Bangladesh

ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಬಾಂಗ್ಲಾದೇಶ, ನೇಪಾಳ ಪ್ರಧಾನಿ ಭಾಗಿ
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ.

ಭಾರತದ ಮೇಲೆ ದಾಳಿ ನಡೆಸಲು ಕಾದಿದ್ದಾರೆ 8 ಸಾವಿರ ಬಾಂಗ್ಲಾ ಉಗ್ರರು!
ಢಾಕಾದ ಕೆಫೆಯೊಂದರ ಮೇಲೆ ದಾಳಿ ನಡೆಸಿ 20 ವಿದೇಶಿಗರ ಸಾವಿಗೆ ಕಾರಣರಾಗಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರಂತೆಯೇ ಸುಮಾರು 8 ಸಾವಿರ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಜ್ದಾಗಿ ನಿಂತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ...

ಢಾಕಾ ದಾಳಿ ನಡೆಸಿದ್ದು ಇಸಿಸ್ ಅಲ್ಲ "ಐಎಸ್ಐ"!
ಸುಮಾರು 20 ಜನರ ಧಾರುಣ ಸಾವಿಗೆ ಕಾರಣವಾದ ಢಾಕಾ ಉಗ್ರದಾಳಿ ನಡೆಸಿದ್ದು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಲ್ಲ ಬದಲಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಎಂಬ ಶಂಕೆ ವ್ಯಕ್ತವಾಗುತ್ತಿದೆ..

ಢಾಕಾ ದಾಳಿ: ಮೃತ ತಾರಿಷಿ ಜೈನ್ ಪಾರ್ಥಿವ ಶರೀರ ಶೀಘ್ರ ಭಾರತಕ್ಕೆ: ಸುಷ್ಮಾ ಸ್ವರಾಜ್
ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಮೃತರಾದ ಭಾರತೀಯ ವಿದ್ಯಾರ್ಥಿನಿ ತಾರಿಷಿ ಜೈನ್ ರ ಮೃತ ದೇಹವನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಬಾಲಿವುಡ್ ನಟಿ ಶ್ರದ್ಧಾಕಪೂರ್ ರನ್ನು ಭೇಟಿಯಾಗಿದ್ದ ಢಾಕಾ ದಾಳಿ ಉಗ್ರ!
ಬಾಂಗ್ಲಾದೇಶ ರಾಜಧಾನಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬರೊಬ್ಬರಿ 20 ವಿದೇಶಿಯರ ಮಾರಣ ಹೋಮ ನಡೆಸಿದ್ದ ಉಗ್ರರ ಪೈಕಿ ಓರ್ವ ಉಗ್ರ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ರನ್ನು ಭೇಟಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ...

ಉಗ್ರ ದಾಳಿ ಕಾರ್ಯಾಚರಣೆ ನೇರಪ್ರಸಾರ ಮಾಡಿದ ವಾಹಿನಿಗಳ ಪರವಾನಗಿ ರದ್ದು?
ಉಗ್ರರ ದಾಳಿ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಿದ ಬಾಂಗ್ಲಾದೇಶ ಸುದ್ದಿವಾಹಿನಿಗಳು ಇದೀಗ ಪ್ರಸಾರ ಸ್ಥಗಿತ ಭೀತಿ ಎದುರಿಸುತ್ತಿದ್ದು, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಾಹಿನಗಳ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗಿದ್ದಾರೆ.

ಢಾಕಾ ಉಗ್ರ ದಾಳಿ: ಕುರಾನ್ ಓದಲಿಲ್ಲ ಎಂದು ಕತ್ತು ಸೀಳಿದರು!
ಬಾಂಗ್ಲಾದೇಶ ರಾಜಧಾನಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಇಸಿಸ್ ಉಗ್ರರು ಕುರಾನ್ ಓದಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಬರೊಬ್ಬರಿ 20 ಮಂದಿ ಒತ್ತೆಯಾಳುಗಳ ಕತ್ತು ಸೀಳಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ...

ದಾಳಿಯಿಂದ ಭಯೋತ್ಪಾದನೆ ವಿರುದ್ಧದ ಬಾಂಗ್ಲಾ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಶೇಖ್ ಹಸೀನಾ
ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಶುಕ್ರವಾರ ನಡೆದಿದ್ದ ಭಯೋತ್ಪಾಕ ದಾಳಿ ಅಂತ್ಯವಾಗಿದ್ದು, ದಾಳಿಯನ್ನು ಪ್ರಧಾನಿ ಶೇಖ್ ಹಸೀನಾ ತೀವ್ರ ಖಂಡಿಸಿದ್ದಾರೆ...

