ಕೇವಿಯಟ್ ಮುಂದುವರಿಸಿ
ಕೃಷ್ಣ ನಾಯ್ಕ, ಮೂಡಬಿದ್ರೆ
1978ರಿಂದ ಒಂದು ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇನೆ. ಈಗ ಪಕ್ಕದ ಮನೆಯವರು ಜಾಗದ ಗಡಿ ಬಗ್ಗೆ ತಕರಾರು ಎತ್ತಿದ್ದಾರೆ. ಕಾರಣ ವಕೀಲರೊಬ್ಬರ ಸಲಹೆಯಂತೆ ನ್ಯಾಯಾಲಯದಲ್ಲಿ ಕೇವಿಯಟ್ ಹಾಕುತ್ತಾ ಬಂದಿದ್ದೇನೆ. ಇದಕ್ಕೆ ಶಾಶ್ವತ ಪರಿಹಾರವೇನು?
- ನಿಮ್ಮ ವಕೀಲರು ಹೇಳಿದಂತೆ ನೀವೇ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ನಿರ್ಬಂಧಕಾಜ್ಞೆ(ಇಂಜೆಂಕ್ಷನ್) ತರಲು ಸಾಕಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ ಈಗಿನಂತೆ ಕೇವಿಯಟ್ ಮುಂದುವರಿಸುವುದೇ ಲೇಸು.
ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ
ನಾರಾಯಣಸ್ವಾಮಿ, ಶಿಡ್ಲಘಟ್ಟ
ನಾನೊಬ್ಬ ದಿನಗೂಲಿ ನೌಕರ. ಅನಾರೋಗ್ಯದ ಕಾರಣ ಒಂದು ವರ್ಷ ರಜೆ ಹೋಗಿದ್ದೆ. ಆಗ ಇಲಾಖಾ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಜ್ಞಾಪನ ಕೊಟ್ಟ ಕಾರಣ ಕೆಲಸಕ್ಕೆ ಹಾಜರಾದೆ. ಆದರೂ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಪರಿಹಾರವೇನು?
- ಸ್ಥಳೀಯ ಕಾರ್ಮಿಕ ಅಧಿಕಾರಿಗಳಿಗೆ ದೂರು ನೀಡಿದರೆ ಸಹಾಯವಾಗಬಹುದು. ಇಲ್ಲದಿದ್ದರೆ ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ.
ಮೇಲ್ಮನವಿ ಸಲ್ಲಿಸಿ
ಹೆಸರು, ಊರು ಬೇಡ
ವಿಲ್ ಒಂದರಂತೆ ಮಕ್ಕಳಿಗೆ ಬರೆದ ಜಮೀನಿನ ದಾಖಲೆಯಲ್ಲಿ ತಪ್ಪಾಗಿ ಏರಿಯನೇಷನ್ ಎಂದಿದೆ. ಅದಕ್ಕೆ ಹಿಂದೆ 1942ರಿಂದ 1990ರವರೆಗೆ ಖಾತಾದಾರರ ಹೆಸರೇ ಇದೆ. ಇದನ್ನು ಸರಿಪಡಿಸಲು ಮನವಿ ಸಲ್ಲಿಸಿ ಇದನ್ನು ಸರಿಪಡಿಸಲು ಕೋರಿದರೂ ಏನೂ ಮಾಡುತ್ತಿಲ್ಲ. ಮಾಹಿತಿಯನ್ನೂ ಕೊಡುತ್ತಿಲ್ಲ. ಇವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಬಹುದೇ? ಅಥವಾ ಗ್ರಾಹಕರ ವೇದಿಕೆಗೆ ದೂರು ನೀಡಬಹುದೇ?
- ನೀವು ಹೇಳಿದಂತೆಯೇ ಆಗಬಹುದು. ಜತೆಗೆ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.
ಬಳುವಳಿ ಪತ್ರ ಬರೆಯಿರಿ
ಹೆಸರು, ಊರು ಬೇಡ
ನನ್ನ ಸ್ವಯಾರ್ಜಿತ ನಿವೇಶನವನ್ನು ನನ್ನ ಹೆಂಡತಿ ಹೆಸರಿಗೆ ಹೋಲ್ಡರ್ ಖಾತಾ ಮಾಡಿಸಿದ್ದೇನೆ. ಆದರೆ ಬಿಬಿಎಂಪಿಯವರು ಅವರ ಹೆಸರಿಗೆ 'ಎ' ಖಾತಾ ನೀಡುತ್ತಿಲ್ಲ. ಅದಾಗಬೇಕಾದರೆ ಖರೀದಿ ಪತ್ರ ಬರೆಯಿರಿ ಎನ್ನುತ್ತಿದ್ದಾರೆ. ಏನು ಮಾಡಬೇಕು?
- ಹೆಂಡತಿಯ ಹೆಸರಿನಲ್ಲಿ ಬಳುವಳಿ ಪತ್ರ (ಗಿಫ್ಟ್ ಡೀಡ್) ಬರೆದು ಆಕೆಯ ಕಾಲಾನಂತರ ಮಗಳಿಗೆ ಹೋಗಬೇಕೆಂದು ನಮೂದಿಸಿ ನೋಂದಣಿ ಮಾಡಿಸಿ. ಸಮಸ್ಯೆ ಪರಿಹಾರವಾಗುತ್ತದೆ.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

