ಬಲೆ ಕಾರ್ತೀಕ್
ಪಚ್ಚೆಹಾದಿಯ ಜಾಡುಹಿಡಿದು ಹಕ್ಕಿಗಳ ಭರತನಾಟ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಪೋಣಿಸೋ ಕನಸು. ಹಕ್ಕಿಯಹಾಡು ಕೇಳುತ್ತಾ, ಅವುಗಳ ...

ಪಚ್ಚೆಹಾದಿಯ ಜಾಡುಹಿಡಿದು ಹಕ್ಕಿಗಳ ಭರತನಾಟ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಪೋಣಿಸೋ ಕನಸು. ಹಕ್ಕಿಯಹಾಡು ಕೇಳುತ್ತಾ, ಅವುಗಳ ಜೀವನಶೈಲಿ ನೋಡುತ್ತಾ ಹೂವಾಗುವ ಕನಸು. ಎಷ್ಟು ಸಾಧ್ಯವಾಗುತ್ತೋ ಅಷ್ಟು ಕಾಡುಜೀವಿಗಳನ್ನೂ, ಹಸಿರಸಿರಿಯನ್ನೂ ಪ್ರೀತಿಸುವ ಕನಸು. ಹೀಗೆ ಕ್ಯಾಮೆರಾಕಣ್ಣಿನ ಹುಡುಗನ ಕನಸು ಕಾಡುವ ಕಾಡಿನ ತುಂಬಾ ಕಾಡೇ ಗೂಡೇ ಅನ್ನುತ್ತಾ ಸಾಗುತ್ತಲೇ ಇರುತ್ತದೆ.
ಇದು ಕನಸುಗಣ್ಣಿನ ಕಾರ್ತೀಕ್ ಭಟ್ನ ಮಾಯೆ. ಈತ ಕಾರ್ಕಳದವನು. ಬೆಳೆದದ್ದು ಮುಂಬೈ. ಕಾಡು ಈತನಿಗೆ ಪ್ರಾಣ. ಹಕ್ಕಿಗಳೆಂದರೆ ಛಾಯಾಗ್ರಹಣ. ಚಿತ್ರಗಳನ್ನು ಸೆರೆಹಿಡಿದು, ಪಕ್ಷಿಗಳ ಚಲನವಲನ ಅಧ್ಯಯನಿಸುವ ತಹತಹದ ಹುಡುಗನೀತ. ಕಾರ್ತೀಕ್ ಸದ್ಯಕ್ಕೆ ಮಂಗಳೂರಿನ ್ಝಟಿಢಜಡಡಿಟಜಟಿಡಿ ಜ್ಝ್ಠಿಟ ್ ಛಡಡ್ಟಡ್ಝಛಡ್ಝ್ಟಿಟಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಕಾರ್ತೀಕ್ ವಾರಾಂತ್ಯಗಳಲ್ಲಿ ಸಮಾನಮನಸ್ಕ ಗೆಳೆಯರೊಡನೆ ಕ್ಯಾಮೆರಾ ಹೆಗಲಿಗೇರಿಸಿ, ಜೀಪೇರಿ ಕಾಡಿಗೆ ದಾಳಿ ಇಡುತ್ತಾನೆ. ಅಲ್ಲಿ ಹಕ್ಕಿಯ ಹಾಡಿಗೆ ತಲೆದೂಗುತ್ತಾ, ಅವುಗಳ ಜೀವನಶೈಲಿಯನ್ನು ಕಾತರದಿಂದ ಕ್ಯಾಮೆರಾ ಕಣ್ಣಿಗೆ ಕಟ್ಟುತ್ತಾ, ಹಕ್ಕಿಗಳೊಡನೆ ತಾವೂ ಥೇಟ್ ಹಕ್ಕಿಯಾಗುತ್ತಾರೆ. ಪಕ್ಷಿ ಛಾಯಾಗ್ರಾಹಕನ ಕಣ್ಣು ಯಾವತ್ತೂ ಚಿಟ್ಟೆಯ ಹಾಗಿರಬೇಕು. ಅಷ್ಟು ವೇಗ, ಉತ್ಸಾಹ ಇದ್ದರೆ ಆತ ಅಸಾಮಾನ್ಯವಾದುದನ್ನು ಕೊಡಬಲ್ಲ. ಪಶ್ಚಿಮಘಟ್ಟದ ಕಾಡುಗಳಲ್ಲಿ, ಬಹುತೇಕ ನ್ಯಾಶನಲ್ ಪಾರ್ಕ್ಗಳಲ್ಲಿ ಅಡ್ಡಾಡಿದ್ದಾನೆ. ಮಲಬಾರ್ ಟ್ರೋಜನ್, ಶ್ರೀಲಂಕನ್ ಫೋಗ್ಮೋತ್, ಗ್ರೇಟ್ ಹಾರ್ನ್ಬಿಲ್, ಏಷ್ಯನ್ ಪ್ಯಾರಡೈಸ್, ಡೇರೆ ಹಕ್ಕಿ, ಅಪರೂಪವಾಗಿರುವ ರಣಹದ್ದು... ಇವೆಲ್ಲಾ ಕಾರ್ತೀಕ್ನ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇವನಂಥ ಹುಡುಗರ ಪಕ್ಷಿಪ್ರೇಮ ಆಗಸವಾಗಲಿ, ಕಣ್ಣುಗಳು ಮತ್ತಷ್ಟು ಬೆಳೆದು ಮಿಂಚಾಗಲಿ ಎಂಬುದು ಹಾರೈಕೆ.
- ಪ್ರಸಾದ್ ಶೆಣೈ ಆರ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


