ರಂಗಸಂಭ್ರಮ
ಬೆಂಗಳೂರಿನ ಅಂತರಂಗ ಹವ್ಯಾಸಿ ನಾಟಕ ತಂಡದವರು 33ನೇ ರಂಗ ವರ್ಷ ಆಚರಿಸುತ್ತಿದ್ದಾರೆ. ಇದರ ಪ್ರಯುಕ್ತ ಹಾಸ್ಯಮೇಳ 13, 'ನಗುವಿಗೇಕೆ ರೇಷನ್' ಎಂಬ ವಿಶೇಷ ಕಾರ್ಯಕ್ರಮ ಬೆಳಿಗ್ಗೆ 10ರಿಂದ 8 ರವರೆಗೆ ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ. ಮಾಸ್ಟರ್ ಹಿರಣ್ಣಯ್ಯ, ಎಂ.ಎಸ್.ನರಸಿಂಹಮೂರ್ತಿ, ವೈ.ವಿ.ಗುಂಡೂರಾವ್ ಹಾಸ್ಯ ರಸಾಯನ ಉಣಬಡಿಸುತ್ತಾರೆ. ಇದೇ ಸಂದರ್ಭ ಅಂಕಲ್ ಶ್ಯಾಂ ಮತ್ತು ಎನ್. ರಾಮನಾಥ್ರಿಗೆ ಅಳಸಿಂಗ ಪೆರುಮಾಳ್ ಪ್ರಶಸ್ತಿಯನ್ನು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ನೀಡುತ್ತಾರೆ. ಬಾಬೂ ಹಿರಣ್ಣಯ್ಯನವರಿಂದ 'ಮಕ್ಮಲ್ ಟೋಪಿ'ಯ ತುಣುಕುಗಳ ಪ್ರದರ್ಶನ.
ಬೆಂಗಳೂರಿನ ರಂಗಚಿತ್ತಾರ ತಂಡ 50ನೇ ರಂಗ ಪ್ರಯೋಗವನ್ನು ಇಂದು ವಿಜಯನಗರದ ಸರಳಾಂಗಣದಲ್ಲಿ ಸಂಜೆ 7ಕ್ಕೆ ಎ.ಎಸ್.ಮೂರ್ತಿ ರಚಿಸಿರುವ, ಎಸ್.ವಿ.ಕಶ್ಯಪ್ ಮತ್ತು ಎಸ್.ವಿ.ಸುಷ್ಮಾ ನಿರ್ದೇಶಿಸಿರುವ 'ಡೊಂಕುಬಾಲ' ಎಂಬ ನಾಟಕ ಪ್ರದರ್ಶನದ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ. ಆಸಕ್ತರು ಸಂಪರ್ಕಿಸಿ: 98800 33018
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

