ಜೋಕ್ಸ್ಪಿಯರ್
ಪೆಟ್ರೋಲ್ ರೇಟು
ಫಂಟಾ: 2020ರಲ್ಲಿ ಪೆಟ್ರೋಲಿನ ಜಾಹೀರಾತು ಹೇಗಿರುತ್ತೆ?
ಕೋಲ್ಯ: 1 ಲೀಟರ್ ಪೆಟ್ರೋಲ್ ಖರೀದಿಸಿ ಟಾಟಾ ನ್ಯಾನೋ ಉಚಿತವಾಗಿ ಪಡೆಯಿರಿ.
=
ಕೋಲ್ಯ: ನಾನೊಮ್ಮೆ ಪಬ್ಲಿಕ್ ಟಾಯ್ಲೆಟ್ಗೆ ಸುಸ್ಸು ಮಾಡಲು ಹೋದೆ. ಅಲ್ಲೊಂದು ಸಿಂಹ ಇತ್ತು.
ಫಂಟಾ: ಮತ್ತೆ ಏನಾಯ್ತು?
ಕೋಲ್ಯ: ಸಿಂಹಕ್ಕೆ ಹೇಳ್ದೆ, 'ನನ್ದು ಇಲ್ಲೇ ಆಗ್ಹೋಯ್ತು. ನೀನು ನಿಧಾನಕ್ಕೆ ಮುಗ್ಸು'.
=
ಸಿಗ್ನಲ್ ಜಂಪ್
ಕೋಲ್ಯ ಕುದುರೆ ಮೇಲೆ ಹೋಗುತ್ತಿದ್ದ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ. ಕೂಡಲೇ ಪೊಲೀಸ್ ವಿಶಲ್ ಹೊಡೆದು ನಿಲ್ಲಲು ಹೇಳಿದ. ಅದಕ್ಕೆ ಕೋಲ್ಯ, ಕುದುರೆಯ ಬಾಲ ಎತ್ತಿ 'ಬೇಕಾದ್ರೆ ನಂಬರ್ ನೋಟ್ ಮಾಡ್ಕೋ, ನಾನ್ ನಿಲ್ಸಲ್ಲ' ಎಂದು ಹೋಗುತ್ತಲೇ ಇದ್ದ.
=
ಡಿಫರೆಂಟಾಗಿ ಪ್ರೊಪೋಸ್ ಮಾಡ್ತೀನಿ ಅಂತ ಕೋಲ್ಯ ಗುಲಾಬಿಯ ಬದಲಾಗಿ ಕಮಲದ ಹೂ ಹಿಡ್ಕೊಂಡ್ ಹುಡುಗಿ ಮನೆಗೆ ಹೋದ. ಬೆಲ್ ಮಾಡಿದ ತಕ್ಷಣ ಹುಡುಗಿಯೇ ಬಾಗಿಲು ತೆಗೀತಾಳೆ ಅಂದುಕೊಂಡಿದ್ದ. ಆದರೆ, ಅವರ ಅಮ್ಮ ದೊಡ್ಡ ಕಣ್ ಬಿಟ್ಕೊಂಡ್ ದರ್ಶನ ಕೊಟ್ರು. ಕೋಲ್ಯ ಏನೂ ಮಾಡಲು ತೋಚದೆ, 'ಆಂಟಿ, ಪ್ಲೀಸ್ ಬಿಜೆಪಿಗೆ ವೋಟ್ ಹಾಕಿ' ಎಂದು ಹೇಳಿಬಂದ.
ನಿಶ್ಶಬ್ದಕೋಶ
ಹಗರಣ: ರಾಜಕಾರಣಿಗಳ ವಿಶೇಷ ಕಸುಬು.
ಮಾಲ್: ಶಾಪಿಂಗ್ಪ್ರಿಯರ ತವರು ಮನೆ.
ಸ್ಪರ್ಧೆ: ಇಲ್ಲಿ ವಿಜೇತರೊಬ್ಬರು ಇದ್ದೇ ಇರುತ್ತಾರೆ.
ಭಾಷಣ: ಗಟ್ಟಿ ದನಿಯಿಂದ ಮೈಕನ್ನು ಒಡೆಯುವ ಪ್ರಯತ್ನ.
ಹರಿದಕೋಟು
ಚರಿತ್ರೆಯನ್ನು ನೆನಪಿಸಿಕೊಳ್ಳುವುದಕ್ಕಿಂತ ಭವಿಷ್ಯದ ಬಗ್ಗೆ ಕನಸು ಕಾಣುವುದರಲ್ಲಿ ಲಾಭವಿದೆ.
- ಥಾಮಸ್ ಜೆಫರ್ಸನ್
ಒಂದೇಟು
ಜೈಲು ಜಸ್ಟ್ ರೂಂ ಎಂದು ತಿಳಿದುಕೊಂಡಾಗ ಕೈದಿ ಸಂತೋಷಿಯಾಗಿರುತ್ತಾನೆ.
ಜಗತ್ತಿನಲ್ಲಿ ಶೇ.82 ಅಂಕಿಅಂಶಗಳು ಶುದ್ಧ ಸುಳ್ಳು.
ಅವಳಿ ಮಕ್ಕಳ ಸಂಖ್ಯೆ ಯಾವತ್ತೂ ಎರಡೇ ಇರುತ್ತದೆ!
ಯಾವತ್ತೂ ಓಪನ್ ಮೈಂಡೆಡ್ ಆಗ್ಬೇಡಿ. ಮೆದುಳು ಕೆಳಗೆ ಬೀಳುತ್ತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

