

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೀಗ ಒಂದೇ ಫ್ಲಾಟ್‌ನಲ್ಲಿರಲು ನಿರ್ಧರಿಸಿದ್ದಾರಾ? ಹೌದು ಅನ್ನುತ್ತೆ ಸುದ್ದಿಮೂಲಗಳು.
ಅನುಷ್ಕಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಕೊಹ್ಲಿ ಕ್ರಿಕೆಟ್‌ನಲ್ಲಿ ಬ್ಯುಸಿ. ಹೀಗಿರುವಾಗ ಇಬ್ಬರಿಗೂ ಜತೆಯಾಗಿ ಕಾಲ ಕಳೆಯಲು ಪುರುಸೋತ್ತು ಸಿಗುವುದಿಲ್ಲವಂತೆ. ಆದ್ದರಿಂದಲೇ ಇತ್ತೀಚೆಗೆ ಅನುಷ್ಕಾ ಮತ್ತು ಕೊಹ್ಲಿ ಮುಂಬೈನ ವೆರ್ಸೋವಾದಲ್ಲಿ ಫ್ಲಾಟ್ ಬಾಡಿಗೆಗೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿಯಿದೆ.
ಅನುಷ್ಕಾಳ ಈ ನಿರ್ಧಾರಕ್ಕೆ ಆಕೆಯ ಅಪ್ಪ ಅಮ್ಮನೂ ಸಮ್ಮತಿಸಿದ್ದಾರಂತೆ.
ಆದಾಗ್ಯೂ, ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಸಂಬಂಧವನ್ನು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿರುವಾಗ ಇಬ್ಬರೂ ಜತೆಯಾಗಿ ವಾಸಿಸುತ್ತಿದ್ದಾರೆ ಎಂಬುದು ವದಂತಿ ಮಾತ್ರವಾಗಿ ಉಳಿಯಲು ಸಾಧ್ಯವಿಲ್ಲ!.