ಕುಬೇರಪ್ಪ ಎಂ. ವಿಭೂತಿ, ಹರಿಹರ.
ಸರ್ಕಾರದ ಸವಲತ್ತು ಹೆಚ್ಚಿದಂತೆಲ್ಲ ಜನ ದೇವಿಯರ ಆರಾಧಕರಾಗುವುದಿಲ್ಲವೇ?
- 'ಸೋನಿಯಾ ದೇವಿ'ಯ ಆರಾಧಕರಾಗಲಿ ಅಂತಲೇ ಸರ್ಕಾರದ ಬಯಕೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
ಗುಂಡಿನ ಮತ್ತು ಗಮ್ಮತ್ತು, ಪ್ರೇಮ ಪ್ರೀತಿಯ ಮತ್ತು?
- ಕೆಲವರಿಗೆ ಮುತ್ತು, ಕೆಲವರಿಗೆ ಆಪತ್ತು!
ಹೆಡತಲೆ ಮಾದನಾಯಕ, ಮೂಡಲಪಾಳ್ಯ
ಪುನಃ ಜನತಾದಳ ಸರ್ಕಾರ ಬರಬೇಕಾದರೆ ದೇವೇಗೌಡರು ಏನು ಮಾಡಬೇಕು ಸಾರ್?
- ರೇವಣ್ಣರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಈಗಲೇ ಘೋಷಿಸಬೇಕು!
ಪಿ.ಜೆ. ರಾಘವೇಂದ್ರ, ಮೈಸೂರು.
'ರಮ್ಯ ಹೋಟೆಲ್'ನಲ್ಲಿ 'ನೀರ್ ದೋಸೆ' ದೊರೆಯುವುದಿಲ್ಲ ಅಂತ ಬೋರ್ಡ್ ಹಾಕಿದ್ದಾರಲ್ಲ?
- ಅಲ್ಲೀಗ 'ಮದ್ದೂರ್ ವಡೆ' ಮಾತ್ರ ಸಿಗುತ್ತೆ!