ಸ್ಕೂಲ್ ಮುಗಿದ ಮೇಲೆ ಟೀಚರ್, ಕೋಲ್ಯನನ್ನು ಸ್ಟಾಫ್ ರೂಮಿಗೆ ಕರೆದರು.
ಟೀಚರ್: ಏನೋ ದಿನಾ ಪೂರ್ತಿ ಹುಡ್ಗೀರ ಜೊತೆ ಮಾತಾಡ್ತಿರ್ತೀಯಲ್ಲೋ..?
ಕೋಲ್ಯ: ನಾನು ತುಂಬಾ ಬಡವ ಮೇಡಂ. ನನ್ಗೆ ಫ್ರೀ ಮೆಸೇಜ್ ಕೂಡ ಇಲ್ಲ ಮೇಡಂ.
=
ಹೆಲ್ಪ್ಲೈನ್
ಜಿಗುಪ್ಸೆಯಲ್ಲಿದ್ದ ಕೋಲ್ಯ ಒಂದು ಲೈಫ್ಲೈನ್ ನಂಬರಿಗೆ ಕಾಲ್ ಮಾಡಿ ಹೇಳಿದ; 'ನಾನು ಆತ್ಮಹತ್ಯೆ ಮಾಡ್ಕೋಬೇಕಂತಿದ್ದೀನಿ'. ಅತ್ತ ಕಡೆಯಿಂದ 'ಖಂಡಿತಾ ಸಾರ್... ನಾವೊಂದು ವೆಹಿಕಲ್ ಕೊಡ್ತೀವಿ, ಇಂಥ ಸ್ಪಾಟ್ಗೆ ಹೋದ್ರೆ ಸಾಕು' ಎಂಬ ಉತ್ತರ ಬಂತು. ಕೋಲ್ಯ ಕಂಗಾಲಾಗಿ ಹೋದ. ಆ ಫೋನು ಪಾಕಿಸ್ತಾನಕ್ಕೆ ಹೋಗಿತ್ತು!
=
ಸ್ಯಾಲರಿ ಓಕೆನಾ?
ಕೋಲ್ಯ: ನನಗೆ 45 ಸಾವಿರ ಸಂಬಳ ಬರುತ್ತೆ. ಈ ಸ್ಯಾಲರಿ ನಿನ್ಗೆ ಸಫಿಶಿಯೆಂಟಾ?
ಗರ್ಲ್ಫ್ರೆಂಡ್: ನನ್ಗೇನೋ ಸಫಿಶಿಯೆಂಟು, ಆದ್ರೆ ನಿನ್ಗೆ ಬದುಕೋಕೆ ಏನ್ಮಾಡ್ತೀಯಾ?
=
ಫಂಟಾ: ಮಹಿಳೆಯನ್ನು ಹಿಂಬಾಲಿಸುವ ಪುರುಷರಿಗೆ ಆಕೆಯನ್ನು ಮದ್ವೆ ಆಗ್ಬೇಕೆಂಬ ಉದ್ದೇಶ ಇರೋದಿಲ್ಲ.
ಕೋಲ್ಯ: ಕರೆಕ್ಟಾಗಿಯೇ ಹೇಳಿದೆ... ಕಾರನ್ನು ಚೇಸ್ ಮಾಡುವ ನಾಯಿಗಳಿಗೆ ಅದನ್ನು ಡ್ರೈವ್ ಮಾಡ್ಬೇಕೆಂಬ ಆಸೆ ಇರೋದಿಲ್ಲ.