ವಿದ್ಯಾಕಾಶಿಯಲ್ಲಿ ಕಲಾಸುಗ್ಗಿ

ವಿದ್ಯಾಕಾಶಿ ಧಾರವಾಡದಲ್ಲಿ ಇಂದಿನಿಂದ (ಮೇ 26) ಕಲಾಸುಗ್ಗಿ. ರಾಷ್ಟ್ರಮಟ್ಟದ ಕಲಾ ಪ್ರದರ್ಶನ ಇಲ್ಲಿನ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ. ಹುಬ್ಬಳ್ಳಿಯ ಯುವ ಕಲಾವಿದ ಕೆ.ವಿ.ಶಂಕರ ಅವರು ತಮ್ಮ ಚಿತ್ರಸಂಗಮ ಆರ್ಟ್ ಗ್ಯಾಲರಿ ಅಂಡ್ ಕಲ್ಚರಲ್ ಅಕಾಡೆಮಿ ಮೂಲಕ ಆಯೋಜಿಸಿದ್ದಾರೆ.
ಸ್ವಾತಂತ್ರ್ಯಪೂರ್ವದಲ್ಲಿ ಮುಂಬೈನ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಮಾತ್ರವೇ ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಕಲಾದೇಗುಲವಾಗಿತ್ತು. ಅಲ್ಲಿ ಕಲಿತು, ಕಲಾಕ್ಷೇತ್ರದಲ್ಲಿ ತಮ್ಮದೇ ಆದ ಮಾಧ್ಯಮದಿಂದ ಗುರುತಿಸಿಕೊಂಡಿದ್ದಲ್ಲದೆ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮುಂಬೈಗಳಲ್ಲಿ ಕಲಾಶಾಲೆಗಳನ್ನು ಕಟ್ಟಿ ಬೆಳೆಸಿದವರು ಡಾ.ಎಂ.ವಿ.ಮಿಣಜಗಿ, ಡಿ.ವಿ.ಹಾಲಭಾವಿ, ಟಿ.ಪಿ.ಅಕ್ಕಿ, ಜಿ.ಎಸ್.ದಂಡಾವತಿಮಠ, ಡಿ.ಜಿ.ಬಡಿಗೇರ, ಆರ್.ಎಂ.ಹಡಪದ ಅವರು. ಜತೆಗೆ ಈ ಭಾಗದಲ್ಲಿ ಕಲಾ ಬೆಳವಣಿಗೆಗೆ ಕೃಷ್ಣ ಕ್ಷತ್ರಿ, ದಾನು ಕ್ಷತ್ರಿ, ಮುರಿಗೆಪ್ಪ ತುಂಬದ, ಈಶ್ವರ ಮುರುಗೋಡ, ಬಿ.ಎಂ.ಹಳಿಜೋಳ, ಕಂಟೆಪ್ಪಗೌಡ, ಎನ್.ಸಿ.ದೇಸಾಯಿ, ಅಮೀನಸಾಬ ಕಮಡೊಳ್ಳಿ, ಎನ್.ಜಿ.ಮಿಕೇಕರ ಮೊದಲಾದವರೂ ನೀಡಿದ ಕೊಡುಗೆ ಮರೆಯುವಂತಿಲ್ಲ.
ಈ ಹಿರಿಯ ಕಲಾವಿದರ ಸ್ಮರಣಾರ್ಥ ನಡೆಯುತ್ತಿರುವ ಕಲಾಪ್ರದರ್ಶನದಲ್ಲಿ ಅವರ ಸಂಬಂಧಿಕರು ಮತ್ತು ಕಲಾಭಿಮಾನಿಗಳು ಆಯಾ ಕಲಾವಿದರ ಹೆಸರಿನಲ್ಲಿ ನಗದು ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಪ್ರದರ್ಶನ ಮೇ 30ರವರೆಗೆ ನಡೆಯಲಿದೆ. ಸಮಯ: ಬೆಳಿಗ್ಗೆ 10ರಿಂದ ಸಂಜೆ 7. ಮಾಹಿತಿಗೆ: 9242146933.
- ವಿಜಯಾನಂದ ಬಿ.ಕಾಲವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


