದ ಒಂದು ಹಳ್ಳಿಯಲ್ಲಿ ಒಬ್ಬ ಗಂಡನಿಲ್ಲದ ಮುದುಕಿಗೆ ಇಬ್ಬರು ಗಂಡು ಮಕ್ಕಳು. ಅವಳ ಸೊಸೆಯರು ತವರೂರಿಗೆ ಹೋಗಿ ಬರಲು ಅತ್ತೆಯ ಬಳಿ ಕೋರಿಕೊಂಡರು. ಮುದುಕಿಗೆ ಅವರನ್ನು ಕಳಿಸಲು ಇಷ್ಟವಿರಲಿಲ್ಲ. ಹಿಂತಿರುಗಿ ಬರುವಾಗ ದೊಡ್ಡ ಸೊಸೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಯನ್ನೂ, ಚಿಕ್ಕ ಸೊಸೆ ಕಾಗದದಲ್ಲಿ ಸುತ್ತಿಟ್ಟ ಗಾಳಿ ಈ ಎರಡೂ ಉಡುಗೊರೆಯನ್ನು ತರಬೇಕು, ಇಲ್ಲದಿದ್ದರೆ ಇಲ್ಲಿಗೆ ಬರಬೇಡಿ ಎಂದು ಶರತ್ತು ಹಾಕಿದಳು.
ತವರೂರಿಗೆ ಹೋಗುವ ತವಕದಲ್ಲಿ ಅವರೂ ಅದಕ್ಕೆ ಒಪ್ಪಿ ಹೊರಟರು. ಊರಿನಲ್ಲಿ ನಂಟರೂ ಇಷ್ಟರ ಜತೆ ಸಂತೋಷದಿಂದ ಕಾಲ ಕಳೆದು ಹಿಂತಿರುಗಿ ಬರುವಾಗ ಅವರಿಗೆ ಅತ್ತೆ ಹೇಳಿದ್ದ ಮಾತು ನೆನಪಿಗೆ ಬಂದಿತು. ತಲೆಯ ಮೇಲೆ ಕೈಯಿಟ್ಟು ಆಲೋಚನೆ ಮಾಡುತ್ತಾ ಕುಳಿತರು.
ಆ ವೇಳೆಗೆ ಸರಿಯಾಗಿ ವಾಂಗ್ ಚೂ ಎನ್ನುವ ಜಾಣ ರೈತ ಅವರನ್ನು ಕಂಡು, ಅವರ ಕಷ್ಟ ವಿಚಾರಿಸಿದ. ಸ್ವಲ್ಪ ಕಾಲ ಆತನೂ ಆಲೋಚಿಸಿ ನಂತರ ಜಾಣ್ಮೆಯಿಂದ ಅವರಿಗೆ ಬೇಕಿದ್ದ ಉಡುಗೊರೆಗಳನ್ನು ಅವರ ಕೈಗಿಟ್ಟ. ಅದನ್ನು ಸಂತೋಷದಿಂದ ತಂದು ಸೊಸೆಯರು ಅತ್ತೆಗೆ ಒಪ್ಪಿಸಿದರು. ಮುದುಕಿಗೆ ಆಶ್ಚರ್ಯ! ಯಾವ ಕೆಲಸ ಅಸಾಧ್ಯ ಎಂದುಕೊಂಡಿದ್ದಳೋ ಅದು ಸುಲಭವಾಗಿ ಸಾಧ್ಯವಾಗಿತ್ತು.
ಹೇಗೆ ಗೊತ್ತೆ? ವಾಂಗ್ ಚೂ ದೊಡ್ದ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿ ಎಂದು ಆಕಾಶಬುಟ್ಟಿ, ಚಿಕ್ಕ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಗಾಳಿ ಎಂದು ಕೈ ಬೀಸಣಿಗೆ ಕೊಟ್ಟಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.