ಸಾಪ್ತಾಹಿಕಪ್ರಭ

ಶಿಲಾಯುಗದ ಸಮಾಧಿ

ಸನ್ಯಾಸಿ ಗುಹೆ ಎಂದೇ ಪ್ರಸಿದ್ಧಿಯಾಗಿರುವ ಈ ಸಮಾಧಿಯ ಬಗ್ಗೆ ಸ್ಥಳೀಯರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಸನ್ಯಾಸಿ ಗುಹೆಯ ಸಮೀಪದಲ್ಲಿಯೇ ಎತ್ತರವಾದ ಬೆಟ್ಟ ಕಾಣುವುದರಿಂದ...

ಶಿಲಾಯುಗದ ಸಮಾಧಿ
Published On :

ಸನ್ಯಾಸಿ ಗುಹೆ ಎಂದೇ ಪ್ರಸಿದ್ಧಿಯಾಗಿರುವ ಈ ಸಮಾಧಿಯ ಬಗ್ಗೆ ಸ್ಥಳೀಯರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಸನ್ಯಾಸಿ ಗುಹೆಯ ಸಮೀಪದಲ್ಲಿಯೇ ಎತ್ತರವಾದ ಬೆಟ್ಟ ಕಾಣುವುದರಿಂದ ಅದನ್ನು ಸನ್ಯಾಸಿ ಗುಡ್ಡ ಎಂತಲೂ ಕರೆಯುತ್ತಾರೆ. ಸನ್ಯಾಸಿಯೊಬ್ಬರು ಅಲ್ಲಿ ತಪಸ್ಸು ಮಾಡುತ್ತಿದ್ದರೆಂಬ ಐತಿಹ್ಯವಿದೆ.
ಬೃಹತ್ ಶಿಲಾಯುಗದ ಜನರು ಮಡಿದವರನ್ನು ಇಂತಹ ಗುಹೆಗಳಲ್ಲಿ ಶವಸಂಸ್ಕಾರ ಮಾಡುತ್ತಿದ್ದರು. ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಇವು ಕಂಡುಬಂದಿದೆ. ಇದನ್ನು 'ರಾಕ್ ಕಟ್ ಬರಿಯಲ್‌'  ಲ್ದು ಕರೆಯುತ್ತಾರೆ. ಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಡಾ.ಗುರುರಾಜ ರಾಂ, ಡಾ. ರಾಮಚಂದ್ರನ್, ಡಾ.ಪಿ.ಗುರುರಾಜ ಭಟ್ ಹಾಗೂ ಡಾ.ಅ. ಸುಂದರ್ ಅವರು ಉಡುಪಿ ಹಾಗೂ ಕುಂದಾಪುರ ತಾಲೂಕಿನ ಕೆಲವು ಕಡೆ ಹಲವು ಸಮಾಧಿಗಳನ್ನು ಸಂಶೋಧನೆ ಮಾಡಿದ್ದಾರೆ. ಪ್ರಸ್ತುತ ಸಮಾಧಿ ಶೋಧಿಸಿದವರು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಸಿ. ಸುರೇಶ ಅಂಬ್ಳೆ. ಇನ್ನಷ್ಟು ಇಂಥ ಸಮಾಧಿಗಳು ಇಲ್ಲಿರಬಹುದು ಎಂಬ ಅಭಿಪ್ರಾಯ ಅವರದು. ಕೆದಂಬಾಡಿ ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗ ಜೆಂಬಿಟ್ಟಿಗೆ ಕಲ್ಲಿನಿಂದ ಕಟ್ಟಿರುವ ಈ ಸಮಾಧಿಯ ಒಳಭಾಗ ಸುಮಾರು 6 ಅಡಿ ಉದ್ದ ಮತ್ತು ಅಗಲ, 3 ಅಡಿ ಎತ್ತರವಿದ್ದು ಸರಳ ಕೋನಾಕೃತಿ ರಚನೆ ಹೊಂದಿದೆ. ಪ್ರವೇಶ ದ್ವಾರ 60 ಸೆಂ.ಮೀ. ಅಗಲ, 40 ಸೆಂ.ಮೀ. ಎತ್ತರ ಹೊಂದಿದೆ.

- ಚಂದ್ರಶೇಖರ ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.